More

    ಹಿಂದು ಎಂಬ ಕಾರಣಕ್ಕೆ ಕಾಲೇಜ್​ ಚುನಾವಣೆಯಿಂದ ಅನರ್ಹಗೊಂಡ ಭಾರತೀಯ ವಿದ್ಯಾರ್ಥಿ!

    ಲಂಡನ್​: ಭಾರತೀಯ ಮತ್ತು ಹಿಂದು ಗುರುತಿನ ಮೇಲೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿದ್ಯಾರ್ಥಿಗಳ ಒಕ್ಕೂಟದ ಚುನಾವಣೆಗಳಿಂದ ಅನರ್ಹಗೊಂಡಿರುವುದಾಗಿ ಭಾರತೀಯ ವಿದ್ಯಾರ್ಥಿಯೊಬ್ಬ ಹೇಳಿಕೊಂಡಿದ್ದಾನೆ. ಈ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

    22 ವರ್ಷದ ಹರಿಯಾಣ ಮೂಲದ ಕರಣ್ ಕಟಾರಿಯಾ ಅವರು ಲಂಡನ್‌ನ ಪ್ರಮುಖ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಕಾನೂನು ಪದವಿಯನ್ನು ಅಧ್ಯಯನ ಮಾಡುತ್ತಿದ್ದಾರೆ. ಇವರು ಹಿಂದು ಎಂಬ ಕಾರಣಕ್ಕೆ ಕಾಲೇಜ್​ ಚುನಾವಣೆಯಿಂದ ಅನರ್ಹಗೊಂಡಿದ್ದಾರೆ ಎನ್ನುವ ಆರೋಪವನ್ನು ಮಾಡಿದ್ದಾರೆ.

    ಇದನ್ನೂ ಓದಿ: ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಪ್ರಾಣ ಬಿಟ್ಟ ವಿದ್ಯಾರ್ಥಿ
    ಎಲ್‌ಎಸ್‌ಇ ವಿದ್ಯಾರ್ಥಿಗಳ ಒಕ್ಕೂಟದ (ಎಲ್‌ಎಸ್‌ಇಎಸ್‌ಯು) ಪ್ರಧಾನ ಕಾರ್ಯದರ್ಶಿ ಹುದ್ದೆಗೆ ತನ್ನ ಗೆಳೆಯರ ಬೆಂಬಲದಿಂದ ಪ್ರೇರೇಪಿಸಲ್ಪಟ್ಟು ಸ್ಪರ್ಧೆ ಮಾಡಿದ್ದೆ. ಆದರೆ, ಆಧಾರ ರಹಿತ ಆರೋಪಗಳನ್ನು ಮಾಡಿ ಮತ್ತು ನನ್ನ ವಾದವನ್ನು ಸಂಪೂರ್ಣವಾಗಿ ಹೇಳಲು ಅವಕಾಶವನ್ನು ನೀಡದೆ ಕಳೆದ ವಾರ ನನ್ನನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿದೆ. ತನ್ನ ಭಾರತೀಯ ಮತ್ತು ಹಿಂದು ಗುರುತಿನ ಮೇಲೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿದ್ಯಾರ್ಥಿಗಳ ಒಕ್ಕೂಟದ ಚುನಾವಣೆಗಳಿಂದ ಅನರ್ಹಗೊಂಡಿರುವುದಾಗಿ ಹೇಳಿಕೊಂಡಿದ್ದಾನೆ. ಸ್ಮೀಯರ್ ಅಭಿಯಾನದಲ್ಲಿ ತನ್ನನ್ನು ಸಲಿಂಗಕಾಮಿ ಮತ್ತು ಇಸ್ಲಾಮೋಫೋಬಿಕ್ ಎಂದು ತಪ್ಪಾಗಿ ಆರೋಪಿಸಲಾಗಿದೆ. ನನ್ನ ವಿರುದ್ಧ ಉದ್ದೇಶಪೂರ್ವಕವಾಗಿ ಸಂಘಟಿತವಾದ ಕೊಳಕು ಅಭಿಯಾನವನ್ನು ಪ್ರಾರಂಭಿಸಿದಾಗ ನನ್ನ ಕನಸುಗಳು ಭಗ್ನಗೊಂಡವು ಎಂದೂ ಸೋಶಿಯಲ್​ ಮೀಡಿಯಾ ಮೂಲಕವಾಗಿ ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಮುಸ್ಲಿಮರು ಆತ್ಮರಕ್ಷಣೆಗಾಗಿ ಬಾಂಬ್‌ ತಯಾರಿಸುತ್ತಿದ್ದಾರೆ: ಆರ್‌ಜೆಡಿ ಶಾಸಕ
    ಮತದಾನದ ಕಡೆಯ ದಿನ ಭಾರತೀಯ ವಿದ್ಯಾರ್ಥಿಗಳನ್ನು ಅವರ ರಾಷ್ಟ್ರೀಯ ಮತ್ತು ಹಿಂದೂ ಧಾರ್ಮಿಕ ಗುರುತಿಗಾಗಿ ಬೆದರಿಸಲಾಯಿತು ಮತ್ತು ಗುರಿಯಾಗಿಸಲಾಯಿತು. ವಿದ್ಯಾರ್ಥಿಗಳು ಈ ವಿಷಯವನ್ನು ಪ್ರಸ್ತಾಪಿಸಿದರು, ಈ ನಡವಳಿಕೆಯ ವಿರುದ್ಧ ವಿದ್ಯಾರ್ಥಿಗಳ ದೂರುಗಳು ನೀಡಿದ್ರೂ ಮೌನವಾಗಿರುವುದು ಎಲ್‌ಎಸ್‌ಇಎಸ್‌ಯು ಹಿಂದೂ ವಿರೋಧಿ ಎಂಬ ಆರೋಪವನ್ನು ಸಮರ್ಥಿಸುತ್ತದೆ ಎಂದೂ ಹರ್ಯಾಣ ಮೂಲದ ಕರಣ್‌ ಕಟಾರಿಯಾ ಹೇಳಿದ್ದಾರೆ. LSESU ಇದು ನ್ಯಾಯಯುತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಚುನಾವಣೆಗಳ ಬಾಹ್ಯ ಪರಿಶೀಲನೆಗೆ ಆದೇಶಿಸಿದೆ ಎಂದು ಹೇಳಿದೆ.

    ನಾನೇ ಮದ್ಯದ ಗುತ್ತಿಗೆದಾರ, ಅದನ್ನು ನಿಲ್ಲಿಸುವುದು ಹೇಗೆ?: ಬಿಜೆಪಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts