More

    ಕೆಲವರಷ್ಟೇ ಚರ್ಚಾ ಟೇಬಲ್​ನಲ್ಲಿದ್ದರೆ ಜಾಗತಿಕ ಬೆಳವಣಿಗೆಯಾಗದು: ಪ್ರಧಾನಿ ಮೋದಿ

    ನವದೆಹಲಿ: ಕೆಲವರಷ್ಟೇ ಚರ್ಚಾ ಟೇಬಲ್​ನಲ್ಲಿದ್ದರೆ ಜಾಗತಿಕ ಬೆಳವಣಿಗೆಯಾಗದು. ಹೆಚ್ಚಿನವರು ಚರ್ಚಾ ಟೇಬಲ್​ಗೆ ಬರಬೇಕು. ಕಾರ್ಯಸೂಚಿಯೂ ದೊಡ್ಡದಾಗಿರಬೇಕು. ಮಾನವ ಕೇಂದ್ರಿತ ಬೆಳವಣಿಗೆಯ ಮಾದರಿಯನ್ನೆ ಅನುಸರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದರು.

    ಅವರು ಇಂಡೋ-ಜಪಾನ್ ಆರನೇ ಸಂವಾದ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುತ್ತ, ಹಿಂದೆಲ್ಲ, ಮಾನವೀಯತೆಯು ಪಾಲುದಾರಿಕೆಯ ಬದಲು ಮುಖಾಮುಖಿಯ ಹಾದಿ ಹಿಡಿಯಿತು. ಸಾಮ್ರಾಜ್ಯಶಾಹಿಯಿಂದ ಹಿಡಿದು ವಿಶ್ವ ಮಹಾಯುದ್ಧಗಳ ತನಕ, ಶಸ್ತ್ರಾಸ್ತ್ರ ಸಮರದಿಂದ ಹಿಡಿದು ಬಾಹ್ಯಾಕಾಶ ಸಮರದ ತನಕ, ನಾವು ಮಾತುಕತೆ ನಡೆಸಿದ್ದೇವೆ ಆದರೆ ಅವೆಲ್ಲವೂ ಇತರರ ಕಾಲೆಳೆಯುವ ನಿಟ್ಟಿನಲ್ಲೇ ಇದ್ದವು. ಈಗ ನಾವೆಲ್ಲರೂ ಜತೆಯಾಗಿ ಅಭಿವೃದ್ಧಿ ಹೊಂದೋಣ.

    ಇದನ್ನೂ ಓದಿ: ರೂಪಾಂತರಗೊಂಡ ಕರೊನಾ ವೈರಸ್​: ಭಾನುವಾರ ಒಂದೇ ದಿನ 35,928 ಕೇಸ್, 326 ಸಾವು

    ನಮ್ಮೆಲ್ಲರ ಅಸ್ತಿತ್ವದ ಆಧಾರ ಸ್ತಂಭವಾಗಿ ಪರಿಸರ ಇರುವಂತೆ ನೋಡಿಕೊಳ್ಳಬೇಕು. ಪರಸ್ಪರ ಸಾಮರಸ್ಯದೊಂದಿಗೆ ಸಹಬಾಳ್ವೆ ನಡೆಸುವ ಪರಿಕಲ್ಪನೆಯು ಎಲ್ಲ ಅಭಿವೃದ್ಧಿ ಕಾರ್ಯಗಳ ಮುಖ್ಯ ಕೇಂದ್ರಬಿಂದುವಾಗಿರುವಂತೆ ನೋಡಿಕೊಳ್ಳೋಣ. ನಮ್ಮ ಶ್ರಮ, ಬಲವನ್ನು ಶತ್ರುತ್ವ ಬೆಳೆಸುವುದರ ಬದಲು ಮನುಕುಲದ ಸಬಲೀಕರಣಕ್ಕೆ ಬಳಸೋಣ ಎಂದು ಅವರು ಹೇಳಿದರು. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಹೊಸಮಾದರಿ ಕೋವಿಡ್ 19 – ತುರ್ತುಸಭೆ ಕರೆದಿರುವ ಕೇಂದ್ರ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts