More

    ಅಂಜನಾದ್ರಿಯಲ್ಲಿ ಮೊಳಗಿದ‌ ಹನುಮ ಜಪ, ಲಕ್ಷಾಂತರ ಭಕ್ತರಿಂದ ಮಾಲೆ ವಿಸರ್ಜನೆ

    ಕೊಪ್ಪಳ: ಹನುಮನುದಿಸಿದ ನಾಡು ಅಂಜನಾದ್ರಿಯಲ್ಲಿ ಹನುಮ ಭಕ್ತರ ದಂಡು ಬೆಳಗ್ಗೆಯಿಂದಲೇ ದಾಂಗುಡಿ ಇಟ್ಟಿದ್ದು, ಅಂಜನಿಸುತನ ದರ್ಶನ ಪಡೆದು ಮಾಲೆ ವಿಸರ್ಜಿಸುವ ಕಾರ್ಯ ಸುಸೂತ್ರವಾಗಿ ಆರಂಭವಾಗಿದೆ.

    ರಾಮಾಯಣದ ಆಂಜನೇಯ ಜನಿಸಿದ ನಾಡಾದ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಹನುಮ ಮಾಲಾ ವ್ರತಧಾರಿಗಳ ಮಾಲೆ ವಿಸರ್ಜನೆ ಕಾರ್ಯ ಪ್ರತಿ ವರ್ಷದಂತೆ ಇಂದು (ಡಿ.24)ನಡೆಯುತ್ತಿದೆ.


    ಅಂಜನಾದ್ರಿಯಲ್ಲಿ ಮೊಳಗಿದ‌ ಹನುಮ ಜಪ, ಲಕ್ಷಾಂತರ ಭಕ್ತರಿಂದ ಮಾಲೆ ವಿಸರ್ಜನೆ

    ಆಂಜನೇಯ ಜನಿಸಿದ ಸ್ಥಳ ವಿವಾದ ಸಂಬಂಧ ಕಳೆದ ವರ್ಷ ಸುದ್ದಿಯಲ್ಲಿ ಅಂಜನಾದ್ರಿ ಬೆಟ್ಟ ಹಿಂದೆಗಿಂತಲೂ ಗಮನ ಸೆಳೆದಿದೆ. ಪೂಕರವಾಗಿ ಜಿಲ್ಲಾಡಳಿತ ಈ ವರ್ಷ ಮಾಲಾ ವಿಸರ್ಜನೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದು, ಶನಿವಾರದಿಂದಲೇ ಮಾಲಾಧಾರಿಗಳು ಬೆಟ್ಟದ ಹತ್ತಿರ ಜಮಾಯಿಸಿದ್ದಾರೆ.

    ಅಂಜನಾದ್ರಿಯಲ್ಲಿ ಮೊಳಗಿದ‌ ಹನುಮ ಜಪ, ಲಕ್ಷಾಂತರ ಭಕ್ತರಿಂದ ಮಾಲೆ ವಿಸರ್ಜನೆ

    ಬೆಳಗಾವಿ, ಕಲಬುರ್ಗಿ, ಬೀದರ್, ಗದಗ, ಹುಬ್ಬಳ್ಳಿ, ಹಾವೇರಿ, ಬಳ್ಳಾರಿ, ವಿಜಯನಗರ, ದಾವಣಗೆರೆ ಸೇರಿ ರಾಜ್ಯದ ವಿವಿಧ ಮೂಲೆಗಳಿಂದ ಅಂಜನಿಸುತನ ಭಕ್ತರು ಆಗಮಿಸುತ್ತಿದ್ದಾರೆ. ಪಾದಾಯಾತ್ರೆ ಮೂಲಕ ಬಂದವರು ಶನಿವಾರವೇ ಬೆಟ್ಟ ತಲುಪಿ ಇಂದು ಬೆಳಗ್ಗೆಯಿಂದ ಸ್ವಾಮಿ ದರ್ಶನ ಪಡೆದು ನಿರ್ಗಮಿಸುತ್ತಿದ್ದಾರೆ

    ಶ್ರೀರಾಮ, ಆಂಜನೇಯನ ನೆನಹು
    ಮಾಲಾಧಾರಿಗಳು ಶ್ರೀರಾಮ, ಆಂಜನೇಯ ಹಾಗೂ ಪ್ರಧಾನಿ ನರೇಂದ್ರ ಮೋದಿ ಫೋಟೋ ಹಿಡಿದು ಜೈ ಶ್ರೀರಾಮ ಮಂತ್ರ ಜಪಿಸುತ್ತ ಸಾಗುವುದು ಕಂಡುಬಂತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts