More

    ಅಗಳಕೇರಾ ಸೇತುವೆ ಶೀಘ್ರ ನಿರ್ಮಾಣ:ಸಂಸದ ಕರಡಿ ಸಂಗಣ್ಣ

    ಕೊಪ್ಪಳ: ಲೋಕಸಭಾ ವ್ಯಾಪ್ತಿಯ ಅಗಳಕೇರ ಮತ್ತು ಬನ್ನಿಕೊಪ್ಪ ಬಳಿ ಶೀಘ್ರ ರೈಲ್ವೆ ಮೇಲ್ಸೇತುವೆ ನಿಮಾರ್ಣ ಮಾಡಲಾಗುವುದು ಎಂದು ಸಂಸದ ಕರಡಿ ಸಂಗಣ್ಣ ತಿಳಿಸಿದ್ದಾರೆ.

    ಕೊಪ್ಪಳ ಲೋಕಸಭಾ ವ್ಯಾಪ್ತಿಯ ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಬುಧವಾರ ರೈಲ್ವೆ ಪ್ರಧಾನ ವ್ಯವಸ್ಥಾಪಕರ ಸಂಜೀವ್​ ಕಿಶೋರ್​ ಅವರನ್ನು ಭೇಟಿ ಮಾಡಿ ಚರ್ಚಿಸಿ ಮಾತನಾಡಿದರು.

    ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಳೆದ 10 ವರ್ಷದಲ್ಲಿ ರೈಲ್ವೆ ಕ್ರಾಂತಿಯಾಗಿದೆ. ತಾಲೂಕುಗಳಿಗೆ ರೈಲು ಸಂಚಾರ ಕಲ್ಪಿಸಲಾಗಿದೆ. ರೈಲ್ವೆ ಗೇಟ್​ಗಳ ಬದಲು ಸೇತುವೆ ನಿರ್ಮಿಸಲಾಗುತ್ತಿದೆ. ಗಿಣಿಗೇರಾ&ಮಹೆಬೂಬ್​ ನಗರ ರೈಲ್ವೆ ಯೋಜನೆಗೆ ಪ್ರಸಕ್ತ ಬಜೆಟ್​ನಲ್ಲಿ 300 ಕೋಟಿ ರೂ. ಹಾಗೂ ಗದಗ-&ವಾಡಿ ಯೋಜನೆಗೆ 350 ಕೋಟಿ ರೂ. ಅನುದಾನ ಒದಗಿಸಲಾಗಿದೆ. ನಮ್ಮ ಬದ್ಧತೆಯಂತೆ ರೈಲ್ವೆ ಯೋಜನೆ ಪೂರ್ಣಗೊಳಿಸಲಾಗುತ್ತಿದೆ. ಕ್ಷೇತ್ರದ ಜನತೆಗೆ ನೀಡಿದ ಭರವಸೆ ಈಡೇರಿಸಿದ್ದೇವೆ. ಅಭಿವೃದ್ಧಿ ಕೆಲಸದಿಂದಾಗಿ ಕೊಪ್ಪಳದಲ್ಲಿ ಬಿಜೆಪಿ ಸತತ ಗೆಲುವು ದಾಖಲಿಸುತ್ತಿದೆ. ಮತ್ತೊಮ್ಮೆ ಬಿಜೆಪಿ ಗೆಲ್ಲಿಸಿದಲ್ಲಿ ಮಾದರಿ ಕ್ಷೇತ್ರವಾಗಲಿದೆ ಎಂದರು.

    ಮುನಿರಾಬಾದ್​ ಮೆಹಬೂಬ್​ ನಗರ ಮಾರ್ಗದಲ್ಲಿ ಕಾರಟಗಿಯಿಂದ ಸಿಂಧನೂರುವರೆಗೆ ೆಬ್ರವರಿ ಅಂತ್ಯದೊಳಗೆ ರೈಲು ಸಂಚಾರ ಆರಂಭಿಸಬೇಕು. ಗದಗ-ವಾಡಿ ಯೋಜನೆಯಡಿ ವಾರದಲ್ಲಿ ಕುಷ್ಟಗಿವರೆಗೆ ರೈಲು ಓಡಿಸಬೇಕು. ಗಂಗಾವತಿ&ಅಯೋಧ್ಯೆ ರೈಲು ಬಿಡುಗಡೆಗೆ ಕ್ರಮ ಹಾಗೂ ಭಾನಾಪುರ, ಗಿಣಿಗೇರಾ ಸೇತುವೆ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲು ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.

    ಮುನಿರಾಬಾದ್​ ರೈಲ್ವೆ ನಿಲ್ದಾಣ ಮರು ಅಭಿವೃದ್ಧಿ ಹಾಗೂ ಸೇತುವೆ ಕಾಮಗಾರಿಗೆಫೆ.26ರಂದು ಪ್ರಧಾನಿ ಮೋದಿ ವರ್ಚುವಲ್​ ವೇದಿಕೆ ಮೂಲಕ ಭೂಮಿಪೂಜೆ ನೆರವೇರಿಸಲಿದ್ದಾರೆ. ರೈಲ್ವೆ ಅಧಿಕಾರಿಗಳೊಂದಿಗೆ ಕ್ಷೇತ್ರದ ವಿವಿಧ ಯೋಜನೆಗಳ ಲೋಲಾರ್ಪಣೆ, ಪೂರ್ಣಗೊಳಿಸುವಿಕೆ ಕುರಿತು ಚರ್ಚಿಸಿರುವೆ.

    ಸಂಗಣ್ಣ ಕರಡಿ. ಕೊಪ್ಪಳ ಸಂಸದ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts