More

    ಮಾದಿಗ ಮಹಾಸಭಾ ಸಂಚಾಲಕರ ಸಂಭ್ರಮ ಆಚರಣೆ

    ಕೊಪ್ಪಳ: ಕೊಟ್ಟ ಮಾತಿನಂತೆ ರಾಜ್ಯ ಸರ್ಕಾರ ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಅಂಗೀಕರಿಸಿ ಕೇಂದ್ರಕ್ಕೆ ಶಿಾರಸ್ಸು ಮಾಡಿದೆ. ಅದರಂತೆ ಕೇಂದ್ರ ಸರ್ಕಾರ ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತಂದು ಒಳ ಮೀಸಲು ಕಲ್ಪಿಸಬೇಕೆಂದು ಮಾದಿಗ ಮಹಾಸಭಾ ಸಂಚಾಲಕ ಮಲ್ಲಿಕಾರ್ಜುನ ಪೂಜಾರ ಒತ್ತಾಯಿಸಿದರು.

    ನಾಲ್ಕು ದಶಕಗಳಿಂದ ಮೀಸಲಾತಿ ಸಂಬಂಧ ಹೋರಾಟ ನಡೆಸಿದ್ದೇವೆ. ಸದಾನಂದ ಗೌಡ ಸಿಎಂ ಇದ್ದಾಗ ವರದಿ ಸಲ್ಲಿಕೆಯಾಗಿದೆ. ಅಲ್ಲಿಂದ ಈವರೆಗೂ ಆಳಿದ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿಲ್ಲ. ಇನ್ನು ಕಳೆದ ಅವಧಿಯಲ್ಲಿ ಬಿಜೆಪಿ ಸರ್ಕಾರ ಕೊನೇ ಳಿಗೆಯಲ್ಲಿ ಸದಾಶಿವ ವರದಿ ಬಿಟ್ಟು ಒಳ ಮೀಸಲಾತಿಗಾಗಿ ಶಿಾರಸ್ಸು ಮಾಡಿತು. ಆದರೆ, ಕಾನೂನು ಬದ್ಧವಾಗಿ ಪ್ರಸ್ತಾವನೆ ಸಲ್ಲಿಕೆಯಾಗದ ಕಾರಣ ಕೇಂದ್ರ ತಿರಸ್ಕರಿಸಿದೆ. ಚುನಾವಣೆ ಕಾರಣ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಲಾಯಿತು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

    ಸದ್ಯ ಸಂವಿಧಾನದ 341(ಡಿ) ಕಲಂಗೆ ತಿದ್ದುಪಡಿ ಮಾಡಿದಲ್ಲಿ ರಾಜ್ಯ ಸರ್ಕಾರಕ್ಕೆ ಒಳ ಮೀಸಲು ಕಲ್ಪಿಸಲು ಅವಕಾಶ ಸಿಗದಲಿದೆ. ಸುಪ್ರೀಂ ಕೋರ್ಟ್​ನಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದೆ. ಆದರೂ, ಕೇಂದ್ರ ತನ್ನ ಜವಾಬ್ದಾರಿ ನಿರ್ವಹಿಸಬೇಕಿದೆ. ಬಿಜೆಪಿಗೆ ಒಳ ಮೀಸಲು ಕಲ್ಪಿಸುವ ಉದ್ದೇಶ ಇದ್ದಿದ್ದರೆ ಕಳೆದ ಅವಧಿಯಲ್ಲಿ ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಜಾರಿ ಮಾಡಲಿಲ್ಲ. ಕಾಂಗ್ರೆಸ್​ ನಮ್ಮ ಬಹುದಿನದ ಬೇಡಿಕೆ ಈಡೇರಿಸಿದೆ ಎಂದರು.

    ಸಂಭ್ರಮ ಆಚರಣೆ: ಒಳ ಮೀಸಲು ವರದಿ ರಾಜ್ಯ ಸರ್ಕಾರ ಅಂಗೀಕರಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಅಶೋಕ ವೃತ್ತದಲ್ಲಿ ದಲಿತ ಸಂಟನೆಗಳ ಮುಖಂಡರು ಸಂಭ್ರಮ ಆಚರಿಸಿದರು. ಬಹುದಿನದ ಬೇಡಿಕೆಗೆ ರಾಜ್ಯ ಮನ್ನಣೆ ನೀಡಿದೆ. ಕೇಂದ್ರ ಸರ್ಕಾರ ಅಂಗೀಕಾರ ಮಾಡಬೇಕು ಎಂದು ಆಗ್ರಿಹಿಸಿದರು. ಸಂಚಾಲಕರಾದ ಹನುಮಂತಪ್ಪ ಮ್ಯಾಗಳಮನಿ, ಯಲ್ಲಪ್ಪ ಹಳೇಮನಿ, ನಿಂಗಜ್ಜ ಶಹಾಪುರ, ಶಿವಣ್ಣ ಹಟ್ಟಿ, ಗಾಳೆಪ್ಪ ಹಿಟ್ನಾಳ, ಮಾರುತಿ ಚಾಮಲಾಪೂರ, ಲಕ್ಷ$್ಮಣ ಗುಳದಳ್ಳಿ, ಈರಪ್ಪ ಕಂಪಸಾಗರ, ಆನಂದ ದೊಡ್ಡಮನಿ, ಹನುಮಂತ ಹೊಸಳ್ಳಿ, ಭೀಮಣ್ಣ ಹಿಟ್ನಾಳ, ನಾಗರಾಜ ಮ್ಯಾಗೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts