More

    ಮಾಹಿತಿ ಬಹಿರಂಗಕ್ಕೆ ಆಗ್ರಹ

    ಕೊಪ್ಪಳ: ಕಟ್ಟಡ ಕಾರ್ಮಿಕರಿಗೆ ಮಂಜೂರಾದ ವಿವಿಧ ಸೌಲಭ್ಯಗಳ ಪಟ್ಟಿ ಹಾಗೂ ಲ್ಯಾಪ್​ ಟಾಪ್​ ವಿತರಿಸಿದ ಮಾಹಿತಿ ಬಹಿರಂಗಕ್ಕೆ ಒತ್ತಾಯಿಸಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ, ರಾಜ್ಯ ಕಟ್ಟಡ ಮತ್ತು ಇತರೆ ನಿಮಾರ್ಣ ಕಾರ್ಮಿಕರ ಫೆಡರೇಶನ್​ ಪದಾಧಿಕಾರಿಗಳು ಮಂಗಳವಾರ ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗಗೆ ಮನವಿ ಸಲ್ಲಿಸಿದರು.

    ವಿವಿಧ ಯೋಜನೆಗಳು ಹಾಗೂ ಲ್ಯಾಪ್​ಟಾಪ್​ ವಿತರಣೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವ ಶಂಕೆ ಇದೆ. ಹೀಗಾಗಿ ಈ ಬಗ್ಗೆ ಸಂಟನೆಗಳಿಗೆ ಪೂರ್ಣ ಮಾಹಿತಿ ಒದಗಿಸಬೇಕು. 2023 ಸೆಪ್ಟಂಬರ್​ನಿಂದ ಪ್ರಸ್ತುತವರೆರಿನ ವಿವರ ಬೇಕು. ಕಾರ್ಮಿಕರಿಗೆ ಮಂಜೂರಾದ ವಿವಿಧ ಸೌಲಭ್ಯಗಳು ಹಾಗೂ ಲ್ಯಾಪ್​ಟಾಪ್​ ವಿತರಣೆ ಪಟ್ಟಿ ನೀಡಬೇಕು ಎಂದು ಒತ್ತಾಯಿಸಿದರು.

    ಸಂಟನೆಗಳ ಪದಾಧಿಕಾರಿಗಳಾದ ಕಾಸಿಂ ಸರ್ದಾರ, ಎಸ್​.ಎ.ಗಾರ್​, ತುಕಾರಾಮ್​ ಪಾತ್ರೋಟಿ, ನೂರ್​ಸಾಬ್​ ಹೊಸಮನಿ, ರಾಜಪ್ಪ ಚೌವ್ಹಾಣ್​ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts