More

    ಚಳಿಗಾಲದಲ್ಲಿ ನಿಮ್ಮ ಆಯ್ಕೆ ಬಿಸಿ ನೀರು ಎಂಬುದು ಗೊತ್ತು! ಆದ್ರೆ ಈ ಅನಾನುಕೂಲತೆಗಳ ಬಗ್ಗೆ ತಿಳಿದಿರಲಿ…

    ಇನ್ನೇನು ಚಳಿಗಾಲ ಆರಂಭವಾಗುತ್ತಿದೆ. ಈ ಸೀಸನ್​ನ ಥಂಡಿ ವಾತಾವರಣದಲ್ಲಿ ಸ್ನಾನ ಮಾಡಲು ಪ್ರತಿಯೊಬ್ಬರಿಗೂ ಬಿಸಿ ನೀರು ಬೇಕೆ ಬೇಕು. ಬೀಸಿ ನೀರು ಇಲ್ಲದಿದ್ದರೆ ಕೊರೆಯುವ ಚಳಿಯಲ್ಲಿ ಸ್ನಾನದ ಮಾತೇ ಇರುವುದಿಲ್ಲ. ಆದರೆ, ನಡುಗುವ ಚಳಿಯಲ್ಲಿ ಬಿಸಿ ನೀರಿನಲ್ಲಿ ತಲೆ ಸ್ನಾನ ಮಾಡುವುದರಿಂದ ಕೆಲ ಅನಾನುಕೂಲತೆಗಳು ಸಹ ಇವೆ.

    ಯಾವುದೇ ಕಾರಣಕ್ಕೂ ಚಳಿಗಾಲದಲ್ಲಿ ಅತಿಯಾದ ಬಿಸಿ ನೀರು ಬಳಸಬೇಡಿ. ನಿಮ್ಮ ಕೂದಲಿಗೆ ಶಾಂಪೂ ಹಚ್ಚಿ ಬಿಸಿನೀರಿನಿಂದ ಸ್ನಾನ ಮಾಡಿದರೆ ಕೂದಲು ಬಲಹೀನವಾಗುತ್ತದೆ ಮತ್ತು ಒರಟಾಗುತ್ತದೆ. ಇದರಿಂದ ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ. ಅದೇ ಸಮಯದಲ್ಲಿ ಬಿಸಿನೀರು ನಿಮ್ಮ ಕೂದಲಿನ ಬೇರುಗಳನ್ನು ತೆರೆಯುವುದರಿಂದ ಕೂದಲುಗಳು ಬೇರು ಸಮೇತ ಉದುರಲು ಪ್ರಾರಂಭಿಸುತ್ತದೆ.

    ಮತ್ತೊಂದು ಅನಾನುಕೂಲವೆಂದರೆ ಬಿಸಿ ನೀರಿನಿಂದ ತಲೆ ಸ್ನಾನ ಮಾಡುವುದರಿಂದ ನೆತ್ತಿ ಒಣಗಬಹುದು. ಪರಿಣಾಮವಾಗಿ, ನೀವು ತುರಿಕೆ ಮತ್ತು ತಲೆಹೊಟ್ಟಿನಿಂದ ಬಳಲುತ್ತೀರಿ. ಏಕೆಂದರೆ, ನೆತ್ತಿಯು ತುಂಬಾ ಒಣಗಿದಾಗ ಅದರ ಮೇಲೆ ತಲೆಹೊಟ್ಟು ಪ್ರಾರಂಭವಾಗುತ್ತದೆ. ಈ ತಲೆಹೊಟ್ಟು ಎಣ್ಣೆ ಅಥವಾ ಅದರ ಪೋಷಕಾಂಶಗಳು ನೆತ್ತಿಯನ್ನು ತಲುಪಲು ಬಿಡುವುದಿಲ್ಲ. ಇದರಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ.

    ಅರಿಯಾದ ಬಿಸಿನೀರಿನಲ್ಲಿ ಉಷ್ಣತೆಯು ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದು ಚರ್ಮಕ್ಕೆ ಹಾನಿಕಾರಕವಾಗಿದೆ. ನೀವು ಶೀತವನ್ನು ಅನುಭವಿಸದೇ ಇರಬಹುದು, ಆದರೆ ಚರ್ಮದ ಕಿರಿಕಿರಿ, ಊತ, ಕೆಂಪು, ಇತ್ಯಾದಿಗಳಿಗೆ ಕಾರಣವಾಗಬಹುದು. ಹೀಗಾಗಿ ತುಂಬಾ ಎಚ್ಚರವಹಿಸಿ.

    ಚಳಿಗಾಲದಲ್ಲಿ ತಣ್ಣೀರಿನಿಂದ ಸ್ನಾನ ಮಾಡುವುದು ಸುಲಭದ ಕೆಲಸವಲ್ಲ. ವಾಸ್ತವವಾಗಿ, ಕೂದಲಿನ ತಜ್ಞರು ತಣ್ಣೀರಿನಿಂದಲೂ ತಲೆ ಸ್ನಾನ ಮಾಡಲು ಶಿಫಾರಸು ಮಾಡುವುದಿಲ್ಲ. ಬದಲಿಗೆ ಉಗುರು ಬೆಚ್ಚಗಿನ ಅಥವಾ ಸಾಮಾನ್ಯ ನೀರನ್ನು ಬಳಸಬೇಕೆಂದು ಹೇಳುತ್ತಾರೆ. ಆದರೆ, ಚಳಿ ಅಂತಾ ಅತಿಯಾದ ಬಿಸಿನೀರನ್ನು ಯಾವುದೇ ಕಾರಣಕ್ಕೂ ಬಳಸಬೇಡಿ. ಸಾಮಾನ್ಯ ನೀರಿನಿಂದ ಸ್ನಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ತಜ್ಞರ ಸಲಹೆಯಾಗಿದೆ.

    ಅತಿಯಾದ ಬಿಸಿ ನೀರು ದೇಹಕ್ಕೆ ಒಳ್ಳೆಯದಲ್ಲ. ಯಾವಾಗಲೂ ಉಗುರು ಚೆಚ್ಚಗಿನ ನೀರಿನಲ್ಲಿ ಒಳ್ಳೆಯದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. (ಏಜೆನ್ಸೀಸ್​)

    ಬಾವನ ಕಾರು ಪತ್ತೆಯಾದ ಸ್ಥಳಕ್ಕೆ ಸಿಪಿವೈ ಭೇಟಿ: ಕಾರಿನ ಗ್ಲಾಸ್ ಚೂರು, ರಕ್ತದ ಕಲೆಗಳು ಪತ್ತೆ – ಹಂತಕರ ಸುಳಿವು ಕೊಟ್ಟಿತೇ ಸಿಸಿ ಕ್ಯಾಮೆರಾ?

    ಕಾಡಾನೆಯೊಂದಿಗೆ ಕಾದಾಡಿ ಪ್ರಾಣಬಿಟ್ಟ ಅರ್ಜುನ! 8 ಬಾರಿ ಅಂಬಾರಿ ಹೊತ್ತಿದ್ದ ಮಾಜಿ ಕ್ಯಾಪ್ಟನ್​ ಇನ್ನು ನೆನಪು ಮಾತ್ರ

    ಬೈಕ್​ ಸವಾರನಿಗೆ ಅವಾಚ್ಯ ಪದಗಳಿಂದ ನಿಂದನೆ ಪ್ರಕರಣ: ಭವಾನಿ ವರ್ತನೆ ಬಗ್ಗೆ ಪತಿ, ಪುತ್ರ, ಮಾವ ಏನಂದ್ರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts