More

    ಬಾವನ ಕಾರು ಪತ್ತೆಯಾದ ಸ್ಥಳಕ್ಕೆ ಸಿಪಿವೈ ಭೇಟಿ: ಕಾರಿನ ಗ್ಲಾಸ್ ಚೂರು, ರಕ್ತದ ಕಲೆಗಳು ಪತ್ತೆ – ಹಂತಕರ ಸುಳಿವು ಕೊಟ್ಟಿತೇ ಸಿಸಿ ಕ್ಯಾಮೆರಾ?

    ಚಾಮರಾಜನಗರ: ತೋಟದ ಮನೆಯಿಂದ ಕಾಣೆಯಾಗಿದ್ದ ಬಾವ ಮಹಾದೇವಯ್ಯ ಕಾರು ಪತ್ತೆಯಾದ ಮಾಹಿತಿ ತಿಳಿದು ಹನೂರು ತಾಲೂಕಿನ ರಾಮಾಪುರಕ್ಕೆ ಎಂಎಲ್ಸಿ ಸಿ‌.ಪಿ.ಯೋಗೇಶ್ವರ್ ಭೇಟಿ ನೀಡಿದ್ದರು. ಸಿಸಿ ಕ್ಯಾಮೆರಾದಲ್ಲಿ ಅಪಹರಣಕಾರರ ಚಲನವಲನ ಕಂಡುಬಂದಿದೆ.

    ಇದನ್ನೂ ಓದಿ: ಸಿಪಿವೈ ಭಾವ ನಾಪತ್ತೆ ಕೇಸ್​ಗೆ ಹೊಸ ಟ್ವಿಸ್ಟ್​​
    ಭಾನುವಾರ ತಡರಾತ್ರಿ ಮಹಾದೇವಯ್ಯ ಅವರು ಬಳಸುತ್ತಿದ್ದ ಕಾರು ರಾಮಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಪತ್ತೆಯಾಗಿದ್ದು ಸ್ಥಳಕ್ಕೆ ಸಿಪಿಐ ಭೇಟಿ ಕೊಟ್ಟು ಮಾಹಿತಿ ಕಲೆ ಹಾಕಿದರು.

    ಚನ್ನಪಟ್ಟಣ ಪೊಲೀಸರು ಕೂಡ ಬೆರಳಚ್ಚು ತಜ್ಞರ ಜತೆ ಸ್ಥಳಕ್ಕೆ ಆಗಮಿಸಿದ್ದು, ಕಾರನ್ನು ಪರಿಶೀಲನೆ ನಡೆಸಿದರು. ಕಾರಿನ ಗಾಜು ಒಡೆದಿದ್ದು, ರಕ್ತದ ಕಲೆಗಳು ಕೂಡ ಪತ್ತೆಯಾಗಿದ್ದು, ನ.2ರಂದೇ ಮಹದೇವಯ್ಯ ಕೊಲೆಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

    ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ತೋಟದ ಮನೆಯಿಂದ ಮಹಾದೇವಯ್ಯ 3 ದಿನಗಳ ಹಿಂದೆ ಕಾಣೆಯಾಗಿದ್ದರು. ಈ ನಾಪತ್ತೆ ಪ್ರಕರಣ ಕಿಡ್ನಾಪ್ ತಿರುವು ಪಡೆದದುಕೊಂಡಿದ್ದು. ಅವರ ಕಾರು ಚಾಮರಾಜನಗರ ಜಿಲ್ಲೆ ಅನೂರು ತಾಲೂಕಿನ ರಾಮಾಪುರ ಬಳಿ ಪತ್ತೆಯಾಗಿತ್ತು. ಪೊಲೀಸರ ಶೋಧಕಾರ್ಯ ಬಳಿಕ ನಿರ್ಜನ ಪ್ರದೇಶದಲ್ಲಿ ಅವರ ಶವ ಪತ್ತೆಯಾಗಿತ್ತು.

    ಪ್ರಬಲ ಸಾಕ್ಷ್ಯ ಒದಗಿಸಿದ ಸಿಸಿ ಕ್ಯಾಮೆರಾ ದೃಶ್ಯಗಳು: ರಾಮಪುರದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಅಪಹರಣಕಾರರ ಚಲನವಲನ ಕಂಡುಬಂದಿದೆ. ನ. 2ರಂದು ಬೆಳಗ್ಗೆ 4.05ಕ್ಕೆ ರಾಮಪುರಕ್ಕೆ ಎಂಟ್ರಿ ಕೊಟ್ಟಿರುವ ಹಂತಕರು 4.20ಕ್ಕೆ ರಾಮಪುರದಿಂದ ಎಕ್ಸಿಟ್ ಆಗಿದ್ದಾರೆ. ಸುಮಾರು 15 ನಿಮಿಷ ಕಾಡಿನ ದಾರಿಯಲ್ಲಿ ಓಡಾಡಿರುವ ಕಿಡ್ನಾಪರ್‌ಗಳು ಹನೂರು- ನಾಲ್ ರೋಡ್- ಈರೋಡ್ ರಸ್ತೆಯಲ್ಲಿ ಸಂಚಾರ ನಡೆಸಿದ್ದಾರೆ. ವಾಪಸ್ ಹೋಗುವಾಗ ರಾಮಪುರದಲ್ಲಿ ಕಾರು ನಿಲ್ಲಿಸಿ ಮೂವರೂ ನಡೆದುಕೊಂಡು ಹೋಗಿದ್ದಾರೆ.

    ಇನ್ನು ಮಹಾದೇವಯ್ಯ ಅವರನ್ನು ಬೇರೆಡೆ ಕೊಲೆ ಮಾಡಿ ಮಲೆ ಮಹದೇಶ್ವರ ಬೆಟ್ಟಕ್ಕೆ ತಂದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಅಪಹರಣಕಾರರ ಚಲನವಲನದ ಆಧಾರದ ಮೇಲೆ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಅವರಿಗಾಗಿ ಕೂಂಬಿಂಗ್ ನಡೆಸಿದ್ದಾರೆ.

    ಕಾಡಾನೆಯೊಂದಿಗೆ ಕಾದಾಡಿ ಪ್ರಾಣಬಿಟ್ಟ ಅರ್ಜುನ! 8 ಬಾರಿ ಅಂಬಾರಿ ಹೊತ್ತಿದ್ದ ಮಾಜಿ ಕ್ಯಾಪ್ಟನ್​ ಇನ್ನು ನೆನಪು ಮಾತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts