More

    ಆನೆಗೊಂದಿ ಉತ್ಸವ ಆಚರಣೆಗೆ ಕ್ರಮ:ತಂಗಡಗಿ

    ಕೊಪ್ಪಳ: ಕನಕಗಿರಿ ಉತ್ಸವದಂತೆ ಆನೆಗೊಂದಿ ಉತ್ಸವ ಆಚರಿಸಲಾಗುವುದು. ಈಗಾಗಲೇ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಜತೆ ಮಾತುಕತೆ ನಡೆಸಿದ್ದು, ಶ್ರೀ ದಿನಾಂಕ ನಿಗದಿಪಡಿಸಲಾಗುವುದೆಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು.

    ಅಧಿಕಾರಿಗಳೊಂದಿಗೆ ಸಭೆ ನಡೆಸಿ ದಿನಾಂಕ ಅಂತಿಮಗೊಳಿಸುತ್ತೇವೆ. ಯಾವ ಉತ್ಸವ ರ್ನಿಲಸುತ್ತಿಲ್ಲ. ಮಾರ್ಚ್​ 15ರೊಳಗೆ ಆನೆಗೊಂದಿ ಉತ್ಸವ ನಡೆಯಲಿದೆ. ಎಲ್ಲ ಉತ್ಸವಗಳಿಗೆ ರ್ನಿದಿಷ್ಟ ದಿನಾಂಕ ನಿಗದಿಪಡಿಸಿ ಪ್ರತಿ ವರ್ಷ ಆಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

    ಎಡದಂಡೆ ನಾಲೆಗೆ ಶ್ರೀ ಕುಡಿವ ನೀರು ಬಿಡುಗಡೆ ಮಾಡಲಾಗುವುದು. ಐಸಿಸಿ ಸಭೆ ನಡೆಸಿ ನಿರ್ಧಾರ ತಿಳಿಸುವೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇದ್ದು, ಪರಿಹಾರ ಕ್ರಮ ಕೈಗೊಳ್ಳು ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ. ಕೊಳವೆ ಬಾವಿಗಳಲ್ಲಿ ನೀರು ಬತ್ತುತ್ತಿದೆ. ಪರ್ಯಾಯ ಮಾರ್ಗ ಕಂಡುಕೊಳ್ಳಲಾಗುವುದು ಎಂದರು.

    ಅಂಜನಾದ್ರಿ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಅನುದಾನ ನೀಡಿಲ್ಲ. ಕೇವಲ ಘೋಷಣೆ ಮಾಡಿದೆ. ಸದ್ಯ 100 ಕೋಟಿ ರೂ. ಕ್ರಿಯಾ ಯೋಜನೆ ಸಿದ್ಧವಾಗಿದೆ. ಈಗಾಗಲೇ 20 ಕೋಟಿ ರೂ.ಕಾಮಗಾರಿ ನಡೆಯುತ್ತಿವೆ. ಇದರ ಜತೆಗೆ ಬಜೆಟ್​ನಲ್ಲಿ 100 ಕೋಟಿ ರೂ. ಹೆಚ್ಚುವರಿ ಘೋಷಣೆ ಮಾಡಿದ್ದೇವೆ. ಒಟ್ಟು 200 ಕೋಟಿ ರೂ. ನೀಡಲಾಗುವುದು.

    -ಶಿವರಾಜ ತಂಗಡಗಿ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts