More

  ದಿನಭವಿಷ್ಯ: ಇಲ್ಲಿದೆ ಇಂದಿನ 12 ರಾಶಿಗಳ ಫಲಾಫಲ

  ಮೇಷ: ಇಂದು ನಿಮ್ಮ ದಿನ ಉತ್ತವಾಗಿರುತ್ತದೆ. ಗಮನಹರಿಸಿ, ಎಚ್ಚರಿಕೆಯಿಂದ ಹೆಜ್ಜೆಯಿಡುವುದು ಸೂಕ್ತ. ಇರುವುದನ್ನು ಆನಂದಿಸುವಿರಿ, ಸಕಾರಾತ್ಮಕ ಯೋಚನೆ ಮಾಡುವಿರಿ, ವ್ಯಾಪಾರದಲ್ಲಿ ಕೊಂಚ ನಷ್ಟ ಸಂಭವಿಸಬಹುದು ಎಚ್ಚರವಹಿಸಿ.

  ವೃಷಭ: ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಹೆಚ್ಚು ಶ್ರಮವಹಿಸುವುದು ಉತ್ತಮ. ಸವಾಲು ಸ್ವೀಕರಿಸುವ ಭರದಲ್ಲಿ ಎಡವಟ್ಟು ಮಾಡಿಕೊಳ್ಳುವ ಸಂಭವವಿದೆ. ಇಂದು ಮಾಡುವ ಕೆಲಸಗಳಲ್ಲಿ ತಾಳ್ಮೆ ಕಳೆದುಕೊಳ್ಳುವುದು ಇರುವುದಿಲ್ಲ. ಇಂದು ಕೈಹಾಕುವ ಎಲ್ಲಾ ಕೆಲಸಗಳು ಅಡೆತಡೆಗಳಿಲ್ಲದೆ ಸಂಪೂರ್ಣಗೊಳ್ಳುವುದು.

  ಮಿಥುನ: ಅನ್ಯರ ಮಾತಿಗೆ ತಲೆದೂಗಬೇಡಿ. ಕೆಲಸದಲ್ಲಿ ಹೆಚ್ಚಿನ ಸಹಾಕಾರ ಸಿಗುವ ನಿರೀಕ್ಷೆಯಿದೆ. ಇಂದು ಉತ್ಸಾಹಭರಿತವಾದ ದಿನವಾದ ಕಾರಣ ಪ್ರಯಾಣ ಕೈಗೊಳ್ಳುವ ಸಾಧ್ಯತೆ. ನಿಮ್ಮ ಕೆಲಸಗಳಲ್ಲಿ ಜಾಣತನವೇ ನಿಮಗೆ ವರವಾಗಲಿದೆ. ಹೊಸ ವ್ಯವಹಾರ-ವಹಿವಾಟು ಆರಂಭಿಸಲು ಇಂದು ಉತ್ತಮ ದಿನವಾಗಿದೆ.

  ಕಟಕ: ಅನುಮಾನ, ಆತಂಕದ ಸ್ವಭಾವ ಹೆಚ್ಚಿರುತ್ತದೆ ಎಚ್ಚರ. ಅನಿರೀಕ್ಷಿತ ಧನಾಗಮನವು ಸಂತಸ ತಂದೊಡ್ಡುವುದು. ಸುಖಾಸುಮ್ಮನೆ ಜಟಾಪಟಿಗೆ ಇಳಿಯುವುದನ್ನು ತಪ್ಪಿಸುವ ಪ್ರಯತ್ನ ಮಾಡಿರಿ.

  ಸಿಂಹ: ವಿದೇಶ ಪ್ರಯಾಣ ಕನಸು ಈಡೇರುವ ದಿನ. ಖರ್ಚು ವೆಚ್ಚಗಳಲ್ಲಿ ತೃಪ್ತರಾಗಿರುತ್ತೀರಿ. ವ್ಯವಹಾರ ವಿಷಯಗಳಲ್ಲಿ ಯಾವುದೇ ತೊಂದರೆಯಿಲ್ಲ. ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುವುದು ಬೇಡ.

  ಕನ್ಯಾ: ಕುಟುಂಬದಲ್ಲಿ ಮಕ್ಕಳ ಮದುವೆ ಬಗ್ಗೆ ಹೆಚ್ಚು ಆಲೋಚನೆ ಮಾಡುವಿರಿ. ಅತಿಯಾದ ಸೌಂದರ್ಯದ ಕಾಳಜಿ. ಯಾವ ಕೆಲಸವನ್ನಾದರು ಧೈರ್ಯದಿಂದ ಎದುರಿಸುವೆ ಎಂಬ ಮನೋಬಲವನ್ನು ಕಡಿಮೆ ಮಾಡಿಕೊಳ್ಳಬೇಡಿ. ನಿವಾಸಕ್ಕೆ ಅತಿಥಿಗಳ ಆಗಮನ ಸಂತೋಷ ತರಲಿದೆ.

  ತುಲಾ: ಉದ್ಯೋಗ ಹುಡುಕುತ್ತಿರುವವರಿಗೆ ಇಂದು ಉತ್ತಮ ಫಲ ಸಿಗುವ ನಿರೀಕ್ಷೆ. ಆರೋಗ್ಯದಲ್ಲಿನ ವ್ಯತ್ಯಾಸದಿಂದ ಸ್ವಲ್ಪ ಕಿರಿಕರಿ ಉಂಟಾಗಬಹುದು. ಸಣ್ಣ-ಪುಟ್ಟ ವಿಚಾರಕ್ಕೆ ಅನ್ಯರ ಜತೆಗೆ ವಿರೋಧ ಮಾಡುವಿರಿ.

  ವೃಶ್ಚಿಕ: ಸಂಪಾದನೆಗೆ ಅತ್ಯಾಪ್ತರ ಸಲಹೆಗಳು ಒಲಿದುಬರುವುದು. ಹೂಡಿಕೆಯ ಬಗ್ಗೆ ಹೆಚ್ಚು ಗಮನಹರಿಸುತ್ತೀರಿ. ಸಂಸಾರದಲ್ಲಿ ಸುಖಾಸುಮ್ಮನೆ ಜಗಳ ಮಾಡಿಕೊಳ್ಳಬೇಡಿ. ಇಂದು ನಿಮ್ಮ ಸಂಗಾತಿಯಿಂದ ಉತ್ತಮ ಬೆಂಬಲ ದೊರಕುವುದು.

  ಧನಸ್ಸು: ವಿಶೇಷ ವಸ್ತುಗಳ ಆಗಮನ. ಪ್ರೀತಿ-ಪ್ರೇಮ ವಿಚಾರದಲ್ಲಿ ಮನಸ್ತಾಪ ಇರುವುದು. ಇತರರಿಂದ ಹಣದ ಸಾಲ ಪಡೆಯುವುದು ಬೇಡ. ಮನಸ್ಸಿನೊಳಗೆ ಗೊಂದಲ ಕಾಡಬಹುದು.

  ಮಕರ: ಪೋಷಕರು, ಹಿರಿಯರ ಮಾತನ್ನು ನಿರ್ಲಕ್ಷ್ಯ ಮಾಡಬೇಡಿ. ವ್ಯಾಪಾರ-ವಹಿವಾಟಿನಲ್ಲಿ ಹೊಸ ಚೈತನ್ಯ ಮೂಡುವುದು. ಕೋಪಕ್ಕೆ ತುತ್ತಾಗದೆ, ತಾಳ್ಮೆಯಿಂದ ವರ್ತಿಸುವುದು ಒಳಿತು. ಆಕಸ್ಮಿಕ ಧನಲಾಭ ಮತ್ತು ಖರ್ಚು-ವೆಚ್ಚ ಇರಲಿದೆ, ವಿವಾಹ ಯೋಗವು ಇದೆ.

  ಕುಂಭ: ನಿಮ್ಮ ಸಹೋದ್ಯೋಗಿಗಳ ಜತೆ ಸುಖಾಸುಮ್ಮನೆ ಗಲಾಟೆ ಮಾಡಿಕೊಳ್ಳಬೇಡಿ. ಪ್ರಯಾಣದಿಂದ ಖರ್ಚು-ವೆಚ್ಚ ಹೆಚ್ಚಾಗಲಿದೆ. ಸಣ್ಣ-ಪುಟ್ಟ ವಿಚಾರಗಳಿಗೆ ಕಿರಿಕಿಡಿ ಮಾಡಿಕೊಳ್ಳುವಿರಿ, ಹೆಚ್ಚು ಗಮನಕೊಡಬೇಡಿ.

  ಮೀನ: ಇಂದಿನ ದಿನ ಚೆನ್ನಾಗಿದ್ದು, ಸ್ನೇಹಿತರು-ಅತ್ಯಾಪ್ತರ ಕೆಲಸಗಳಿಗೆ ಹೆಚ್ಚು ಶ್ರಮಿಸುತ್ತೀರಿ. ಅನ್ಯರ ಮಾತಿಗೆ ಮನಸ್ಸಿಗೆ ಘಾಸಿ ಉಂಟಾಗಬಹುದು. ಸಕಾರಾತ್ಮಕ ಯೋಚನೆ ಇರಲಿ.

  11 ವರ್ಷಗಳಲ್ಲಿ 15 ಫ್ಲಾಪ್, 4 ಹಿಟ್ ಸಿನಿಮಾ! ಇದೊಂದು ಕಾರಣಕ್ಕೆ ಚಿತ್ರರಂಗ ಬೇಡವೆಂದ ಸ್ಟಾರ್​ ನಟಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts