ಇನ್ನು, ಅಲ್ಲು ಅರ್ಜುನ್ಗೂ ಮುಂಚೆ ನಟ ಜೂ. ಎನ್.ಟಿ.ಆರ್, ನಟ ನಂದಮೂರಿ ಕಲ್ಯಾಣ್ ರಾಮ್, ನಟ ಮಂಚು ಮನೋಜ್ ಅವರ ಕಾರುಗಳಿಗೂ ದಂಡ ವಿಧಿಸಲಾಯ್ತು. ತೆಲುಗು ಚಿತ್ರರಂಗದ ಬೇರೆ ಬೇರೆ ಗಣ್ಯರ ಕಾರುಗಳನ್ನು ಹುಡುಕಿ-ಹುಡುಕಿ ದಂಡ ವಿಧಿಸುತ್ತಿದ್ದಾರೆ ಪೊಲೀಸರು. ಈಗ, ಸ್ಟಾರ್ ನಿರ್ದೇಶಕರೊಬ್ಬರ ಸರದಿ ಅನಿಸುತ್ತೆ. ಹೌದು, ನಿರ್ದೇಶಕ ತ್ರಿವಿಕ್ರಮ್ ಶ್ರಿನಿವಾಸ್ ಅವರ ಕಾರನ್ನು ತಡೆದ ಪೊಲೀಸರು ಕಾರಿನ ಕಿಟಕಿಗೆ ಅಳವಡಿಸಲಾಗಿದ್ದ ಟಿಂಟ್ ತೆಗೆಸಿದ್ದು, 700 ರೂ. ದಂಡ ವಿಧಿಸಿದ್ದಾರೆ. ತ್ರಿವಿಕ್ರಮ್‌ರ ಐಶಾರಾಮಿ ಕಾರನ್ನು ಪೊಲೀಸರು ತಪಾಸಣೆ ನಡೆಸುತ್ತಿರುವ ಫೋಟೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.