More

    ನೋಡಲಾಗಲಿಲ್ಲ ಬಾಯಾರಿದವರ ಬಾಧೆ.. ಯೋಗರಾಜ್​ ಭಟ್​ ಕಡೆಯಿಂದ ಬಂತು ಹೊಸ ಗೀತೆ

    ಎಣ್ಣೆ ಹಾಡುಗಳಿಗೆ ಫೇಮಸ್ಸು ನಮ್ಮ ಯೋಗರಾಜ್​ ಭಟ್ರು. ಅವರ ಸಾಹಿತ್ಯವನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಅವರು ಬರೆಯುವ ಎಣ್ಣೆ ಹಾಡು ಹಾಟ್​ ಫೇವರಿಟ್​. ಅದರಲ್ಲೂ ಇದೀಗ ಸರ್ಕಾರ ಎಣ್ಣೆ ಮಾರಾಟಕ್ಕೆ ಗ್ರೀನ್​ ಸಿಗ್ನಲ್​ ನೀಡಿದೆ. ಇಂಥ ಹೊತ್ತಲ್ಲಿ ಭಟ್ಟರ ಕಡೆಯಿಂದ ಎಣ್ಣೆ ಹಾಡು ಬಂದರೆ ಮದ್ಯ ಪ್ರಿಯರಿಗೆ ಒಂದು ರೀತಿ ಡಬಲ್​ ಧಮಾಕಾ ಇದ್ದಂತೆ.
    ಹೌದು, ಕಳೆದ ಹಲವು ವಾರಗಳ ಲಾಕ್​ಡೌನ್​ ಸಡಿಲಿಕೆ ಹಿನ್ನೆಲೆಯಲ್ಲಿ ವೈನ್​ಶಾಪ್​ಗಳು ತೆರೆದು, ಮದ್ಯಪ್ರಿಯರ ಆಸೆ ಈಡೇರಿಸಿವೆ. ಒಂದಷ್ಟು ಕಟ್ಟುನಿಟ್ಟಿನ ಕ್ರಮಗಳ ಜತೆ ಮಾರಾಟ ಪ್ರಕ್ರಿಯೆ ಬಿರುಸಾಗಿದೆ. ಮದ್ಯದ ಅಂಗಡಿ ಮುಂದೆ ಸರದಿ ಸಾಲಲ್ಲಿ ನಿಂತು ಲಿಂಗ ಬೇಧ ಮರೆತು ನೆಚ್ಚಿನ ಬ್ರಾಂಡ್​ ಹೊತ್ತೊಯ್ಯುತ್ತಿದ್ದಾರೆ ಮದ್ಯಪ್ರಿಯರು. ಈ ಸ್ಥಿತಿ ನೋಡಿ ವಿಕಟ ಕವಿ ಯೋಗರಾಜ್​ ಭಟ್​ಗೆ ಹಾಡೊಂದು ಹೊಳೆದಿದೆ. ವಿಚಿತ್ರ ಏನೆಂದರೆ ಆ ಹಾಡು ಸೃಷ್ಟಿಗೆ ಕಾರಣ ಓರ್ವ ಮಹಿಳೆಯಂತೆ!

    ಇದನ್ನೂ ಓದಿ: ಯಶ್ ಜತೆ ತಮನ್ನಾ ನಟಿಸಲ್ಲ; ಹರಿದಾಡಿದ ವದಂತಿಗೆ ತೆರೆ ಎಳೆದ ನಿರ್ದೇಶಕ ನರ್ತನ್…

    ‘ರಸ್ತೆಗಳ ಮೇಲೆ ಓಡಾಡುತ್ತಿದ್ದಾಗ, ಈ ಮದ್ಯಪಾನ ಪ್ರಿಯರು ವೈನ್​ಶಾಪ್​ ಮುಂದೆ ಸರತಿಯಲ್ಲಿ ನಿಂತಿದ್ದನ್ನು ನೋಡುತ್ತಿದ್ದೆ. ಒಂದಷ್ಟು ಮಂದಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮುಖ ಮುಚ್ಚಿಕೊಳ್ಳುತ್ತಿದ್ದರು. ಅವರ ಕಣ್ಣಲ್ಲಿ, ನಾಚಿಕೆ, ದಾಕ್ಷಿಣ್ಯ, ಬಾಯಾರಿಕೆ, ಮೋಹ, ದಾಹ ನೋಡಿ ಗುಲಾಮ್​ ಅಲಿ ನೆನಪಾದರು. ಹಂಗಾಮ್​ ಹೈ ಕ್ಯೂಂ ಬರ್ಫಾ.. ಹಾಡು ನೆನಪಾಯ್ತು.. ಅವರ ಕಣ್ಣು ನೋಡಿ ಕನ್ನಡದಲ್ಲಿ ನಾನೂ ಒಂದೆರಡು ಸಾಲು ಹಾಡಬೇಕೆನಿಸಿತು. ಆಗ ಸೃಷ್ಟಿಯಾಗಿದ್ದೆ ಈ ಹಾಡು..’

    ಬಾಯಾರಿದೆ ಬೈಬೇಡಿ.. ಒಂಚೂರೆ ನಾ ಕುಡಿದಿರುವೆ
    ಡಕಾಯಿತಿ ಮಾಡಿಲ್ಲ, ಕೊಲೆಪಾತಕ ನಾನಲ್ಲ..
    ಬಾಯಾರಿದೆ ಬೈಬೇಡಿ,. ಒಂಚೂರೆ ನಾ ಕುಡಿದಿರುವೆ
    ನಾ ಕುಡಿದಿರುವೆ.. ನಾ ಕುಡಿದಿರುವೆ..

    ಇದನ್ನೂ ಓದಿ: ಕನ್ನಡದ ಈ ಚಿತ್ರ ನೇರವಾಗಿ ಓಟಿಟಿಯಲ್ಲಿ ಬಿಡುಗಡೆ; ಪುನೀತ್​ ರಾಜ್​ಕುಮಾರ್ ಕೊಟ್ರು ಸುಳಿವು!!

    ಸ್ವತಃ ತಾವೇ ಹಾಡಿರುವ ಈ ವಿಡಿಯೋವನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿರುವ ಯೋಗರಾಜ್​ ಭಟ್, ‘ನೋಡಲಾಗಲಿಲ್ಲ ಬಾಯಾರಿದವರ ಬಾಧೆ..’ ಎಂಬ ಕ್ಯಾಪ್ಶನ್​ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಹಂಗಾಮ್​ ಹೈ ಕ್ಯೂಂ ಬರ್ಫಾ.. ಹಾಡು ಗುನುಗಿದ ಮಹಿಳೆಯನ್ನು ನೋಡಿ ಈ ಹಾಡನ್ನು ಸೃಷ್ಟಿಸಿದ್ದಾರೆ. ‘ಈ ಮೇಲ್ಕಂಡ ಸಾಹಸಕ್ಕೆ ಈ ಸುಂದರ ಪುಣ್ಯಾತ್​ಗಿತ್ತಿಯ ಗಾಯನವೇ ಕಾರಣ’ ಎಂದು ಹೇಳಿಕೊಂಡಿದ್ದಾರೆ.

    ಗುಲಾಮ್ ಅಲಿ ಗೀತೆ

    ನೋಡಲಾಗಲಿಲ್ಲ ಬಾಯಾರಿದವರ ಬಾಧೆ.. 😄

    Yogaraj Bhat ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಮೇ 4, 2020

    ಶೂಟಿಂಗ್​ಗೆ ಸಿದ್ಧರಾಗುತ್ತಿದ್ದ ಕಲಾವಿದರಿಗೆ ಶುರುವಾಯ್ತು ಹೊಸ ರಗಳೆ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts