More

    ತುಪ್ಪದ ಕಾಫಿಯ ಈ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ….

    ಜಗತ್ತಿನ ಬಹುತೇಕ ಜನರ ದಿನ ಆರಂಭವಾಗುವುದೇ ಟೀ ಅಥವಾ ಕಾಫಿಯಿಂದ. ದಿನಕ್ಕೆ ಒಂದು ಕಪ್ ಕಾಫಿ-ಟೀ ಕುಡಿಯಲಿಲ್ಲ ಅಂದ್ರೆ ಆ ದಿನ ಏನೋ ಮಿಸ್​ ಮಾಡಿಕೊಂಡಂತೆ ಜನರು ಚಡಪಡಿಸುತ್ತಾರೆ. ಊಟ ಇಲ್ಲದಿದ್ದರೂ ಪರವಾಗಿಲ್ಲ ಆದರೆ, ಕಾಫಿ ಅಥವಾ ಟೀ ಬೇಕೆ ಬೇಕು. ಇನ್ನು ಕಾಫಿ-ಟೀಗಳಲ್ಲೂ ಸಾಕಷ್ಟು ವೆರೈಟಿಗಳಿವೆ. ಟೀ ಅಂತಾ ಬಂದಾಗ ಗ್ರೀನ್​ ಟೀ, ಶುಂಠಿ ಟೀ ಮುಂತಾದವುಗಳನ್ನು ಗಮನಿಸಬಹುದು. ಅದೇ ರೀತಿ ಕಾಫಿಯಲ್ಲೂ ಸಾಕಷ್ಟು ವೆರೈಟಿಗಳಿದ್ದು, ಅವುಗಳಲ್ಲಿ ತುಪ್ಪದ ಕಾಫಿ ಅಥವಾ ಗೀ ಕಾಫಿಯೂ ಕೂಡ ಒಂದು. ಅದರ ಆರೋಗ್ಯಕರ ಲಾಭಗಳ ಬಗ್ಗೆ ನಾವಿಂದೂ ತಿಳಿದುಕೊಳ್ಳೋಣ.

    ದೀರ್ಘಾವಧಿಯ ಶಕ್ತಿ ಹೆಚ್ಚಿಸುತ್ತದೆ
    ಸಾಮಾನ್ಯವಾಗಿ ಬ್ಲ್ಯಾಕ್ ಕಾಫಿಗೆ ಹೋಲಿಸಿದರೆ ಗೀ ಕಾಫಿ ದೀರ್ಘಾವಧಿಯ ಶಕ್ತಿಯನ್ನು ನೀಡುತ್ತದೆ. ಸಾಮಾನ್ಯ ಕಾಫಿ ಸೇವಿಸಿದಾಗ ನಿಮ್ಮ ದೇಹದಲ್ಲಿ ಏರು ಪೇರು ಕಾಣಬಹುದು. ಆದರೆ, ತುಪ್ಪವನ್ನು ಸೇರಿಸುವುದರಿಂದ ದೇಹಕ್ಕೆ ವಿಶೇಷ ಶಕ್ತಿಯನ್ನು ನೀಡಬಲ್ಲದು. ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬು, ಕಾಫಿಯಲ್ಲಿರುವ ಕೆಫೀನ್‌ನ ಅಂಶಗಳು ಉರಿಯೂತವನ್ನು ತಡೆಯುತ್ತದೆ.

    ಆರೋಗ್ಯಕರ ಕೊಬ್ಬು ಹೆಚ್ಚಿಸುತ್ತದೆ
    ಹೃದಯ ಹಾಗು ಮೆದುಳಿನ ಶಕ್ತಿಯನ್ನು ಬಲಪಡಿಸಲು ಗೀ ಕಾಫಿಯಲ್ಲಿನ ಒಮೆಗಾ 3,6,9 ಅಂಶಗಳು ಸಹಾಯ ಮಾಡುತ್ತವೆ. ದೇಸಿ ಹಸುವಿನ ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬು ಉತ್ತಮ ಆರೋಗ್ಯಕ್ಕೆ ಅತ್ಯಗತ್ಯ.

    ಜೀರ್ಣಕ್ರಿಯೆಗೆ ಅತ್ಯುತ್ತಮ ಪಾನೀಯ
    ಬೆಳ್ಳಗ್ಗೆ ಕಾಫಿ ಕುಡಿದಾಗ ಆಗುವ ಹುಳಿ ಅನುಭವವನ್ನು ತಡೆಗಟ್ಟಲು ಒಂದು ಚಮಚ ತುಪ್ಪವನ್ನು ಸೇರಿಸುವುದು ಉತ್ತಮ ಅಭ್ಯಾಸ. ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ತುಪ್ಪದಲ್ಲಿರುವ ಕೊಬ್ಬಿನ ಅಮ್ಲಗಳು ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ.

    ದೇಹದ ಉಷ್ಣತೆ ಕಾಪಾಡುತ್ತದೆ
    ಸಾಮಾನ್ಯವಾಗಿ ಕಾಫಿಯನ್ನು ಕುದಿಸಿ, ಅದಕ್ಕೆ 1 ಚಮಚ ತುಪ್ಪದೊಂದಿಗೆ ರುಚಿಗೆ ತಕ್ಕಷ್ಟು ಸಿಹಿಯನ್ನು ಸೇರಿಸಿಕೊಳ್ಳವುದರಿಂದ ಗೀ ಕಾಫಿಯು ನಮ್ಮ ದೇಹದ ಉಷ್ಣತೆಯನ್ನು ನೈಸರ್ಗಿಕವಾಗಿ ಸಮತೋಲನದಲ್ಲಿ ಇಡುತ್ತದೆ. ಚಳಿಗಾಲದಲ್ಲಿ ಸೇವನೆ ಮಾಡುವುದರಿಂದ ನಮ್ಮ ದೇಹವನ್ನು ಬೆಚ್ಚಗೆ ಇಡುತ್ತದೆ.

    ಈ ಖ್ಯಾತ ನಟಿಯನ್ನು ಪ್ರೀತಿಸಿ ಮದ್ವೆಯಾಗಲು ಬಯಸಿದ್ರು ರಜಿನಿ! ಕೈ ಕೊಟ್ಟ ಕರೆಂಟ್​​ನಿಂದ ಲವ್​ ಫೇಲ್ಯೂರ್​

    ಶೀಘ್ರದಲ್ಲೇ ಮುಖೇಶ್- ನೀತಾ ಅಂಬಾನಿ ಸೊಸೆಯಾಗುವ ರಾಧಿಕಾ ಮರ್ಚೆಂಟ್ ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts