More

    ನಾವಿಕನಿಲ್ಲದ ದೋಣಿಯಂತಾದ ಜಿಲ್ಲಾ ಕಾಂಗ್ರೆಸ್: ಕೈ ಪಾಳಯದಲ್ಲಿ ನಿಂತಿಲ್ಲ ಕಿತ್ತಾಟ, ಡಿಸಿಸಿ ಅಧ್ಯಕ್ಷರಿಲ್ಲ, ಸಂಟನೆಯೂ ಆಗ್ತಿಲ್ಲ

    ಕಾರಂಗುಟ್ಟೆ ನಾರಾಯಣಸ್ವಾಮಿ ಕೋಲಾರ
    ಸಿದ್ದರಾಮೋತ್ಸದ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣೆಗೆ ರಣಕಹಳೆ ಮೊಳಗಿಸಿದೆ. ಆದರೆ ಕೋಲಾರದಲಿ ಕೈ ಪಾಳಯದಲ್ಲಿ ಬಣರಗಳೆ ಮುಂದುವರಿದಿದೆ. ಚುನಾವಣೆಗೆ 8 ತಿಂಗಳು ಬಾಕಿ ಇದ್ದರೂ ಜಿಲ್ಲಾ ಕಾಂಗ್ರೆಸ್‌ಗೆ ಅಧ್ಯಕ್ಷರ ನೇಮಕವಾಗಿಲ್ಲ. ಕಳೆದ ಏಪ್ರಿಲ್‌ನಲ್ಲಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನಂತರ ಪಕ್ಷದ ಸ್ಥಿತಿ ನಾವಿಕನಿಲ್ಲದೆ ದಿಕ್ಕಾಪಾಲಾದ ದೋಣಿಯಂತಾಗಿದೆ.

    ದಶಕಗಳ ಕಾಲ ರಾಷ್ಟ್ರವನ್ನಾಳಿದ ಕಾಂಗ್ರೆಸ್‌ಗೆ ಕೋಲಾರ ಭದ್ರಕೋಟೆ. ಸಿ.ಬೈರೇಗೌಡರ ಕಾಲದಲ್ಲಿ ಜನತಾ ಪರಿವಾರ ದರ್ಬಾರು ನಡೆಸಿತ್ತಾದರೂ, ನಂತರದ ದಿನಗಳಲ್ಲಿ ಕಾಂಗ್ರೆಸ್‌ನದ್ದೇ ಅಧಿಪತ್ಯ. ಈಗಲೂ ಆರರಲ್ಲಿ ನಾಲ್ಕು ಶಾಸಕರು ಕಾಂಗ್ರೆಸ್ಸಿಗರೇ ಇದ್ದಾರೆ. ಇನ್ನು ಜೆಡಿಎಸ್‌ನಿಂದ ಉಚ್ಚಾಟಿತರಾಗಿರುವ ಶಾಸಕ ಕೆ.ಶ್ರೀನಿವಾಸಗೌಡರೂ ಕೈಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆಂದ ಮೇಲೂ ಜಿಲ್ಲಾನಾಯಕರ ಹಾವು-ಮುಂಗುಸಿ ಕಿತ್ತಾಟ ಕೊನೆಯಾಗಿಲ್ಲ. ಕೆ.ಎಚ್.ಮುನಿಯಪ್ಪ ಮತ್ತು ರಮೇಶ್‌ಕುಮಾರ್ ಬಣಗಳ ಬಡಿದಾಟ ಅಂತ್ಯವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.

    ಸಿದ್ದರಾಮಯ್ಯ ಸ್ಪರ್ಧೆಯಿಂದ ಕೆ.ಎಚ್.ಬಣ ತಣ್ಣಗಾಗಬಹುದೆಂದು ರಮೇಶ್‌ಕುಮಾರ್ ಬಣ ಭಾವಿಸಿತ್ತೇನೋ! ಆದರೆ ಇತ್ತೀಚೆಗೆ ಪಕ್ಷ ನಡೆಸಿದ ಪ್ರತಿಭಟನೆ, ಸಿದ್ದರಾಮೋತ್ಸವ ಪೂರ್ವಭಾವಿ ಸಭೆಯಲ್ಲಿ ಬಣಗಳ ಕಚ್ಚಾಟ ಬೀದಿ ರಂಪಾಟವಾಗಿತ್ತು. ಇನ್ನು ಬ್ಲಾಕ್ ಕಾಂಗ್ರೆಸ್, ಮುಂಚೂಣಿ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಎರಡೂ ಗುಂಪುಗಳಲ್ಲಿ ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದಾರೆ. ಪಕ್ಷದ ಕಾರ್ಯಕ್ರಮಗಳು ಕಾಟಾಚಾರಕ್ಕೆ ನಡೆಯುತ್ತಿವೆ. ಜನರ ಸಮಸ್ಯೆಗಳಿಗೆ ದ್ವನಿಯಾಗಿ ಹೋರಾಡಬೇಕಿದ್ದ ನಾಯಕರು ಮತ್ತು ಅವರ ಬೆಂಬಲಿಗರು ಅಸ್ತಿತ್ವಕ್ಕಾಗಿ ಹಾರಾಡುತ್ತಿದ್ದಾರೆ. ಎಂಎಲ್ಸಿ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಸಿಗದ ಕಾರಣ ಡಿಸಿಸಿ ಅಧ್ಯಕ್ಷರಾಗಿದ್ದ ಚಂದ್ರಾರೆಡ್ಡಿ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದರು. ಕಳೆದ ಜನವರಿ 26ರಿಂದ ಹಂಗಾಮಿ ಅಧ್ಯಕ್ಷರನ್ನಾಗಿ ವಿ.ಆರ್.ಸುದರ್ಶನ್ ಅವರನ್ನು ನೇಮಿಸಲಾಯಿತು. ಆದರೆ ಗುಂಪುಗಾರಿಕೆ ಜೋರಾದಾಗ ಏ.15ರಂದು ರಾಜೀನಾಮೆ ಕೊಟ್ಟು ಪಕ್ಷ ಚಟುವಟಿಕೆಯಿಂದ ದೂರ ಉಳಿದರು.
    ಹೈನುಗಾರಿಕೆ ಪಿತಾಮಹ ಎಂ.ವಿ.ಕಷ್ಣಪ್ಪ, ಚಿಂತಾಮಣಿಯ ಆಂಜನೇಯರೆಡ್ಡಿ, ಎ.ಚೌಡರೆಡ್ಡಿ, ಮಾಲೂರಿನ ಎ.ನಾಗರಾಜು, ಗೌರಿಬಿದನೂರಿನ ಅಶ್ವತ್ಥನಾರಾಯಣರೆಡ್ಡಿ, ಬಿಸ್ಸೇಗೌಡ, ಹಾಲಿ ಎಂಎಲ್‌ಸಿ ಅನಿಲ್‌ಕುಮಾರ್, ಚಂದ್ರಾರೆಡ್ಡಿ ಜಿಲ್ಲೆಯಲ್ಲಿ ಪಕ್ಷ ಮುನ್ನಡೆಸಿದ್ದರು. ಪ್ರಸ್ತುತ ಘಟಾನುಘಟಿ ಅನುಭವಿ ನಾಯಕರೇ ಪಕ್ಷದಲ್ಲಿದ್ದಾರೆ. ಆದರೆ ಪಕ್ಷ ಚಟುವಟಿಕೆ ನಿಂತ ನೀರಾಗಿದೆ.

    ಶಾಸಕರ ಹೆಗಲಿಗೆ ಪಕ್ಷದ ಕೆಲಸ: ಚುನಾವಣೆಗೆ ಸಜ್ಜಾಗಲು ಸ್ವಾತಂತ್ರ್ತ್ಯ ಅಮೃತ ಮಹೋತ್ಸವ, ರಾಹುಲ್ ಗಾಂಧಿ ಪಾದಯಾತ್ರೆ, ಆಯಾ ಕ್ಷೇತ್ರಗಳಲ್ಲಿ ಶಾಸಕರ ಪಾದಯಾತ್ರೆ… ಹೀಗೆ ಹಲವು ಕಾರ್ಯಕ್ರಮಗಳನ್ನು ಕೆಪಿಸಿಸಿ ಹಮ್ಮಿಕೊಂಡಿದೆ. ಅಧಿಕಾರದ ಚುಕ್ಕಾಣಿ ಹಿಡಿಯುವ ಉತ್ಸಾಹದಲ್ಲಿ ಕೈಪಡೆ ಇದೆ. ಸಭೆ, ಸಮಾರಂಭ, ಚರ್ಚೆ, ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರ ನಡುವೆ ಜಾಗೃತಿ, ಸಮನ್ವಯ ತರುವ ಕೆಲಸವನ್ನು ಕೆಪಿಸಿಸಿ ಮಾರ್ಗದರ್ಶನದಲ್ಲಿ ಡಿಸಿಸಿ, ಬ್ಲಾಕ್ ಕಾಂಗ್ರೆಸ್ ಮತ್ತು ಮುಂಚೂಣಿ ಘಟಕಗಳು ಮಾಡಬೇಕಿತ್ತು. ಆದರೆ ಡಿಸಿಸಿಗೆ ಗರಬಡಿದ ನಂತರ ಪಕ್ಷದ ಕೆಲಸ ಮಾಲೂರು, ಬಂಗಾರಪೇಟೆ, ಶ್ರೀನಿವಾಸಪುರ ಶಾಸಕರು ಮತ್ತು ಕೋಲಾರ ಜವಾಬ್ದಾರಿ ಎಂಎಲ್‌ಸಿ ಅನಿಲ್ ಕುಮಾರ್ ಹೆಗಲಿಗೇರಿದೆ.

    ಕೆಎಚ್ ಬಣ ದೂರ: ಕೋಲಾರ ಕ್ಷೇತ್ರದಲ್ಲಿ ಬ್ಲಾಕ್, ಕಿಸಾನ್, ಎಸ್ಸಿ ಮತ್ತಿತರ ಟಕಗಳ ಅಧ್ಯಕ್ಷರು ಕೆ.ಎಚ್.ಮುನಿಯಪ್ಪ ಬಣದವರಾಗಿದ್ದಾರೆ. ಶ್ರೀನಿವಾಸಗೌಡರು ಜನ ಸೇರಿಸುವ ಶಕ್ತಿ ಕಳೆದುಕೊಂಡಂತೆ ಕಾಣುತ್ತಿದೆ. ಇನ್ನು ಕೆಜಿಎಫ್ ಶಾಸಕಿ ರೂಪಕಲಾ ಎರಡೂ ಬಣಗಳಿಂದ ಅಂತರ ಕಾಯ್ದುಕೊಂಡಿದ್ದಾರೆ.

    ಹಿಂದುಳಿದವರಿಗೆ ಪಟ್ಟ ಕಟ್ಟಲು ಯತ್ನ: ಈ ಹಿಂದೆ ಡಿಸಿಸಿ ಅಧ್ಯಕ್ಷರಾಗಿ ಬಿಸ್ಸೇಗೌಡ, ಎಂಎಲ್‌ಸಿ ಅನಿಲ್ ಕುಮಾರ್, ಚಂದ್ರಾರೆಡ್ಡಿ ಆಯ್ಕೆಯಾಗಿದ್ದು ಎಲ್ಲರೂ ರೆಡ್ಡಿ, ಒಕ್ಕಲಿಗರಾಗಿದ್ದರಿಂದ ಈ ಬಾರಿ ಹಿಂದುಳಿದವರಿಗೆ ಪಟ್ಟ ಕಟ್ಟುವ ಪ್ರಯತ್ನ ನಡೆಯುತ್ತಿದೆ. ಮಾಲೂರಿನ ಲಕ್ಷ್ಮೀನಾರಾಯಣ್ ಅಲಿಯಾಸ್ ಲಚ್ಚಿ, ಅಂಜನಿ ಸೋಮಣ್ಣ, ಮೈಲಾಂಡಹಳ್ಳಿ ಮುನಿರಾಜು ಪ್ರಯತ್ನ ನಡೆಸಿದ್ದಾರೆ. ಒಂದು ವೇಳೆ ಒಕ್ಕಲಿಗರಿಗೆ ನೀಡುವುದಾದರೆ ಮುಳಬಾಗಿಲಿನ ನೀಲಕಂಠೇಗೌಡ, ಮಾಲೂರಿನ ಕೆಸರಗೆರೆ ಸೋಮಶೇಖರ್ ಪ್ರಯತ್ನಿಸುತ್ತಿದ್ದಾರೆ.

    ಅನಿಲ್ ಸಾರಥ್ಯಕ್ಕೆ ಒತ್ತಡ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಬಂಗಾರಪೇಟೆ, ಶ್ರೀನಿವಾಸಪುರ, ಮುಳಬಾಗಿಲು ಉಸ್ತುವಾರಿಯೂ ಆಗಿರುವ ಎಂಎಲ್‌ಸಿ ಅನಿಲ್‌ಕುಮಾರ್‌ಗೆ ಡಿಸಿಸಿ ಸಾರಥ್ಯ ವಹಿಸುವಂತೆ ಕೈ ಶಾಸಕರು ಒತ್ತಡ ತರುತ್ತಿದ್ದಾರೆ ಎನ್ನಲಾಗಿದೆ. ಡಿಸಿಸಿ, ಬ್ಲಾಕ್ ಮತ್ತು ಇತರ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಿಸುವ ಸಲುವಾಗಿ ಸೆಪ್ಟೆಂಬರ್ ಒಳಗೆ ಸಾಂಸ್ಥಿಕ ಚುನಾವಣೆ ನಡೆಯಬೇಕಿದೆ. ಆದರೆ ಚುನಾವಣೆ ವರ್ಷ ಇದಾಗಿರುವುದರಿಂದ ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯಬಲ್ಲ ವ್ಯಕ್ತಿಯೊಬ್ಬರನ್ನು ಅಧ್ಯಕ್ಷರನ್ನಾಗಿಸಿ ಚುನಾವಣೆ ಎದುರಿಸಲು ರಮೇಶ್ ಕುಮಾರ್ ಬಣದವರು ಮುಂದಾಗಿದ್ದಾರೆ. ಕೆ.ಎಚ್.ಬಣ ತಟಸ್ಥವಾದರೆ ಚುನಾವಣೆಯಲ್ಲಿ ಬೆಲೆ ತೆರಬೇಕಾಗಿರುವುದಂತೂ ದಿಟ. ಹೀಗಾಗಿ ಡಿಸಿಸಿ ಅಧ್ಯಕ್ಷ, ಪದಾಧಿಕಾರಿಗಳ ನೇಮಕದಲ್ಲಿ ಬ್ಯಾಲೆನ್ಸ್ ವಾಡಬೇಕಿದ್ದು, ಅದು ಸಾಧ್ಯವೇ ಎಂಬ ವಾತು ಕೇಳಿ ಬರುತ್ತಿವೆ.

    ಚಾಪೆ ಕೆಳಗಿನ ನೀರು!: ‘ನೋಟು ಕೊಟ್ಟರಾಯ್ತು ಓಟು ಬೀಳುತ್ತವೆ’ ಎಂಬ ಭ್ರಮೆಯಲ್ಲಿ ಕೆಲ ಶಾಸಕರು ಇದ್ದಂತಿದೆ. ಆದರೆ ಆಡಳಿತ ವಿರೋಧಿ ಅಲೆ ಚಾಪೆ ಕೆಳಗಿನ ನೀರಿನಂತಿದೆ. ಸುತ್ತ-ಮುತ್ತ ಹೊಗಳು ಭಟ್ಟರನ್ನು ಇಟ್ಟುಕೊಂಡು ಆಪಕ್ಷ, ಈ ಪಕ್ಷದವರು ಸೇರ್ಪಡೆಯಾದರು ಎನ್ನುವುದು ಬಿಟ್ಟರೆ ಸ್ವಯಂಪ್ರೇರಣೆಯಿಂದ ಕಾರ್ಯಕ್ರಮಗಳಿಗೆ ಬರುವ ಕಾರ್ಯಕರ್ತರು ಕಾಣುತ್ತಿಲ್ಲ. ಇದಕ್ಕೆ ಬಿಜೆಪಿ, ಜೆಡಿಎಸ್ ಭಿನ್ನ ಎಂಬ ವಾಸ್ತವ ಸಂಗತಿ ಅರ್ಥವಾಡಿಕೊಂಡಂತಿಲ್ಲ. ಹಣ, ಅಧಿಕಾರದ ಅಮಲಿನಲ್ಲಿ ತೇಲುತ್ತಿರುವವರ ಬಂಡವಾಳ ಕೆಲವೇ ತಿಂಗಳಲ್ಲಿ ಬಯಲಾಗಲಿದೆ ಎಂದು ಬಣ ರಾಜಕೀಯದಿಂದ ದೂರವಿರುವ ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts