More

    ಚಪಾತಿ ತಿಂದು ಜಡ್ಜ್​ ಮತ್ತವರ ಮಗನ ಸಾವಿನ ಪ್ರಕರಣಕ್ಕೆ ಬೆಚ್ಚಿಬೀಳಿಸುವ ಟ್ವಿಸ್ಟ್​; ಎಲ್ಲಿ ಹೋಗಿ ತಲುಪತ್ತೆ ಕೇಸ್​?

    ಬೇತುಲ್​: ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶ ಮಹೇಂದ್ರ ಕುಮಾರ್‌ ತ್ರಿಪಾಠಿ ಮತ್ತು ಅವರ ಮಗ ಅಭಿನಯ್​ ರಾಜ್​ ತ್ರಿಪಾಠಿ ಮನೆಯಲ್ಲಿ ಚಪಾತಿ ತಿಂದು ಸಾವನ್ನಪ್ಪಿದ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ.

    ಕಳೆದ ವಾರ ರಾತ್ರಿ ಮನೆಯಲ್ಲಿ ಊಟ ಮಾಡಿದ ಅಪ್ಪ-ಮಗನ ಆರೋಗ್ಯ ತೀವ್ರ ಹದಗೆಟ್ಟಿತ್ತು. ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಿದರೂ ಇಬ್ಬರು ಉಳಿಯಲಿಲ್ಲ. ಗೋಧಿಯಲ್ಲಿ ಸೇರಿದ್ದ ವಿಷಕಾರಿ ಅಂಶದಿಂದ ಫುಡ್​ ಪಾಯ್ಸನಿಂಗ್​ ಆಗಿದೆ ಎಂದು ವೈದ್ಯರು ಹೇಳಿದ್ದರು.

    ಆದರೆ ಈ ಕೇಸ್​​ಗೆ ಈಗೊಂದು ಟ್ವಿಸ್ಟ್​ ಸಿಕ್ಕಿದೆ. ಪೊಲೀಸರು ಮಹಿಳೆ ಹಾಗೂ ಮಂತ್ರವಾದಿಯನ್ನು ಸೇರಿ ಒಟ್ಟು ಆರುಮಂದಿಯನ್ನು ಬಂಧಿಸಿದ್ದಾರೆ.  ಈ ಬಂಧಿತ ಮಹಿಳೆ ಚಿಂದ್ವಾರಾದ ನಿವಾಸಿ ಎನ್ನಲಾಗಿದೆ. ಈಕೆಯೇ ಇವರಿಬ್ಬರಿಗೂ ವಿಷ ಹಾಕಿದ್ದಾಳೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮುಜಾಹಿದ್ದೀನ್​​ ಅಂತ್ಯಗೊಂಡಿದೆ ಎಂದು ಭಾರತ ಭಾವಿಸುವ ಅಗತ್ಯವಿಲ್ಲ: ಹಿಜ್ಬುಲ್​ ಉಗ್ರರಿಂದ ಬೆದರಿಕೆ

    ನ್ಯಾಯಾಧೀಶನ ಪತ್ನಿ ಹಾಗೂ ಇನ್ನೋರ್ವ ಮಗ ಉಳಿದುಕೊಂಡಿದ್ದು, ಅವರಿಂದ ಪಡೆದ ಹೇಳಿಕೆ ಅನ್ವಯ ಪೊಲೀಸರು ವಿಚಾರಣೆ ಶುರು ಮಾಡಿದ್ದರು. ಈ ಮಹಿಳೆ ಜುಲೈ 20ರಂದು ಜಡ್ಜ್​​ಗೆ ಒಂದು ಬ್ಯಾಗ್​​ನಲ್ಲಿ ಗೋಧಿ ಹಿಟ್ಟು ಕೊಟ್ಟಿದ್ದಳು. ಅದನ್ನು ಮನೆಗೆ ತಂದಿದ್ದ ದಿನವೇ ಜಡ್ಜ್​ ಪತ್ನಿ ಚಪಾತಿ ಮಾಡಿದ್ದರು. ಅದನ್ನು ನ್ಯಾಯಾಧೀಶ ಹಾಗೂ ಅವರ ಇಬ್ಬರು ಮಕ್ಕಳು ತಿಂದಿದ್ದರು. ಆದರೆ ರಾತ್ರಿಯೇ ಅವರಿಗೆ ವಾಂತಿಯಾಗಲು ಶುರುವಾಯಿತು. ಇದನ್ನೂ ಓದಿ: ನನ್ನನ್ನು ಕಂಡರೆ ತ್ರಿಷಾಗೆ ಭಯ … ಮೀರಾ ಮಿಥುನ್​ ಹೀಗೆ ಹೇಳಿದ್ದು ಯಾಕೆ?

    ಜುಲೈ 25ರಂದು ಜಡ್ಜ್​ ಹಾಗೂ ಅವರ ಹಿರಿಯ ಮಗನ ಆರೋಗ್ಯ ತೀರ ಹದಗೆಟ್ಟಿತ್ತು. ಅವರಿಬ್ಬರನ್ನೂ ನಾಗ್ಪುರ ಆಸ್ಪತ್ರೆಗೆ ದಾಖಲಿಸಲು ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಸೂಚಿಸಿದರು. ಆದರೆ ಅದಕ್ಕೂ ಮೊದಲೇ ಮಹೇಂದ್ರ ಕುಮಾರ್‌ ತ್ರಿಪಾಠಿ ಸಾವನ್ನಪ್ಪಿದರು. ಅವರ ಹಿರಿಯ ಮಗ ನಾಗ್ಪುರಕ್ಕೆ ಕರೆತರುತ್ತಿದ್ದಂತೆ ಮೃತಪಟ್ಟಿದ್ದರು.

    ಗೋಧಿ ಹಿಟ್ಟು ಕೊಟ್ಟ ಮಹಿಳೆ, ಆಕೆಯ ಕಾರು ಡ್ರೈವರ್​, ಓರ್ವ ಮಂತ್ರವಾದಿಯನ್ನು ರೇವಾದಲ್ಲಿ ಬಂಧಿಸಿ ಬೇತುಲ್​ಗೆ ಕರೆತರಲಾಗಿದೆ. ಅವರ ಹೇಳಿಕೆಯನ್ನಾಧರಿಸಿ ಮತ್ತೂ ಮೂವರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಸಿಮಲಾ ಪ್ರಸಾದ್​ ತಿಳಿಸಿದ್ದಾರೆ. (ಏಜೆನ್ಸೀಸ್​)

    ಮನೆಯಲ್ಲಿ ಚಪಾತಿ ತಿಂದ ನ್ಯಾಯಾಧೀಶ, ಮಗನ ಸಾವು!

    ಇಂದು ವಿಶ್ವ ಹುಲಿ ದಿನ: ಗಿನ್ನೆಸ್​ ದಾಖಲೆಗೆ ಸೇರ್ಪಡೆಯಾಗಿದೆ 2018ರ ಹುಲಿ ಗಣತಿ; ಏನಿದರ ವೈಶಿಷ್ಟ್ಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts