More

    ಲಾಸ್‌ನಲ್ಲಿದ್ದ `ವಕೀಲ್ ಸಾಬ್’ ನಿರ್ಮಾಪಕರಿಗೆ ೧೨ ಕೋಟಿ …

    ಹೈದರಾಬಾದ್: ಪವನ್ ಕಲ್ಯಾಣ್ ಅಭಿನಯದ `ವಕೀಲ್ ಸಾಬ್’ ಚಿತ್ರವು ಏಪ್ರಿಲ್ ೦೯ರಂದು ದೇಶಾದ್ಯಂತ ಬಿಡುಗಡೆಯಾಯಿತು. ಆದರೆ, ಅದರಿಂದ ಅಷ್ಟೇನೂ ಲಾಭವಾಗಲಿಲ್ಲ. ಏಕೆಂದರೆ, ಚಿತ್ರ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಎಲ್ಲ ಕಡೆ ಜನತಾ ಕರ್ಫ್ಯೂ ಮತ್ತು ಲಾಕ್‌ಡೌನ್ ಘೋಷಣೆಯಾಗಿದ್ದರಿಂದ, ಚಿತ್ರ ನೋಡುವುದಕ್ಕೆ ಜನ ಬರಲೇ ಇಲ್ಲ. ಇದರಿಂದ ನಿರ್ಮಾಪಕ ದಿಲ್ ರಾಜುಗೆ ಸಖತ್ ನಷ್ಟವಾಗಿತ್ತು. ಆದರೆ, ಇದೀಗ ಅವರಿಗೆ ಒಂದಿಷ್ಟು ಲಾಭ ಬಂದಿರುವ ಸುದ್ದಿ ಬಂದಿದೆ.

    ಇದನ್ನೂ ಓದಿ: ಓಟಿಟಿಗೆ ಬರುತ್ತಾ ಅಕ್ಷಯ್ ಅಭಿನಯದ `ಬೆಲ್‌ಬಾಟಮ್’?

    ಪ್ರಮುಖವಾಗಿ, `ವಕೀಲ್ ಸಾಬ್’ ಚಿತ್ರವು ಏಪ್ರಿಲ್ ೩೦ರಂದು ಅಮೇಜಾನ್ ಪ್ರೆöÊಮ್‌ನಲ್ಲಿ ಬಿಡುಗಡೆಯಾಗಿದೆ. ಮಧ್ಯರಾತ್ರಿ ೧೨ರಿಂದಲೇ ಚಿತ್ರವು ಸ್ಟಿçÃಮ್ ಆಗುತ್ತಿದ್ದು, ಈಗಾಗಲೇ ಸಾಕಷ್ಟು ಜನ ಚಿತ್ರವನ್ನು ನೋಡಿದ್ದಾರೆ. ಮುಂಚೆ ಈ ಚಿತ್ರವು ಅಮೇಜಾನ್ ಪ್ರೆöÊಮ್‌ಗೆ ಮಾರಾಟವಾದಾಗ, ಚಿತ್ರ ಬಿಡುಗಡೆಯಾಗಿ ೫೦ ದಿನಗಳ ನಂತರ ಓಟಿಟಿಯಲ್ಲಿ ಬಿಡುಗಡೆ ಎಂದು ತೀರ್ಮಾನವಾಗಿತ್ತಂತೆ. ಇದೀಗ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿ ೨೦ ದಿನಗಳಲ್ಲೇ ಓಟಿಟಿಯಲ್ಲಿ ಬಿಡುಗಡೆಯಾಗಿರುವುದರಿಂದ, ಅಮೇಜಾನ್ ಪ್ರೆöÊಮ್‌ನವರು ೧೨ ಕೋಟಿ ರೂ. ಹೆಚ್ಚುವರಿಯಾಗಿ ನೀಡಲಾಗಿದೆ ಎಂದು ಹೇಳಲಾಗಿದೆ. ಮುಂಚೆ ಈ ಚಿತ್ರದ ಡಿಜಿಟಲ್ ಹಕ್ಕುಗಳು ೨೦ಕ್ಕೂ ಹೆಚ್ಚು ಕೋಟಿ ರೂ.ಗೆ ಮಾರಾಟವಾಗಿತ್ತು. ಇದೀಗ ೧೨ ಕೋಟಿ ರೂ. ಬೋನಸ್ ರೂಪದಲ್ಲಿ ನಿರ್ಮಾಪಕ ದಿಲ್ ರಾಜು ಅವರಿಗೆ ಸಿಕ್ಕಿರುವುದು ವಿಶೇಷ.

    ಇದನ್ನೂ ಓದಿ: ಧರ್ಮೇಂದ್ರ-ಹೇಮಾ ಮಾಲಿನಿ ಭೇಟಿಯಾಗಿ ಒಂದು ವರ್ಷವಾಗಿದೆಯಂತೆ

    `ವಕೀಲ್ ಸಾಬ್’ ಚಿತ್ರವು ಹಿಂದಿಯ `ಪಿಂಕ್’ನ ರೀಮೇಕ್ ಆಗಿದ್ದು, ಅಮಿತಾಭ್ ಬಚ್ಚನ್ ಮಾಡಿದ ಪಾತ್ರದಲ್ಲಿ ಪವನ್ ಕಲ್ಯಾಣ್ ಕಾಣಿಸಿಕೊಂಡಿದ್ದಾರೆ. ಪವನ್ ಕಲ್ಯಾಣ್ ಜತೆಗೆ ನಿವೆಥಾ ಥಾಮಸ್, ಪ್ರಕಾಶ್ ರೈ, ಶ್ರುತಿ ಹಾಸನ್ ಮುಂತಾದವರು ನಟಿಸಿದ್ದು, ವೇಣು ಶ್ರೀರಾಮ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

    ಬಿಗ್​ಬಾಸ್​ ಮನೆಯಲ್ಲಿ ಊಟ ತಿಂಡಿ ಬಿಟ್ಟು ಪ್ರತಿಭಟನೆ ಆರಂಭಿಸಿದ ಪ್ರಶಾಂತ್​! ಅಷ್ಟಕ್ಕೂ ಆಗಿದ್ದೇನು ಗೊತ್ತಾ?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts