More

    ದಿಗ್ವಿಜಯ ಕುಟುಕು ಕಾರ್ಯಾಚರಣೆ: ಫೀವರ್ ಕ್ಲಿನಿಕ್​ನಲ್ಲಿ ಚಿಕಿತ್ಸೆಯೂ ಇಲ್ಲ, ಔಷಧವೂ ಇಲ್ಲ

    ಬೆಂಗಳೂರು: ರಾಜಧಾನಿಯಲ್ಲಿ ಕರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಆರಂಭಿಸಲಾದ ಫೀವರ್ ಕ್ಲಿನಿಕ್​ಗಳಲ್ಲಿ ವೈದ್ಯರು, ಔಷಧಗಳು ಕೊರತೆ ಒಂದೆಡೆಯಾದರೆ, ಕೆಲವು ಕ್ಲಿನಿಕ್​ಗಳಲ್ಲಿ ಸೇವೆ ಲಭ್ಯವಿರದೆ ಬೇರೆಡೆ ಹೋಗುವಂತೆ ಸಿಬ್ಬಂದಿ ಸೂಚಿಸುತ್ತಿದ್ದಾರೆ. ದೇಶದಲ್ಲಿ ಶಹಬ್ಬಾಶ್​ಗಿರಿ ಪಡೆದ ರಾಜ್ಯ ಸರ್ಕಾರದ ಉತ್ತಮ ಯೋಜನೆಯೊಂದು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಳ್ಳ ಹಿಡಿದಿರುವುದು ದಿಗ್ವಿಜಯ 247 ನ್ಯೂಸ್ ಸುದ್ದಿವಾಹಿನಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಹಿರಂಗವಾಗಿದೆ.

    ಸಿಲಿಕಾನ್​ಸಿಟಿಯ 6 ಕ್ಲಿನಿಕ್​ಗಳ ನೈಜಸ್ಥಿತಿ

    ಮೆಜೆಸ್ಟಿಕ್- ವೈದ್ಯರಿಲ್ಲ, ಕೆಲಸ ಮಾಡುವ ಸಿಬ್ಬಂದಿಗೇ ಆರೋಗ್ಯ ಸಮಸ್ಯೆಯಿದೆ.

    ಶ್ರೀರಾಂಪುರ- ಸಾಮಾಜಿಕ ಅಂತರ ಕಾಪಾಡದೆ ಜನರಿಗೆ ತಪಾಸಣೆ ಮಾಡಲಾಗುತ್ತಿದೆ.

    ಶೇಷಾದ್ರಿಪುರ- ಕ್ಲಿನಿಕ್ ಹೊರಗೆ ತಪಾಸಣೆ, ಡಯಾಬಿಟಿಸ್ ಮತ್ತು ಹೈಪರ್​ಟೆನ್ಷನ್​ಗೆ ಮಾತ್ರೆಯಿಲ್ಲ.

    ಆಡುಗೋಡಿ- ಮಾಸ್ಕ್ ಹಾಕದೆ ತಪಾಸಣೆ ಮಾಡುವ ವೈದ್ಯರು.
    ವಿಲ್ಸನ್​ಗಾರ್ಡನ್- 2ನೇ ಮಹಡಿಯಲ್ಲಿ ಕ್ಲಿನಿಕ್

    ಕಾರ್ಯನಿರ್ವಹಣೆ. ನೆಲಮಹಡಿ ಬಾಗಿಲು ಮುಚ್ಚಿರುತ್ತದೆ. ಇಲ್ಲಿ 1 ತಿಂಗಳಿಂದ ಸಾಮಾನ್ಯ ರೋಗಕ್ಕೂ ಔಷಧಗಳು ಸಿಗುತ್ತಿಲ್ಲ.

    ಜೆ.ಜೆ. ರಸ್ತೆ- ಕ್ಲಿನಿಕ್​ನಲ್ಲಿ ವೈದ್ಯರ ಬದಲು ಸ್ಟಾಫ್​ನರ್ಸ್ ಒಬ್ಬರಿಂದ ಸೇವೆ. ಸ್ವಚ್ಛತೆ ಇಲ್ಲ.

    ದಿಗ್ವಿಜಯ ಕುಟುಕು ಕಾರ್ಯಾಚರಣೆ: ಫೀವರ್ ಕ್ಲಿನಿಕ್​ನಲ್ಲಿ ಚಿಕಿತ್ಸೆಯೂ ಇಲ್ಲ, ಔಷಧವೂ ಇಲ್ಲಕರೊನಾ ಸೋಂಕು ಹರಡುವಿಕೆ ನಿಯಂತ್ರಣ ಹಾಗೂ ಸಾವಿನ ಸಂಖ್ಯೆ ತಗ್ಗಿಸುವಲ್ಲಿ 444 ಜ್ವರ ತಪಾಸಣಾ ಕೇಂದ್ರ (ಫೀವರ್ ಕ್ಲಿನಿಕ್) ಆರಂಭಿಸಲಾಗಿದೆ. ಬೆಂಗಳೂರಿನಲ್ಲಿ ಮೊದಲು 31 ಫೀವರ್ ಕ್ಲಿನಿಕ್ ಆರಂಭಿಸಿ ಕೇಂದ್ರದ ಶಹಬ್ಬಾಶ್​ಗಿರಿಗೆ ಆರೋಗ್ಯ ಇಲಾಖೆ ಪಾತ್ರವಾಗಿತ್ತು. ಅದರ ಸಂಖ್ಯೆ ಈಗ 50ಕ್ಕೆ ಹೆಚ್ಚಳವಾಗಿದೆ. ಆದರೆ, ಸೌಲಭ್ಯ ಮಾತ್ರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಮೂಲ ಉದ್ದೇಶ ಮರೀಚಿಕೆಯಾಗುತ್ತಿದೆ.

    ವೈದ್ಯಕೀಯ ಶಿಕ್ಷಣ ಸಚಿವರ ಶಹಬ್ಬಾಸ್​ಗಿರಿ

    ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್​ಗೆ ಫೀವರ್ ಕ್ಲಿನಿಕ್​ಗಳ ನಿರ್ಲಕ್ಷ್ಯದ ಬಗ್ಗೆ ತಿಳಿಸಿದಾಗ, ಯಾವುದೇ ಕಾರಣಕ್ಕೂ ಫೀವರ್ ಕ್ಲಿನಿಕ್​ಗಳಲ್ಲಿ ಚಿಕಿತ್ಸೆ ಕೊಡದಿರಲು ಸಾಧ್ಯವೇ ಇಲ್ಲ. ಎಲ್ಲೆಡೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಸಮರ್ಥಿಸಿಕೊಂಡರು.

    ಸತ್ಯ ಬಹಿರಂಗ: ಮೆಜೆಸ್ಟಿಕ್​ನ ಫೀವರ್ ಕ್ಲಿನಿಕ್​ಗೆ ತಪಾಸಣೆಗೆ ಹೋದರೆ ವೈದ್ಯರು ರಜೆಯಲ್ಲಿದ್ದು, ಚೀಟಿ ಕೊಟ್ಟು ಬೇರೆಡೆ ಕಳುಹಿಸಲಾಗುತ್ತಿದೆ. ಇನ್ನು ಹೊಂಬೇಗೌಡ ನಗರ ಕ್ಲಿನಿಕ್​ಗೆ ಹೋದರೆ ತಪಾಸಣೆ ಮಾಡುತ್ತಾರಾದರೂ, ಸಾಮಾನ್ಯ ಕೆಮ್ಮು, ನೆಗಡಿ ಸೇರಿ ಯಾವುದೇ ಸಾಮಾನ್ಯ ರೋಗಕ್ಕೂ ಔಷಧ ಲಭ್ಯವಿಲ್ಲ. ಶ್ರೀರಾಂಪುರ ವ್ಯಾಪ್ತಿಯ ಕ್ಲಿನಿಕ್​ನಲ್ಲಿ ತಪಾಸಣೆ ಮಾಡುವ ವೈದ್ಯರು ಯಾವುದೇ ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಧರಿಸದೆ ತಪಾಸಣೆ ಮಾಡಿ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯರನ್ನು ಕೇಳಿಕೊಂಡು ಹೋದರೆ ಎಲ್ಲ ವೈದ್ಯರು ರಜೆಯಲ್ಲಿದ್ದಾರೆ ಎಂದು ಅಲ್ಲಿನ ಸಿಬ್ಬಂದಿ ಹೇಳುತ್ತಾರೆ. 4 ಜನರು ಕಾರ್ಯ ನಿರ್ವಹಿಸಬೇಕಾದ ಕ್ಲಿನಿಕ್​ನಲ್ಲಿ ಒಬ್ಬರೇ ಕಾರ್ಯನಿರ್ವಹಿಸುತ್ತಿದ್ದಾರೆ.

    ಇದನ್ನೂ ಓದಿ:  ವಿಶ್ವಗುರು: ಚೀನಾದೊಂದಿಗೆ ಯುದ್ಧವಾದ್ರೆ ಯಾರ್ ಗೆಲ್ತಾರೆ?!

    ಆಪತ್ತು ಖಚಿತ: ನಗರದಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ 700ರ ಗಡಿಯಲ್ಲಿದ್ದು, ಅನಾರೋಗ್ಯದ ಕಾರಣದಿಂದ ಪಾಸಿಟಿವ್ ಬರುವ ಪ್ರಕರಣಗಳೂ ಹೆಚ್ಚಾಗುತ್ತಿವೆ. ಮನೆಯಿಂದ ಹೊರಬಾರದ ವೃದ್ಧರು, ಮಕ್ಕಳಲ್ಲೂ ಸೋಂಕು ಕಂಡುಬರುತ್ತಿದೆ. ಕಳೆದ ವಾರದಿಂದ ನಿತ್ಯ ಎರಡಕ್ಕಿಂತ ಹೆಚ್ಚು ಸಾವು ವರದಿಯಾಗುತ್ತಿವೆ. ಆದರೆ, ಫೀವರ್ ಕ್ಲಿನಿಕ್​ನಲ್ಲಿ ಆರೋಗ್ಯ ತಪಾಸಣೆ ಕಾರ್ಯ ನಡೆಯುತ್ತಿಲ್ಲ. ಇದರಿಂದ ಸರ್ಕಾರದ ಫೀವರ್ ಕ್ಲಿನಿಕ್ ನೆಚ್ಚಿಕೊಂಡರೆ ನಗರದ ಜನತೆಗೆ ಸೋಂಕಿನ ಆಪತ್ತು ನಿಶ್ಚಿತ ಎಂಬಂತಾಗಿದೆ.

    ಬಿಎಂಟಿಸಿಯ ಇಬ್ಬರು ಸಿಬ್ಬಂದಿಗೆ ಕರೊನಾ ಸೋಂಕು: 10 ಲಕ್ಷ ಜನರ ಮೇಲಿದೆ ಕರೊನಾ ಕತ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts