More

    ಅಂಗಾಂಗ ದಾನ ದಿನ; ದೇಹದ ಅಂಗಾಂಗಗಳು ಇತರರಿಗೆ ಜೀವನ ನೀಡಲಿದೆ ಎಂದರೆ ಅದಕ್ಕಿಂತ ಸಾರ್ಥಕತೆ ಬೇರೆನಿದೆ: ದಿನೇಶ್ ಗುಂಡೂರಾವ್​

    ಬೆಂಗಳೂರು: ಭಾರತೀಯ ಅಂಗಾಂಗ ದಾನ ದಿನಾಚರಣೆಯ ಹಿನ್ನಲೆ ಬೆಂಗಳೂರಿನ ಸೆಂಟ್ರಲ್ ಕಾಲೇಜು ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್​ ಗುಂಡೂರಾವ್​, ನಮ್ಮ ದೇಹದ ಅಂಗಾಂಗಗಳು ಇತರರಿಗೆ ಜೀವನ ನೀಡಲಿದೆ ಎಂದರೆ ಅದಕ್ಕಿಂತ ಸಾರ್ಥಕತೆ ಬೇರೆನಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ಮಾಡಿ ದಸರಾದಲ್ಲಿ ಏರ್ ಶೋ ನಡೆಸುವಂತೆ ಮನವಿ ಸಲ್ಲಿಸಿದ ಸಿಎಂ

    ಈ ಬಗ್ಗೆ ಮಾತನಾಡಿದ ಅವರು, “ಅಂಗಾಂಗ ದಾನಕ್ಕೆ ಬೇಡಿಕೆ ಹೆಚ್ಚಾಗಿದೆ. ಆದ್ರೆ, ಸರಬರಾಜು ಕಡಿಮೆಯಿದೆ. ವೈದ್ಯಕೀಯ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಕಿಡ್ನಿ, ಶ್ವಾಸಕೋಶ, ಲಿವರ್, ಹೃದಯ ಸೇರಿದಂತೆ ಜೀವ ಉಳಿಸುವ ಅಂಗಾಂಗಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಂಗಾಂಗ ಕಸಿ ಮಾಡಿಸಿಕೊಳ್ಳಲು ಜನ ಸಹ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ” ಎಂದು ಹೇಳಿದರು.

    “ಜನರಲ್ಲಿ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಿದೆ. ಜತೆಗೆ ಪ್ರೇರಣೆಯೂ ಅಗತ್ಯವಿದೆ. ಈ ಕುರಿತು ಮಾರ್ಗದರ್ಶನ ನೀಡುವಲ್ಲಿ ಧರ್ಮಗುರುಗಳ ಪಾತ್ರ ಮುಖ್ಯವಾಗಿದೆ. ಮೌಡ್ಯ ಮತ್ತು ಮೂಢ ನಂಬಿಕೆಗಳಿಂದ ಅನೇಕರು ಅಂಗಾಂಗ ದಾನ ಮಾಡಲು ಹಿಂದೇಟು ಹಾಕುತ್ತಾರೆ. ನಮ್ಮ ದೇಹದ ಅಳಿವಿನ ನಂತರವೂ, ಅಂಗಾಗಗಳು ಎಂಟು ಜನರಿಗೆ ಜೀವನ ನೀಡುತ್ತದೆ ಎಂದರೆ ಅದಕ್ಕಿಂತ ಸಾರ್ಥಕತೆ ಬೇರೆನಿದೆ” ಎಂದು ಹೇಳಿದರು.

    ಇದನ್ನೂ ಓದಿ: ಎದೆ ಹಾಲಿನಿಂದ ಮಗುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ: ಡಾ. ಸಂಜೀವ್​ ಜೋಶಿ

    ಭಾರತೀಯ ಅಂಗಾಂಗ ದಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಅಂಗಾಂಗ ದಾನಕ್ಕೆ ಪ್ರೇರಣೆಯಾಗಿರುವ ನಟ ಪುನೀತ್​ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನಿತ್ ರಾಜಕುಮಾರ್ ಅವರು ಅಂಗಾಂಗ ದಾನ ಮಾಡಿದ 151 ಕುಟುಂಬಗಳನ್ನು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಜಪಾನಂದ ಶ್ರೀಗಳು, ಶಾಸಕ ರಿಜ್ವಾನ್ ಅರ್ಷದ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅನೀಲ್ ಕುಮಾರ್, ಆಯುಕ್ತರಾದ ರಂದೀಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    ಕಡೆಗೂ ಮಹೇಶ್​ ಬಾಬು ಫ್ಯಾನ್ಸ್​ಗಳ ಬೇಡಿಕೆ ಈಡೇರಿಸಿದ ‘ಗುಂಟೂರು ಕಾರಂ’ ಚಿತ್ರತಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts