More

    ಬೀರೂರು ಹಿಂದು ಮಹಾಸಭಾ ಗಣಪತಿ ವಿಸರ್ಜನೆ

    ಬೀರೂರು: ಹಾಲಪ್ಪ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿದ್ದ ಹಿಂದು ಮಹಾಸಭಾ ಗಣಪತಿಯನ್ನು ಪಟ್ಟಣದಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ಬಾಕಿನಕೆರೆಯಲ್ಲಿ ವಿಸರ್ಜಿಸಲಾಯಿತು.

    ಹಿಂದು ಸಂಘಟನೆಗಳು, ಆಟೋ ಮಾಲೀಕರ ಮತ್ತು ಚಾಲಕರ ಸಂಘಗಳ ಸಹಯೋಗದಲ್ಲಿ ಮಂಗಳವಾರ ಬೆಳಗ್ಗೆ ಹಾಲಪ್ಪ ಬಡಾವಣೆಯ ಪೆಂಡಾಲ್‌ನಿಂದ ಗಣಪತಿಯನ್ನು ಟ್ರಾೃಕ್ಟರ್‌ನಲ್ಲಿ ಹೂವಿನಿಂದ ಅಲಂಕರಿಸಿದ್ದ ಮಂಟಪದಲ್ಲಿರಿಸಿ ಪಟ್ಟಣದ ಅಜ್ಜಂಪುರ ಮುಖ್ಯರಸ್ತೆಯಿಂದ ಮಹಾತ್ಮ ಗಾಂಧಿ ವೃತ್ತಕ್ಕೆ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಬೃಹದಾಕಾರದ ಮೂಸಂಬಿ ಹಾರ ಸಮರ್ಪಿಸಲಾಯಿತು. ಬಿ.ಎಚ್.ರಸ್ತೆ ಮಾರ್ಗವಾಗಿ ಸಾಗಿ ಹಳೇಪೇಟೆ, ಮಹಾನವಮಿ ಬಯಲಿನವರೆಗೂ ಮೆರವಣಿಗೆ ನಡೆಸಿದರು.
    ಮೆರವಣಿಗೆಯ ಬೀದಿಗಳು ಕೇಸರಿಮಯವಾಗಿದ್ದವು. ಎಂಜಿ ವೃತ್ತದಲ್ಲಿ ತಳಿರು ತೋರಣಗಳು ಮತ್ತು ಕೇಸರಿ ಧ್ವಜ ಕಟ್ಟಲಾಗಿತ್ತು. ಪಟ್ಟಣದ ಎಲ್ಲ ಕಡೆ ಕೇಸರಿ ವರ್ಣವೇ ರಾರಾಜಿಸುತ್ತಿತ್ತು. ಯುವಕರು ಮತ್ತು ಮಹಿಳೆಯರು ಕೇಸರಿ ಶಾಲು, ಪೇಟಗಳನ್ನು ಧರಿಸಿ ಭಾರತ ಮಾತೆಗೆ, ಗಣಪತಿಗೆ ಜೈಕಾರ ಕೂಗುತ್ತ ಸಾಗಿದರು. ಡಿಜೆ ಶಬ್ದಕ್ಕೆ ಕುಣಿದು ಸಂಭ್ರಮಿಸಿದರು. ಶಿವಾಜಿನಗರದಲ್ಲಿ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ಎಂಜಿ ವೃತ್ತದಲ್ಲಿ ಸಿಡಿಮದ್ದು ಪ್ರದರ್ಶಿಸಿದರು. ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts