More

    ಒಂದು ತಿಂಗಳಲ್ಲಿ ಚಂದ್ರನಲ್ಲಿಗೆ ಓಡಿರಿ… 3,84,400 ಕಿಲೋಮೀಟರ್!

    ಬೆಂಗಳೂರು: ಭೂಮಿ ಮತ್ತು ಚಂದ್ರನ ನಡುವಿನ ಅಂತರ 3,84,400 ಕಿಲೋಮೀಟರ್. ಈ ದೂರವನ್ನು ಈಗ ಓಡುತ್ತಲೇ ಕ್ರಮಿಸಬಹುದಾಗಿದೆ! ಜತೆಗೆ, ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ಕ್ರೀಡಾ ಅಕಾಡೆಮಿಗಳು ಮತ್ತು ಫೌಂಡೇಷನ್‌ಗಳಿಗೆ ನೆರವಾಗಬಹುದಾಗಿದೆ! ಗೊಂದಲವಾಯಿತೇ ಪೂರ್ಣ ಮಾಹಿತಿಗಾಗಿ ಈ ಸ್ಟೋರಿ ಓದಿ…

    ಚಂದ್ರನ ಮೇಲೆ ಮನುಷ್ಯ ಕಾಲಿಟ್ಟು ಜುಲೈ 21ಕ್ಕೆ 51 ವರ್ಷ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಜೂನ್ 20ರಿಂದ ಜುಲೈ 20ರವರೆಗೆ ‘ರನ್ ಟು ದಿ ಮೂನ್’ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಪಾಲ್ಗೊಳ್ಳುವ ಎಲ್ಲ ಓಟಗಾರರು ಒಟ್ಟಾರೆಯಾಗಿ ಭೂಮಿ ಮತ್ತು ಚಂದ್ರನ ನಡುವಿನ 3,84,400 ಕಿಲೋಮೀಟರ್ ದೂರವನ್ನು ಓಡಬೇಕಾಗಿದೆ. ಕನಿಷ್ಠ 100 ರೂ. ದೇಣಿಗೆ ನೀಡಿ ಹೆಸರು ನೋಂದಾಯಿಸಿಕೊಳ್ಳುವ ಪ್ರತಿ ಓಟಗಾರ ಒಂದು ತಿಂಗಳ ಅವಧಿಯಲ್ಲಿ ಕನಿಷ್ಠ 65 ಕಿಲೋಮೀಟರ್ ಓಡಬೇಕು. ಅಂದರೆ ಪ್ರತಿ ದಿನ ಕನಿಷ್ಠ 2.5 ಕಿಲೋಮೀಟರ್ ಮತ್ತು ಗರಿಷ್ಠ 10 ಕಿಲೋಮೀಟರ್ ಓಡಬೇಕು. ಟ್ರ್ಯಾಕಿಂಗ್ ಸಿಸ್ಟಮ್ ಮೂಲಕ ಓಟಗಾರರು ಓಡಿದ ದೂರವನ್ನು ಅಳೆಯಲಾಗುವುದು.

    ಇದನ್ನೂ ಓದಿ: VIDEO: ಆಸ್ಟ್ರೇಲಿಯಾದಲ್ಲಿ ಕನ್ನಡಿಗನ ಸೇವೆಗೆ ವಾರ್ನರ್ ಫುಲ್ ಖುಷ್..!

    ದೇಶದೆಲ್ಲೆಡೆಯಿಂದ 10ರಿಂದ 65 ವರ್ಷ ವಯಸ್ಸಿನವರು ಓಟದಲ್ಲಿ ಪಾಲ್ಗೊಳ್ಳಬಹುದಾಗಿದೆ. ಪಾರ್ಕ್, ಬೀದಿ… ಹೀಗೆ ತಾವು ಬಯಸಿದ ಯಾವುದೇ ಸ್ಥಳದಲ್ಲಿ ಓಡಬಹುದಾಗಿದೆ. ಯಶಸ್ವಿಯಾಗಿ ಓಡಿ ಮುಗಿಸಿದವರಿಗೆ ಟಿ-ಶರ್ಟ್, ಮಾಸ್ಕ್ ಮತ್ತು ಇ-ಸರ್ಟಿಫಿಕೇಟ್ ನಿಡಲಾಗುವುದು. ಐಡಿಬಿಎ ಫೆಡರಲ್ ಲೈಫ್​ ಇನ್ಶುರೆನ್ಸ್‌ನ ಅಭಿಯಾನದಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಜೂನ್ 18ರವರೆಗೆ ಸಮಯಾವಕಾಶವಿದೆ.

    ಇದನ್ನೂ ಓದಿ: ಬಾಯ್​ಫ್ರೆಂಡ್​ ಜತೆಗೆ ಸೆಕ್ಸ್ ಮಾಡಿ ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿಬಿದ್ದ ಮಹಿಳಾ ಬಾಕ್ಸರ್! ಶಿಕ್ಷೆಯಿಂದ ಪಾರಾಗಿದ್ದೇಕೆ?

    ಈ ಅಭಿಯಾನದಿಂದ ಸಂಗ್ರಹವಾಗುವ ದೇಣಿಗೆ ಕನ್ನಡತಿಯರಾದ ಅಶ್ವಿನಿ ನಾಚಪ್ಪ ಮತ್ತು ಮಾಲತಿ ಹೊಳ್ಳ ಅವರ ಅಕಾಡೆಮಿಗಳಾದ ಅಶ್ವಿನಿ ಸ್ಪೋಟ್ಸ್​ರ್ ಫೌಂಡೇಷನ್ ಮತ್ತು ಮಾತೃ ಫೌಂಡೇಷನ್ ಹಾಗೂ ಪುಲ್ಲೇಲಾ ಗೋಪಿಚಂದ್ ಅವರ ಬ್ಯಾಡ್ಮಿಂಟನ್ ಅಕಾಡೆಮಿಗೆ ನೀಡಲಾಗುವುದು. ಲಾಕ್‌ಡೌನ್‌ನಿಂದಾಗಿ ಕ್ರೀಡಾಪಟುಗಳಿಗಿಂತ ಕೋಚ್‌ಗಳು ಮತ್ತು ಇತರ ಸಿಬ್ಬಂದಿಯ ಬದುಕು ದುಸ್ತರವಾಗಿದೆ. ಅವರಿಗೆ ಕಳೆದ 3 ತಿಂಗಳಿನಿಂದ ಆದಾಯವೇ ಇಲ್ಲದಂತಾಗಿದೆ ಎಂದು ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲಾ ಗೋಪಿಚಂದ್ ಹೇಳಿಕೊಂಡಿದ್ದಾರೆ.

    VIDEO: ಮಗಳೊಂದಿಗೆ ಸೆರೇನಾ ವಿಲಿಯಮ್ಸ್ ಬಿಂದಾಸ್ ಸ್ಟೆಪ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts