More

    ಮತದಾರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ

    ಯಾದಗಿರಿ: ಚುನಾವಣಾ ಆಯೋಗದ ನಿರ್ದೇಶನದಂತೆ ಸುರಪುರ, ಶಹಾಪುರ, ಯಾದಗಿರಿ ಹಾಗೂ ಗುರುಮಠಕಲ್ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿ ಪ್ರಕಟಿಸಿದ್ದು, ಈ ಬಗ್ಗೆ ಯಾವುದೇ ದೂರು, ಆಕ್ಷೇಪಣೆಗಳಿದ್ದಲ್ಲಿ ಜನವರಿ 15ರವರೆಗೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದರು.

    ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕರಡು ಮತದಾರರ ಪಟ್ಟಿ ಕುರಿತು ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಚಚರ್ಿಸಿದ ಅವರು, ಪಟ್ಟಿಯನ್ನು ಡಿಸಿ ಕಚೇರಿ, ಯಾದಗಿರಿ ಸಹಾಯಕ ಆಯುಕ್ತರ ಕಚೇರಿ, ಸುರಪುರ, ಶಹಾಪುರ, ಯಾದಗಿರಿ ತಹಸಿಲ್ ಸೇರಿ ಜಿಲ್ಲೆಯ ಎಲ್ಲ ಮತಗಟ್ಟೆ ಮಟ್ಟದ ಅಧಿಕಾರಿಗಳ ಕಚೇರಿಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದರು.

    ಸಾರ್ವಜನಿಕರು ತಮ್ಮ ಹೆಸರು ಮತದಾರ ಪಟ್ಟಿಯಲ್ಲಿ ಪ್ರಕಟವಾದ ಬಗ್ಗೆ ಪರಿಶೀಲಿಸಿಕೊಳ್ಳಬೇಕು. ಇಲ್ಲವಾದಲ್ಲಿ ಅರ್ಹತಾ ದಿನಾಂಕದಂತೆ ಯುವಕರು, ಯುವತಿಯರು ಅಥವಾ ಸಾರ್ವಜನಿಕರು ಹೊಸದಾಗಿ ಹೆಸರು ಸೇರ್ಪಡೆಗಾಗಿ ನಮೂನೆ-6ರಲ್ಲಿ ಅಜರ್ಿ ಸಲ್ಲಿಸಬೇಕು. ಪಟ್ಟಿಯಲ್ಲಿ ಹೆಸರಿದ್ದು ಸ್ಥಳಾಂತರ, ಮೃತ ಹೊಂದಿದಲ್ಲಿ ಅಥವಾ ಹೆಸರು ಪುನರಾವರ್ತನೆ ಆಗಿದ್ದಲ್ಲಿ ಹೆಸರನ್ನು ತೆಗೆದು ಹಾಕಲು ನಮೂನೆ-7, ಹೆಸರು ಇತ್ಯಾದಿ ತಿದ್ದುಪಡಿಗೆ ನಮೂನೆ-8 ಮತ್ತು ಹೆಸರು ವಗರ್ಾವಣೆಗೆ ನಮೂನೆ-8ಎರಲ್ಲಿ ಸೂಕ್ತ ದಾಖಲೆಯೊಂದಿಗೆ ಅಜರ್ಿಗಳನ್ನು ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿಗೆ ಜನವರಿ 15ರವರೆಗೆ ಸಲ್ಲಿಸಬೇಕು ಎಂದು ತಿಳಿಸಿದರು.

    ಲೋಕಸಭಾ, ನಗರ ಸ್ಥಳೀಯ ಸಂಸ್ಥೆಗಳು, ಗ್ರಾಪಂ ಸೇರಿ ಎಲ್ಲ ಚುನಾವಣೆಗಳಿಗೂ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯೇ ಅನ್ವಯಿಸುತ್ತದೆ. ಪಟ್ಟಿ ದೋಷರಹಿತವಾಗಿದ್ದಷ್ಟು ಚುನಾವಣೆಗಳು ಸುಸೂತ್ರ ನಡೆಯುತ್ತವೆ. ಹೀಗಾಗಿ ನಕಲಿ ಮತದಾರರು ಸೇರಿ ಯಾವುದೇ ದೂರು, ಆಕ್ಷೇಪಣೆಗಳಿದ್ದಲ್ಲಿ ನಿಗದಿತ ಅವಧಿಯೊಳಗೆ ಸಂಬಂಧಿಸಿದ ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಸಲ್ಲಿಸುವಂತೆ ರಾಜಕೀಯ ಮುಖಂಡರನ್ನು ಕೋರಿದರು.

    ಪಟ್ಟಿಯಲ್ಲಿ ಜಿಲ್ಲೆಯ 9,85,271 ಮತದಾರರಿದ್ದು, ಈ ಪೈಕಿ 4,92,401 ಪುರುಷ ಮತ್ತು 4,92,870 ಮಹಿಳೆಯರಿದ್ದಾರೆ. ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ 2,70,555, ಶಹಾಪುರ 2,30,282, ಯಾದಗಿರಿ ಕ್ಷೇತ್ರದಲ್ಲಿ 2,39,395 ಮತದಾರರಿದ್ದು, ಈ ಪಟ್ಟಿ ಶೇ.100 ಮತದಾರರ ಭಾವಚಿತ್ರ ಒಳಗೊಂಡಿದೆ. ಗುರುಮಠಕಲ್ ಕ್ಷೇತ್ರದಲ್ಲಿ 2,45,039 ಮತದಾರರಿದ್ದು, ಈ ಪಟ್ಟಿಯಲ್ಲಿ ಭಾವಚಿತ್ರವಿಲ್ಲದ 13 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.

    ಸುರಪುರ ಕ್ಷೇತ್ರದಲ್ಲಿ 54, ಶಹಾಪುರ 28, ಯಾದಗಿರಿ 10, ಗುರುಮಠಕಲ್ 11 ಸೇರಿ 103 ಸೇವಾ ಮತದಾರರಿದ್ದಾರೆ. ಈ ನಾಲ್ಕೂ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯಲ್ಲಿ 7,141 ಯುವ ಮತದಾರರು ಸೇರ್ಪಡೆಯಾಗಿದ್ದಾರೆ. ಹೊಸದಾಗಿ ನೋಂದಣಿ ಮಾಡಿದವರು ಜನವರಿ 25ರಂದು ನಡೆಯುವ ರಾಷ್ಟ್ರೀಯ ಮತದಾರರ ದಿನಾಚರಣೆ ದಿನ ಚುನಾವಣಾ ಗುರುತಿನ ಚೀಟಿ ಪಡೆದುಕೊಳ್ಳಬೇಕು ಎಂದರು.


    ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ, ತಹಸೀಲ್ದಾರರಾದ ಜಗನ್ನಾಥರೆಡ್ಡಿ, ನಿಂಗಣ್ಣ ಎಸ್.ಬಿರಾದಾರ, ಚುನಾವಣೆ ಶಾಖೆ ಶಿರಸ್ತೇದಾರ ಪರಶುರಾಮ, ಖಲೀಲ್ಸಾಬ್, ಬಿಎಸ್ಪಿ ಜಿಲ್ಲಾಧ್ಯಕ್ಷ ತಜಮುಲ್ ಹುಸೇನ್, ಜೆಡಿಎಸ್ ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಶಾಂತಪ್ಪ ಡಿ.ಜಾಧವ್, ಬಿಜೆಪಿ ಯುವ ಘಟಕದ ಅಧ್ಯಕ್ಷ ಸೂಗೂರೇಶ ಮಾಲಿಪಾಟೀಲ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಶಿವರಾಜ ದಾಸನಕೇರಿ ಉಪಸ್ಥಿತರಿದ್ದರು. ಡಿಸೆಂಬರ್ 16ರಂದು ಪ್ರಕಟಿಸಿರುವ ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿಗಳು ರಾಜಕೀಯ ಮುಖಂಡರಿಗೆ ವಿತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts