More

    success story: ಎರಡು ಕೈಗಳಿಲ್ಲದಿದ್ದರೂ.. ಕ್ರಿಕೆಟ್‌ನಲ್ಲಿ ಶಕ್ತಿ ಪ್ರದರ್ಶನ ಮಾಡುತ್ತಿರುವ ಕ್ರಿಕೆಟಿಗ ಅಮೀರ್

    ನವದೆಹಲಿ: ಕೈ ಇಲ್ಲದಿದ್ದರೂ ಕ್ರಿಕೆಟ್ ಆಡುವ ಕಾಶ್ಮೀರದ ವಿಕಲಾಂಗ ಕ್ರಿಕೆಟಿಗ ಅಮೀರ್ ಹುಸೇನ್ ಲೋನ್ ಇಡೀ ವಿಶ್ವಕ್ಕೆ ಮಾದರಿಯಾಗಿ ನಿಂತಿದ್ದಾರೆ. ಅಮೀರ್ ಹುಸೇನ್ ಲೋನ್, ಕಾಶ್ಮೀರದ ವಾಘಮಾ ಗ್ರಾಮದ 34 ವರ್ಷದ ವಿಕಲಚೇತನ ಕ್ರಿಕೆಟಿಗ, ಸ್ಪೂರ್ತಿದಾಯಕ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಬನ್ನಿ ನಾವಿಂದು ಈ ಸಾಧಕನ ಯಶಶ್ವಿ ಹಾದಿ ಕುರಿತಾಗಿ ತಿಳಿದುಕೊಳ್ಳೋಣ…

    ಕಾಶ್ಮೀರದ ವಾಘಮಾ ಗ್ರಾಮದ 34 ವರ್ಷದ ಅಮೀರ್ ಹುಸೇನ್ ಲೋನ್ ಆಕಸ್ಮಿಕವಾಗಿ ಸಂಭವಿಸಿದ ಅಪಘಾತವು ಅವರನ್ನು ಪಾರ್ಶ್ವವಾಯುವಿಗೆ ಒಳಪಡಿಸಿತು. ಎಂಟನೇ ವಯಸ್ಸಿನಲ್ಲಿ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದಾರೆ.  ಇಂತಹ ಸಂದರ್ಭಗಳಲ್ಲಿ ಜೀವನದಲ್ಲಿ ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಹಲವರು ಖಿನ್ನತೆಯನ್ನು ಅನುಭವಿಸುತ್ತಾರೆ. ಆದರೆ ಅಮೀರ್ ಹುಸೇನ್ ಹಾಗೆ ಮಾಡಲಿಲ್ಲ.

    ಎರಡು ಕೈಗಳಿಲ್ಲದಿದ್ದರೂ ಕ್ರಿಕೆಟ್‌ನಲ್ಲಿ ಆಸಕ್ತಿ ಬೆಳೆಸಿಕೊಂಡರು. ಈಗ ಅವರು ಜಂಟಿಯಾಗಿ ಜಮ್ಮು ಕಾಶ್ಮೀರ ಪ್ಯಾರಾ ಕ್ರಿಕೆಟ್ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. 2013 ರಲ್ಲಿ, ಅಮೀರ್ ತನ್ನ ಕಾಲುಗಳನ್ನು ಬಳಸಿ ಬೌಲಿಂಗ್ ಮಾಡಲು ಪ್ರಾರಂಭಿಸಿದರು. ಅಲ್ಲದೆ, ಕುತ್ತಿಗೆ ಮತ್ತು ಭುಜದ ನಡುವೆ ಬ್ಯಾಟ್ ಹಾಕಿಕೊಂಡು ಬ್ಯಾಟಿಂಗ್ ಅಭ್ಯಾಸ ಮಾಡಿದರು. ಅವರು ಶಾರ್ಜಾದಲ್ಲಿ ನಡೆದ ಯುನೈಟೆಡ್ ಅರಬ್ ಎಮಿರೇಟ್ಸ್ ದುಬೈ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸಿದರು.

    ಅಮೀರ್ ಹುಸೇನ್ ಲೋನ್ ಅವರ ಸ್ಪೂರ್ತಿದಾಯಕ ಪ್ರಯಾಣವನ್ನು ಕೊಂಡಾಡುವ ಮುಂಬೈ ಮೂಲದ ಚಲನಚಿತ್ರ ನಿರ್ಮಾಣ ಸಂಸ್ಥೆ ‘ಪಿಕಲ್ ಎಂಟರ್‌ಟೈನ್‌ಮೆಂಟ್’ ಅಮೀರ್ ಅವರ ಜೀವನಚರಿತ್ರೆ ನಿರ್ಮಿಸಲು ಘೋಷಿಸಿದೆ. ಅಮೀರ್ ಎಂಬ ಶೀರ್ಷಿಕೆಯ ಈ ಬಯೋಪಿಕ್ ಅನ್ನು ಬಿಗ್ ಬ್ಯಾಟ್ ಫಿಲ್ಮ್ಸ್ ನಿರ್ಮಿಸುತ್ತಿದೆ ಮತ್ತು ಮಹೇಶ್ ವಿ ಭಟ್ ನಿರ್ದೇಶಿಸಿದ್ದಾರೆ. ಈ ಬಯೋಪಿಕ್‌ನಲ್ಲಿ ಅಮೀರ್ ಹುಸೇನ್ ಲೋನ್ ಪಾತ್ರದಲ್ಲಿ ನಟಿಸಲು ಬಯಸುವುದಾಗಿ ಬಾಲಿವುಡ್ ನಟ ವಿಕ್ಕಿ ಕೌಶಲ್ ಹೇಳಿದ್ದಾರೆ. ಯುವ ಕ್ರಿಕೆಟಿಗ ಕ್ರಿಕೆಟ್ ಲೋಕದಲ್ಲಿ ಸ್ಪೂರ್ತಿದಾಯಕ ವ್ಯಕ್ತಿ ಎಂದು ಎಲ್ಲರಿಂದಲೂ ಹೊಗಳುತ್ತಿದ್ದಾರೆ.

    success story; ಸೈಕಲ್​​ನಲ್ಲಿ ಪುಸ್ತಕ ಮಾರಾಟ ಮಾಡ್ತಿದ್ದವ ಇಂದು ಪುಸ್ತಕ ಕಾರ್ಖಾನೆಯ ಮಾಲೀಕ

    ಸರ್ಕಾರಿ ಶಾಲೆ ಶಿಕ್ಷಕನಿಗೆ ಬೈಕ್ ಗಿಫ್ಟ್​ ನೀಡಿ ಬೀಳ್ಕೊಟ್ಟ ಗ್ರಾಮಸ್ಥರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts