More

    ಬಸ್‌ಪಾಸ್ ವಿತರಣೆ ಯೋಜನೆ ಸುದುಪಯೋಗಕ್ಕೆ ಶಾಸಕ ಸಲಹೆ

    ಚಿತ್ರದುರ್ಗ: ಕಾರ್ಮಿಕ ಇಲಾಖೆ ಹಾಗೂ ರಾಜ್ಯರಸ್ತೆ ಸಾರಿಗೆ ಸಂಸ್ಥೆ ಸಹಯೋಗದಲ್ಲಿ ರೂಪಿಸಿರುವ ಉಚಿತ ಪ್ರಯಾಣದ ಬಸ್‌ಪಾಸ್‌ಗಳ ಸೌಲಭ್ಯ ವನ್ನು ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳ ಬೇಕೆಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ,ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂ ದಾಯಿಸಿರುವ ಕಟ್ಟಡ ಕಾರ್ಮಿಕರಿಗೆ ಬಸ್‌ಪಾಸ್ ವಿತರಿಸಿ ಮಾತನಾಡಿದ ಅವರು,ಈ ಯೋಜನೆ ಕಾರ್ಮಿಕರಿಗೆ ನೆರವಾಗಲಿದೆ. ಕಾರ್ಮಿ ಕರು ತಮ್ಮ ವಾಸದ ಸ್ಥಳದಿಂದ 45 ಕಿ.ಮೀವರೆಗೆ ಉಚಿತವಾಗಿ ಪ್ರಯಾಣಿಸಬಹುದು.

    ಪ್ರಾರಂಭಿಕ ಸ್ಥಳದಿಂದ 7 ಹಂತಗಳವರೆಗೆ ಗರಿಷ್ಠ 45 ಕಿ.ಮೀ ವ್ಯಾಪ್ತಿಯಲ್ಲಿ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ನಗರ,ಸಾಮಾನ್ಯ,ಹೊರವಲಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.

    ಕಟ್ಟಡ ಕಾರ್ಮಿಕರು ನಗರದ ಪ್ರದೇಶಗಳಲ್ಲಿ ಬಾಡಿಗೆ ಮನೆಯಲ್ಲಿ ಜೀವನ ನಡೆಸಲು ಸಾಧ್ಯವಾಗದು, ಪ್ರಯಾಣ ದರವನ್ನು ಭ ರಿಸುವುದು ಕಷ್ಟವಾಗಿದೆ. ಕಾರ್ಮಿಕರ ಸಂಕಷ್ಟ ಅರಿತ ರಾಜ್ಯಸರ್ಕಾರ ಈ ಯೋಜನೆ ಜಾರಿಗೊಳಿಸಿದೆ. ನೊಂದಾಯಿತ ಗುರುತಿನ ಚೀಟಿ, ಮಾಹಿತಿಯೊಂದಿಗೆ ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರವನ್ನು ಸಂಪರ್ಕಿಸಿ ಪಾಸ್ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಇಲಾಖೆ ಸಹಾಯವಾಣಿ ಸಂಖ್ಯೆ 155214ನ್ನು ಸಂಪರ್ಕಿಸ ಬಹುದೆಂದರು.

    ಜಿಲ್ಲಾ ಕಾರ್ಮಿಕ ಅಧಿಕಾರಿ ಸಿ.ಎನ್.ಯಶೋಧರ್,ಕಾರ್ಮಿಕ ನಿರೀಕ್ಷಕ ಡಿ.ರಾಜಣ್ಣ,ಕೆಎಸ್‌ಆರ್‌ಟಿಸಿ ಡಿಸಿ ಜಿ.ಬಿ. ಮಂಜು ನಾಥ್,ಚಿತ್ರದುರ್ಗ ಡಿಪೋ ವ್ಯವಸ್ಥಾಪಕ ಹೊನ್ನಪ್ಪ,ಸೂಪರ್‌ವೈಸರ್ ಮಂಜುಳಾ, ಜಿಪಂ ಮಾಜಿ ಸದಸ್ಯ ಜಯಪಾಲಯ್ಯ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts