More

    ರೋಗಗಳ ನಿಯಂತ್ರಣಕ್ಕೆ ಜನರ ಸಹಕರ ಅಗತ್ಯ

    ಗಂಗಾವತಿ: ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಜನರ ಪಾತ್ರ ಮುಖ್ಯವಾಗಿದ್ದು, ಡೆಂೆ ನಿಯಂತ್ರಣಕ್ಕೆ ವಾರ್ಡ್ ಮತ್ತು ಗ್ರಾಮಗಳಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಉಪವಿಭಾಗ ಆಸ್ಪತ್ರೆ ಹಿರಿಯ ಆರೋಗ್ಯ ಸಹಾಯಕ ವಿಜಯಪ್ರಸಾದ ಹೇಳಿದರು.

    ಇದನ್ನೂ ಓದಿ: ಆರೋಗ್ಯ ಸೌಲಭ್ಯ ಪಡೆಯಿರಿ

    ನಗರದ ಇಸ್ಲಾಂಪುರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ರೋಗ ವಾಹನ ಆಶ್ರಿತ ರೋಗಗಳ ನಿಯಂತ್ರಣದಡಿಯಲ್ಲಿ ಆಯೋಜಿಸಿದ್ದ ಡೆಂಘಿ ನಿಯಂತ್ರಣ ಜಾಗೃತಿ ರಥಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

    ಸಂಗ್ರಹಿತ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳಿಂದ ಡೆಂಘಿ ಹರಡುತ್ತಿದ್ದು, ಪರಿಸರ ಸ್ವಚ್ಛತೆಯತ್ತ ಗಮನಹರಿಸಬೇಕು.ಮಲಗಿದಾದ ಸೊಳ್ಳೆ ಪರದೆ ಬಳಸುವುದು ಸೂಕ್ತ, ಸೊಳ್ಳೆಗಳ ಬಾರದಂತೆ ಎಚ್ಚರಿಕೆವಹಿಸಿ ಎಂದರು.

    ಡೆಂಘಿ ರೋಗ ಲಕ್ಷಣ, ಹರಡುವ ರೀತಿ, ನಿಯಂತ್ರಣ ಮತ್ತು ಚಿಕಿತ್ಸೆ ಕುರಿತು ಮಲೇರಿಯಾ ವಿಭಾಗದ ಮೇಲ್ವಿಚಾರಕ ದೇವೇಂದ್ರಗೌಡ ಮಾಹಿತಿ ನೀಡಿದರು.
    ವೈದ್ಯರಾದ ಡಾ.ಶಬ್ರಿನ್, ಡಾ.ರಮೇಶ, ಆರೋಗ್ಯ ಹಿರಿಯ ಸಹಾಯಕ ಭೀಮಣ್ಣ, ವಿಜಯಲಕ್ಷ್ಮೀ ಆಚಾರ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts