More

    ಹೊಸನೀರಲಗಿಯಲ್ಲಿ ಜಿಲ್ಲಾಧಿಕಾರಿ ಗ್ರಾಮವಾಸ್ತವ್ಯ ಇಂದು

    ಹಾವೇರಿ: ಜನರ ಸಮಸ್ಯೆಗಳನ್ನು ಆಲಿಸಿ ಅವರ ಮನೆ ಅಂಗಳದಲ್ಲಿ ಸಮಸ್ಯೆಗಳ ನಿವಾರಣೆಯ ಬಹು ನಿರೀಕ್ಷಿತ ಹಳ್ಳಿಯ ಕಡೆಗೆ ಜಿಲ್ಲಾಧಿಕಾರಿ ನಡಿಗೆ ಮೊದಲ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಫೆ. 20ರಂದು ಸವಣೂರ ತಾಲೂಕಿನ ಹೊಸನೀರಲಗಿ ಗ್ರಾಮದಲ್ಲಿ ಜರುಗಲಿದೆ.

    ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಶನಿವಾರ ಬೆಳಗ್ಗೆ 10 ಗಂಟೆಯಿಂದ ಗ್ರಾಮವಾಸ್ತವ್ಯ ಆರಂಭಿಸಿ ರಾತ್ರಿ ಗ್ರಾಮದಲ್ಲಿ ತಂಗಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಗ್ರಾಮದ ದಲಿತ ಕೇರಿಗಳಿಗೆ ಭೇಟಿ, ಚಹಾ ಸೇವನೆ, ನಂತರ ಕಾರ್ಯಕ್ರಮದ ಉದ್ಘಾಟನೆ, ಸಾರ್ವಜನಿಕರಿಂದ ಅಹವಾಲು ಸ್ವೀಕಾರ, ಮಧ್ಯಾಹ್ನ ಊಟ, ಸಾರ್ವಜನಿಕ ಅಹವಾಲು ನಂತರ ಅಂಗನವಾಡಿ, ಶಾಲೆಗಳಿಗೆ ಭೇಟಿ, ರಾತ್ರಿ ವಾಸ್ತವ್ಯ ಮಾಡಲಿದ್ದಾರೆ. ಈ ಸಮಯದಲ್ಲಿ ಹೊಸನೀರಲಗಿ ಗ್ರಾಮದ ಹಲವು ಸಮಸ್ಯೆಗಳ ನಿವಾರಣೆಯತ್ತ ಗಮನಹರಿಸಲಿದ್ದಾರೆ. ಗ್ರಾಮದ ಸಾರ್ವಜನಿಕ ಸಮಸ್ಯೆಗಳು, ಮೂಲ ಸೌಕರ್ಯಗಳ ಕುರಿತು ಖುದ್ದು ಪರಿಶೀಲನೆ ನಡೆಸಲಿದ್ದಾರೆ.

    ಗ್ರಾಮವಾಸ್ತವ್ಯ ನಡೆಸುವ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ನೆರಳು, ಕುಡಿಯುವ ನೀರಿನ ವ್ಯವಸ್ಥೆ, ಸಾರ್ವಜನಿಕರ ಅರ್ಜಿಗಳ ಸ್ವೀಕಾರಕ್ಕೆ ಡೆಸ್ಕ್​ಗಳ ವ್ಯವಸ್ಥೆ ಕೈಗೊಳ್ಳಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯಕ್ಕೆ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್​ಗಳ ನೇತೃತ್ವದಲ್ಲಿ ಸಿದ್ಧತೆಯನ್ನು ಪೂರ್ಣಗೊಳಿಸಲಾಗಿದೆ.

    ಯಾವುದಕ್ಕೆ ಪರಿಹಾರ: ಜಮೀನುಗಳ ಸರ್ವೆ ಹದ್ದುಬಸ್ತು, ಪೋಡಿ, ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನಕ್ಕೆ ಸಂಬಂಧಿಸಿದ ದೂರುಗಳ ನಿವಾರಣೆ, ಹಕ್ಕು ಬದಲಾವಣೆ, ಪಡಿತರ ಚೀಟಿ ವಿತರಣೆ, 11ಇ ನಕ್ಷೆ ತಿದ್ದುಪಡಿ, 94 ಸಿ ಅಡಿ ಪ್ರಕರಣಗಳ ವಿಲೇವಾರಿ, ಸರ್ಕಾರಿ ಜಮೀನು ಒತ್ತುವರಿ ಹಾಗೂ ಕೆರೆ ಒತ್ತುವರಿ, ಕುಡಿಯುವ ನೀರಿನ ಸಮಸ್ಯೆ, ಬರ, ಪ್ರವಾಹ ಪರಿಹಾರ ಸಮಸ್ಯೆಗಳ ಪರಿಹಾರ ಸೇರಿ ಹಲವು ನಾಗರಿಕ ಸಮಸ್ಯೆಗಳಿಗೆ ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ಕಾರ್ಯನಿರ್ವಹಿಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts