More

    ಸಂಕಷ್ಟದಲ್ಲಿದ್ದಾಗ ಬಾರದ ಪ್ರಧಾನಿ: ಮಾಜಿ ಸಂಸದ ಉಗ್ರಪ್ಪ ಆಕ್ರೋಶ

    ಚಿತ್ರದುರ್ಗ: ಬರ, ಪ್ರವಾಹದಂಥ ಸಂಕಷ್ಟಕ್ಕೆ ಸಿಲುಕಿದ್ದಾಗ ಕರ್ನಾಟಕಕ್ಕೆ ಬಾರದ ಪ್ರಧಾನಿ ನರೇಂದ್ರ ಮೋದಿ, ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಪದೇ ಪದೆ ಬರುತ್ತಿರುವುದನ್ನು ನೋಡಿದರೆ ರಾಜ್ಯ ಬಿಜೆಪಿ ನಾಯಕತ್ವ ಮತದಾನ ಮುನ್ನವೇ ಸೋಲನ್ನು ಒಪ್ಪಿಕೊಂಡಂತೆ ಭಾಸವಾಗುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಅಭಿಪ್ರಾಯಪಟ್ಟರು.

    ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಕಷ್ಟದಲ್ಲಿದ್ದಾಗ ಬರದೆ, ಅನುದಾನ ಕೊಡದೆ, ಈಗ ಬರುತ್ತಿರುವ ಪ್ರಧಾನಿ ಮೋದಿ ಅವರ ವರ್ತನೆ ಮುತ್ಸದ್ದಿತನದಿಂದ ಕೂಡಿಲ್ಲ ಎಂದು ಬೇಸರಿಸಿದರು.

    ಈ ಚುನಾವಣೆ ಸರ್ವಾಧಿಕಾರಿ ಪ್ರವೃತ್ತಿಯ ಬಿಜೆಪಿ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವ ಕಾಂಗ್ರೆಸ್ ನಡುವಿನ ಸಂಘರ್ಷವಾಗಿದೆ ಎಂದರು.

    ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿದೆ. ಆದರೆ, ಕೃಷಿಕರ ಆದಾಯ ದ್ವಿಗುಣದಂಥ ಮೋದಿ ಅವರ ಹಲವು ಮಾತುಗಳು ಈಡೇರಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಜಿಎಸ್‌ಟಿಯಿಂದ ಜನ ಸಾಮಾನ್ಯರ ಬದುಕು ಕಷ್ಟಕ್ಕೆ ಸಿಲುಕಿದೆ. ಈಚೆಗೆ ಚಳ್ಳಕೆರೆ ಡಿಆರ್‌ಡಿಒಗೆ ಬಂದಿಳಿದಿದ್ದ ಮೋದಿ, ಆ ಭಾಗದ ಎಸ್‌ಸಿ, ಎಸ್‌ಟಿ ಬಡವರಿಗೆ ಯಾವುದೇ ಅನುಕೂಲ ಕಲ್ಪಿಸುವ ಮಾತುಗಳನ್ನಾಡಲಿಲ್ಲ ಎಂದು ಹೇಳಿದರು.

    ಪುಲ್ವಾಮ ಘಟನೆಯನ್ನು ಭಾವನಾತ್ಮಕ ಅಸ್ತ್ರವನ್ನಾಗಿ ಬಳಸಲಾಗಿದೆ. ಬಜರಂಗಳ ನಿಷೇಧ ಪ್ರಸ್ತಾಪಕ್ಕೆ ಬಿಜೆಪಿ ವಿರೋಧ ಸರಿ ಅಲ್ಲ. ಡಬ್ಬ ಲ್ ಇಂಜಿನ್ ಸರ್ಕಾರ ಜನರ ಹಿತ ಕಾಪಾಡಲು ವಿಫಲವಾಗಿದೆ. ೧೫೦ ಸೀಟುಗಳೊಂದಿಗೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‌ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಡಿ.ಎನ್.ಮೈಲಾರಪ್ಪ, ಮುಖಂಡ ಮುದಸಿರ್ ನವಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts