More

    ವಿಕಲತೆ ಶಾಪವಲ್ಲ, ದೇವರು ಕೊಟ್ಟ ವರ

    ಧಾರವಾಡ: ಅಂಗವಿಕಲತೆ ಶಾಪವಲ್ಲ, ದೇವರು ಕೊಟ್ಟ ವರ. ಅಂಗವಿಕಲರು ಯಾವುದೇ ಮಾನಸಿಕ ಖಿನ್ನತೆಗೆ ಒಳಗಾಗಬಾರದು. ಆತ್ಮಸ್ಥೈರ್ಯದಿಂದ ಮುನ್ನುಗ್ಗಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತೆ ಪ್ರಭಾ ಲೋಂಡೆ ಹೇಳಿದರು.

    ದೀಪಾವಳಿ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ಅಂಗವಿಕಲರ ಒಕ್ಕೂಟದ ಜಿಲ್ಲಾ ಘಟಕದಿಂದ ನಗರದ ಭಾರತ ಸ್ಕೌಟ್ಸ್-ಗೈಡ್ಸ್ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದಾನಿಗಳು ನೀಡಿದ ಹೊಸಬಟ್ಟೆಗಳನ್ನು ಬಡ ಅಂಗವಿಕಲರಿಗೆ ನೀಡಿ ಅವರು ಮಾತನಾಡಿದರು.

    ಅಂಗವಿಕಲರು ಯಾವುದಕ್ಕೂ ಎದೆಗುಂದುವ ಅಗತ್ಯವಿಲ್ಲ. ಒಕ್ಕೂಟ, ಸರ್ಕಾರದ ಸಹಾಯ-ಸಹಕಾರ, ಸೌಲಭ್ಯ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸಮಾಜದಲ್ಲಿ ಉದಾರತೆ, ಸೇವಾ ಗುಣದ ವ್ಯಕ್ತಿಗಳಿಂದಲೇ, ಮಳೆ-ಬೆಳೆ ಬರುತ್ತಿದೆ. ಅಂಗವಿಕಲರ ಒಕ್ಕೂಟದಿಂದ ಮುಂದೆ ಹಮ್ಮಿಕೊಳ್ಳುವ ಯೋಜನೆಗಳಿಗೆ ಭಾರತ ಸ್ಕೌಟ್ಸ್-ಗೈಡ್ಸ್ ವತಿಯಿಂದ ಅಗತ್ಯ ಸಹಾಯ, ಸಹಕಾರ ನೀಡಲಾಗುವುದು ಎಂದು ಹೇಳಿದರು.

    ರೈಲ್ವೆ ಉದ್ಯೋಗಿ ಮಂಜುನಾಥ ಟಿ. ಮಾತನಾಡಿ, ಅಂಗವಿಕಲರ ಒಕ್ಕೂಟ ಸಮಾಜಮುಖಿ ಕಾರ್ಯ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ರೈಲ್ವೆ ಇಲಾಖೆಯಿಂದ ಒಕ್ಕೂಟದ ಕಾರ್ಯಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

    ಒಕ್ಕೂಟದ ಜಿಲ್ಲಾಧ್ಯಕ್ಷ ಕೇಶವ ಟಿ. ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಮಹ್ಮದಗೌಸ್ ಕಳಸಾಪುರ, ಯಮನಪ್ಪ ಅರಬಳ್ಳಿ, ಮಂಗಳಾ ಬೆಟಗೇರಿ, ಪ್ರದೀಪ ಮೇಲ್ಗಡೆ, ರಾಜು ಗಿರಿಯಪ್ಪನವರ, ನವೀನ ಸಾಸ್ವಿಹಳ್ಳಿ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts