More

    ವಕೀಲರ ಹಿತ ರಕ್ಷಣೆ ಕಾಯ್ದೆ ಜಾರಿಗೆ ಆಗ್ರಹಿಸಿ ಕೊಪ್ಪಳದಲ್ಲಿ ಪ್ರತಿಭಟನೆ

    ಕೊಪ್ಪಳ:ವಕೀಲ ಪ್ರೀತಮ್​ ಮೇಲಿನ ಹಲ್ಲೆ ಖಂಡಿಸಿ ಹಾಗೂ ವಕೀಲರ ಹಿತ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಜಿಲ್ಲಾ ವಕೀಲರ ಸಂದ ಪದಾಧಿಕಾರಿಗಳು ಸೋಮವಾರ ನಗರದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿದರು.

    ಚಿಕ್ಕಮಗಳೂರಿನಲ್ಲಿ ವಕೀಲ ಪ್ರೀತಮ್​ ಮೇಲೆ ಪೊಲೀಸರು ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಇದನ್ನು ನಮ್ಮ ಸಂ ತೀವ್ರವಾಗಿ ಖಂಡಿಸುತ್ತದೆ. ದಿನ ಕಳೆದಂತೆ ವಕೀಲರ ಮೇಲೆ ಹಲ್ಲೆಗಳು ಹೆಚ್ಚುತ್ತಿವೆ.

    ಮತ್ತೊಬ್ಬರಿಗೆ ನ್ಯಾಯ ಕೊಡಿಸುವ ನಮಗೆ ನಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಆಗುತ್ತಿಲ್ಲ. ವಿನಾ ಕಾರಣ ಹಲ್ಲೆಗಳು ಆಗುತ್ತಿರುವುದು ಕಳವಳಕಾರಿ ಬೆಳವಣಿಗೆ. ಇದು ಇಡೀ ವಕೀಲ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವೆಂದು ಆಕ್ರೋಶ ವ್ಯಕ್ತಪಡಿಸಿದರು.

    ವಕೀಲ ಪ್ರೀತಮ್​ ಜತೆ ಎಲ್ಲ ವಕೀಲರಿದ್ದಾರೆ. ಅವರಿಗೆ ಆದ ಅನ್ಯಾಯ ಸರಿಪಡಿಸಬೇಕು. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಪೊಲೀಸರ ದೌರ್ಜನ್ಯಕ್ಕೆ ಕ್ರಮ ಕೈಗೊಳ್ಳಬೇಕು. ವಕೀಲರ ಹಿತರಕ್ಷಣಾ ಕಾಯ್ದೆ ಶ್ರೀ ಜಾರಿಗೊಳಿಸಬೇಕು. ಈಮೂಲಕ ವಕೀಲರಿಗೆ ಕಾನೂನು ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆ ಬಳಿಕ ಎಸಿ ಕ್ಯಾಪ್ಟನ್​ ಮಹೇಶ ಮಾಲಗಿತ್ತಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

    ವಕೀಲರ ಸಂದ ಜಿಲ್ಲಾಧ್ಯಕ್ಷ ಎ.ವಿ.ಕಣವಿ, ಕಾರ್ಯದರ್ಶಿ ಬಿ.ವಿ.ಸಜ್ಜನ, ಉಪಾಧ್ಯಕ್ಷ ದಿವಾಕರ ಬಾಗಲಕೋಟೆ, ರಾಜ್ಯ ವಕೀಲರ ಪರಿಷತ್​ ಸದಸ್ಯ ಆಸ್​ೀ ಅಲಿ, ಎಲ್​.ಎಚ್​.ಹಿರೇಗೌಡರ್​, ಸಿ.ಎಂ.ಪೊಲೀಸ್​ ಪಾಟೀಲ್​, ಆರ್​.ಬಿ.ಪಾನಂಟಿ, ವಿ.ಎಂ.ಭೂಸನೂರಮಠ, ಹನುಮಂತರಾವ ಕೆಂಪಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts