More

    7,000 ಮಂದಿ ಉದ್ಯೋಗಿಗಳನ್ನು ವಜಾ ಗೊಳಿಸಲು ಮುಂದಾದ ಡಿಸ್ನಿ

    ವಾಷಿಂಗ್ಟನ್: ಆರ್ಥಿಕ ಸಮಸ್ಯೆಯಿಂದ ಈಗಾಗಲೇ ಅನೇಕ ಕಂಪನಿಗಳು ವಿಶ್ವದಾದ್ಯಂತ ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದು, ಇದೀಗ ಪ್ರಸಿದ್ಧ ಮನರಂಜನಾ ಸಂಸ್ಥೆ ಡಿಸ್ನಿ ಕೂಡಾ ತನ್ನ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ.

    ಇದನ್ನೂ ಓದಿ: “ಜೈ ಶ್ರೀ ರಾಮ್” ಕೂಗಲು ನಿರಾಕರಿಸಿದ ಅನ್ಯಧರ್ಮದವನ ಗಡ್ಡ ಕತ್ತರಿಸಿ ಪರಾರಿಯಾದ ಮುಸುಕುಧಾರಿಗಳು
    ಕಂಪನಿ ಸುಮಾರು 5.5 ಬಿಲಿಯನ್ ಡಾಲರ್ ವೆಚ್ಚ ಕಡಿತ ಮಾಡುವ ಸಲುವಾಗಿ ಮೊದಲ ಸುತ್ತಿನ ವಜಾವನ್ನು ಕಾರ್ಯಗತಗೊಳಿಸಲಿದೆ. ಸುಮಾರು 7,000 ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ. ಡಿಸ್ನಿ ಎಂಟರ್ಟೈನ್ಮೆಂಟ್, ಡಿಸ್ನಿ ಪಾರ್ಕ್ಸ್, ಅನುಭವ ಹಾಗೂ ಉತ್ಪನ್ನ, ಕಾರ್ಪೊರೇಟ್ ಸೇರಿದಂತೆ ಸಂಸ್ಥೆಯ ಹಲವು ಪ್ರಮುಖ ವಿಭಾಗಗಳ ಮೇಲೆ ಈ ವಜಾ ಪ್ರಕ್ರಿಯೆ ಪರಿಣಾಮ ಬೀರಲಿದೆ.

    ಇದನ್ನೂ ಓದಿ: ಮೋದಿಯ ಫೋಟೋ ಹರಿದ ಕಾಂಗ್ರೆಸ್ ಶಾಸಕ; ದಂಡ ವಿಧಿಸಿದ ನ್ಯಾಯಾಲಯ
    ಉದ್ಯೋಗಿಗಳ ವಜಾ ಪ್ರಕ್ರೀಯೆಯ ಮೊದಲ ಪ್ರಕ್ರಿಯೆ ಈ ವಾರದ ಒಳಗಾಗಿ ನಡೆಯಲಿದ್ದು, ಬಳಿಕ ಏಪ್ರಿಲ್‌ನಲ್ಲಿ ಇನ್ನೂ ಹೆಚ್ಚಿನ ಉದ್ಯೋಗಿಗಳನ್ನು ತೆಗೆದುಹಾಕಲಾಗುತ್ತದೆ. ಸದ್ಯ ಈ ಬಾರಿ ಇಎಸ್‌ಪಿಎನ್‌ನ ಉದ್ಯೋಗಿಗಳ ಮೇಲೆ ಇದು ಪ್ರಭಾವ ಬೀರುವುದಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಮೆಕ್ಕಾಗೆ ಹೋಗುತ್ತಿದ್ದ ಬಸ್ ಭೀಕರ ಅಪಘಾತ: 20 ಯಾತ್ರಿಕರು ಮೃತ್ಯು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts