More

    ಎಸ್ಟಿ ಮೀಸಲಿಗೆ ಆಗ್ರಹಿಸಿ ಸಮಾವೇಶ ಫೆ.25ರಂದು

    ಕೊಪ್ಪಳ: ಗಂಗಾಮತ ಹಾಗೂ ಇತರ 28 ಉಪ ಪಂಗಡಗಳಿಗೆ ಎಸ್ಟಿ ಮೀಸಲು ಕಲ್ಪಿಸಲು ಆಗ್ರಹಿಸಿ ಫೆ.25ರಂದು ಕಲಬುರ್ಗಿಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೊಪ್ಪಳ ಜಿಲ್ಲಾ ಗಂಗಾಮತ್ಥರ ಸಂದ ಅಧ್ಯಕ್ಷ ಸೋಮಣ್ಣ ಬಾರಕೇರ ಮನವಿ ಮಾಡಿದರು.

    40 ವರ್ಷದಿಂದ ನಮ್ಮ ಬೇಡಿಕೆ ಈಡೇರಿಕೆಗೆ ಆಳುವ ಸರ್ಕಾರಗಳನ್ನು ಒತ್ತಾಯಿಸುತ್ತಿದ್ದೇವೆ. ಮೂರ್ನಾಲ್ಕು ಬಾರಿ ರಾಜ್ಯ ಸರ್ಕಾರಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಆದರೆ, ಗಂಗಾಮತ ಎಂಬ ಪದದಿಂದ ಸಮಸ್ಯೆ ಆಗುತ್ತಿದೆ. ದೇಶ ಹಾಗೂ ರಾಜ್ಯದ ಒಂದೊಂದು ಪ್ರದೇಶದಲ್ಲಿ ಒಂದೊಂದು ಹೆಸರಿನಿಂದ ಸಮುದಾಯ ಗುರುತಿಸುತ್ತಾರೆ. ಕಬ್ಬೇರ, ಕಬ್ಬಲಿಗ, ಕೋಲಿ, ಮಡ್ಡೇರ, ಅಂಬಿಗ ಎಂದೆಲ್ಲ 28 ಹೆಸರುಗಳಿವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್​ ಷಾ ಮೀಸಲು ಕಲ್ಪಿಸುವ ಭರವಸೆ ನೀಡಿದ್ದಾರೆ. ಸದ್ಯ ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲು ಒತ್ತಾಯಿಸಿದ್ದು, ಸಿಎಂ ಸಿದ್ದರಾಮಯ್ಯ ಒಪ್ಪಿದ್ದಾರೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕಲಬುರ್ಗಿಯ ಎನ್​.ವಿ.ಕಾಲೇಜು ಮೈದಾನದಲ್ಲಿ ಫೆ.25ರಂದು ಬೃಹತ್​ ಸಮಾವೇಶ ಹಮ್ಮಿಕೊಂಡಿದ್ದೇವೆ. ಅಂಬಿಗರ ಚೌಡಯ್ಯ ಗುರು ಪೀಠದ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಶ್ರೀ ಮಲ್ಲಣ್ಣಪ್ಪ ಮುತ್ಯ ತೋಸನಳ್ಳಿ ಸ್ವಾಮೀಜಿ, ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ, ಡಿಸಿಎಂ ಡಿ.ಕೆ.ಶಿವಕುಮಾರ ಸೇರಿ ಸಚಿವರು, ಸಂಸದರು, ಶಾಸಕರು ಭಾಗಿಯಾಗಲಿದ್ದಾರೆ. ಸುಮಾರು 4-5 ಲಕ್ಷ ಜನ ಸೇರುವ ನಿರೀೆ ಇದೆ. ಕೊಪ್ಪಳದಿಂದ 20 ಸಾವಿರ ಜನ ತೆರಳಲಿದ್ದೇವೆ. ಗುಜರಾತ್​, ಉತ್ತರ ಪ್ರದೇಶ, ಮಧ್ಯ ಪ್ರದೇಶ ಸೇರಿ ಇತರ ರಾಜ್ಯಗಳಲ್ಲಿ ನಮ್ಮ ಸಮುದಾಯಕ್ಕೆ ಪರಿಶಿಷ್ಟ ಜಾತಿ ಮಾನ್ಯತೆ ನೀಡಲಾಗಿದೆ. ರಾಜ್ಯದಲ್ಲಿ ಎಸ್ಟಿ ಮೀಸಲು ನೀಡಲು ಹಕ್ಕೊತ್ತಾಯ ಮಾಡುತ್ತೇವೆ ಎಂದರು.

    ಪದಾಧಿಕಾರಿಗಳಾದ ರಾಜಶೇಖರ ಮುಸ್ಟೂರು, ಪರಶುರಾಮ ಮಡ್ಡೇರ, ಟಿ.ಜೆ. ರಾಜಶೇಖರ, ಯಮನಪ್ಪ ಕಬ್ಬೇರ, ಹನುಮಂತ ಗಿಡ್ಡಾಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts