More

    ಜಿಲ್ಲಾ ಮಟ್ಟದ ಸ್ವಚ್ಛತಾ ಗಾಂಧಿ ಪುರಸ್ಕಾರ

    ಹಾವೇರಿ: ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛತೆ ಹಾಗೂ ಹಸಿರು ನಿರ್ವಹಣೆ ಉತ್ತೇಜಿಸಲು ಜಿಲ್ಲಾಡಳಿತದಿಂದ ಇದೇ ಮೊದಲ ಬಾರಿಗೆ ಕೊಡಮಾಡಿದ ಜಿಲ್ಲಾಮಟ್ಟದ ಸ್ವಚ್ಛತಾ ಗಾಂಧಿ ಪುರಸ್ಕಾರಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಪ್ರಥಮ ಸ್ಥಾನ ಲಭಿಸಿದೆ.

    ಜಿಲ್ಲಾ ಪಂಚಾಯಿತಿ ಕಚೇರಿಗೆ ದ್ವಿತೀಯ, ಗ್ರಾಮೀಣ ನೀರು, ನೈರ್ಮಲ್ಯ ಕಚೇರಿಗೆ ತೃತೀಯ, ಎಸ್​ಪಿ ಹಾಗೂ ಲೋಕೋಪಯೋಗಿ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಗೆ ಸಮಾಧಾನಕರ ಬಹುಮಾನ ಲಭಿಸಿದೆ. ಭಾನುವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದರು.

    ತಾಲೂಕು ಮಟ್ಟದ ಕಚೇರಿ ವಿಭಾಗದಲ್ಲಿ ಕ್ರಮವಾಗಿ ಬ್ಯಾಡಗಿ ತಹಸೀಲ್ದಾರ್ ಕಚೇರಿ, ಹಿರೇಕೆರೂರ ಪಪಂ, ಹಾವೇರಿ ತಾಪಂ ಕಚೇರಿಗೆ ಪ್ರಥಮ ಸ್ಥಾನ, ಹಾನಗಲ್ಲ ತಹಸೀಲ್ದಾರ್ ಕಚೇರಿ, ಹಾವೇರಿ ನಗರಸಭೆ, ಸವಣೂರ ತಾಪಂ ಕಚೇರಿಗೆ ದ್ವಿತೀಯ, ರಾಣೆಬೆನ್ನೂರ ತಾಲೂಕು ಕಚೇರಿ, ಹಾನಗಲ್ಲ ಪುರಸಭೆ, ರಾಣೆಬೆನ್ನೂರ ಹಾಗೂ ಶಿಗ್ಗಾಂವಿ ತಾಪಂಗೆ ತೃತೀಯ ಸ್ಥಾನ ನೀಡಲಾಯಿತು. ಪೊಲೀಸ್ ಠಾಣೆ ವಿಭಾಗದಲ್ಲಿ ಬಂಕಾಪುರ, ಗುತ್ತಲ, ಹಂಸಭಾವಿ, ಕುಮಾರಪಟ್ಟಣ, ತಡಸ ಪೊಲೀಸ್ ಠಾಣೆಗಳು ಅಕ್ಕಿಆಲೂರ, ಕಾಟೇನಹಳ್ಳಿ, ಬಂಕಾಪುರ, ಕದರಮಂಡಲಗಿ, ತಡಕನಹಳ್ಳಿ, ಆರೋಗ್ಯ ಕೇಂದ್ರಗಳು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳನ್ನು ಪಡೆದಿವೆ.

    ತಾಲೂಕು ಮಟ್ಟದ ಕಚೇರಿಗಳ ವಿಭಾಗದಲ್ಲಿ ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಅತ್ತಿಗೇರಿ ಕೃಷಿ ಇಲಾಖೆ, ರಾಣೆಬೆನ್ನೂರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ರಾಣೆಬೆನ್ನೂರ ಸಮಾಜಕಲ್ಯಾಣ ಇಲಾಖೆ, ಹಾನಗಲ್ಲ ಲೋಕೋಪಯೋಗಿ ಇಲಾಖೆಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ, ಸಮಾಧಾನಕರ ಬಹುಮಾನ ಲಭಿಸಿದೆ. ಗ್ರಾಪಂ ವಿಭಾಗದಲ್ಲಿ ದೇವಿಹೊಸೂರ, ರಟ್ಟಿಹಳ್ಳಿ, ಕುಂಚೂರ, ಕೊಡಿಹಾಳ, ಮತ್ತೂರ, ಅಕ್ಕಿಆಲೂರ, ತೆಗ್ಗಿಹಳ್ಳಿ, ಚಿಕ್ಕಮುಳಗುಂದ ಗ್ರಾಪಂಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ದೊರೆತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts