More

    ಪ್ರತಿ ಹಳ್ಳಿಯ ಸಮಗ್ರ ಅಭಿವೃದ್ಧಿ ಮುಖ್ಯ ಉದ್ದೇಶ

    ಚಿಕ್ಕಮಗಳೂರು: ತಾಲೂಕಿನ ಮಲ್ಲೇನಹಳ್ಳಿ ಬಿಂಡಿಗ ದೇವಿರಮ್ಮ ದೇವಾಲಯ ಹಾಗೂ ಸುತ್ತಲಿನ ರಸ್ತೆ ಅಭಿವೃದ್ದಿಗೆ 6 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗಳು ಶೀಘ್ರ ಆರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

    ತಾಲೂಕಿನ ಮಲ್ಲೇನಹಳ್ಳಿ, ತೊಗರಿಹಂಕಲ್, ದಾಸರಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಭಾನುವಾರ 17.5 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಪೂರ್ಣಗೊಂಡ ಕಾಂಕ್ರೀಟ್ ರಸ್ತೆಗಳನ್ನು ಉದ್ಘಾಟಿಸಿ ಮಾತನಾಡಿ, ದೇವಾಲಯದ ಸುತ್ತ ರಸ್ತೆ, ಮೆಟ್ಟಿಲು, ದೇವಿರಮ್ಮ ಬೆಟ್ಟದ ರಸ್ತೆ ಅಭಿವೃದ್ಧಿಯಾಗಲಿದೆ. ಜಿಲ್ಲೆಯ ಪ್ರತಿ ಹಳ್ಳಿಗಳ ಸಮಗ್ರ ಅಭಿವೃದ್ಧಿ ಮುಖ್ಯ ಉದ್ದೇಶ ಎಂದರು.

    ನಿರ್ವಾಣಸ್ವಾಮಿ ಮಠದ ರಸ್ತೆ ಡಾಂಬರೀಕರಣಕ್ಕೆ 30 ಲಕ್ಷ , ಅರಸಿನಗುಪ್ಪೆ- ದೇವಿರಮ್ಮ ದೇವಾಲಯ ರಸ್ತೆ 50 ಲಕ್ಷ, ಮಲ್ಲೇನಹಳ್ಳಿಯಿಂದ ಹಳೇ ಬಿಂಡಿಗ ರಸ್ತೆ 25 ಲಕ್ಷ, ಹಕ್ಕಿಪಿಕ್ಕಿ ಕಾಲನಿ ಕಾಂಕ್ರಿಟೀಕರಣ 50 ಲಕ್ಷ, ಕೊಂಬುಗತ್ತಿ- ಕಾಮೇನಹಳ್ಳಿ ರಸ್ತೆೆ 1 ಕೋಟಿ, ಗಾಳಿಪೂಜೆಯಲ್ಲಿ 10 ಲಕ್ಷ ವೆಚ್ಚದಲ್ಲಿ ನಿರ್ವಣಗೊಂಡ ಅಂಬೇಡ್ಕರ್ ಭವನ ಹಾಗೂ ನಾಗೇನಹಳ್ಳಿ-ಮುತ್ತಿನಪುರ, ದೇವರಹಳ್ಳಿ ರಸ್ತೆಗೆ 1.5 ಕೋಟಿ, ಬಿಂಡಿಗ ದೇವಿರಮ್ಮ ದೇವಾಲಯ ರಸ್ತೆ, ಮೆಟ್ಟಿಲು ಸೇರಿ ವಿವಿಧ ಕಾಮಗಾರಿಗೆ 6 ಕೋಟಿ ರೂ. ವೆಚ್ಚವಾಗಲಿದೆ ಎಂದರು.

    ನರೇಗಾ ಯೋಜನೆಯಡಿ ಪ್ರತಿ ಗ್ರಾಪಂ ಮಟ್ಟದಲ್ಲಿ ಇಂಗು ಗುಂಡಿ ಹಾಗೂ ತರಕಾರಿ ಕೃಷಿ, ಕೈತೋಟಗಳ ನಿರ್ವಣಕ್ಕಾಗಿ ಸಹಾಯಧನ ಒದಗಿಸಲಾಗುವುದು ಎಂದರು.

    ಜನರ ಸಮಸ್ಯೆಗಳನ್ನು ಅರಿತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದು, ಮುಂದಿನ ದಿನಗಳಲ್ಲೂ ಮತ್ತಷ್ಟು ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗುವುದು ಎಂದು ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts