More

    98 ಕೋಟಿ ರೂ. ಆಸ್ತಿಯನ್ನು ವಕ್ಫ್​ ಬೋರ್ಡ್​ಗೆ ಕೊಟ್ಟರೇ, ನಟ ದಿಲೀಪ್​ ಕುಮಾರ್? ವೈರಲ್ ಪೋಸ್ಟ್​ನ ಅಸಲಿಯತ್ತೇನು?

    ಮುಂಬೈ : ಇತ್ತೀಚೆಗೆ ನಿಧನರಾದ ಬಾಲಿವುಡ್​ನ ಹಿರಿಯ ನಟ ದಿಲೀಪ್​ ಕುಮಾರ್​ ಅಲಿಯಾಸ್​ ಯೂಸುಫ್​ ಖಾನ್​ ಅವರ ಬಗ್ಗೆ ಜಾಲತಾಣದಲ್ಲಿ ಸುದ್ದಿಯೊಂದು ವೈರಲ್​ ಆಗಿದೆ. ಅದೆಂದರೆ, ಅವರು ಸಾಯುವ ಮುನ್ನ ತಮ್ಮ 98 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಕ್ಫ್​ ಬೋರ್ಡ್​ಗೆ ನೀಡಿದ್ದಾರೆ ಎಂಬುದು.

    ಜುಲೈ 7 ರಂದು 98 ವರ್ಷ ವಯಸ್ಸಿನ ದಿಲೀಪ್​ ಕುಮಾರ್​ ಅವರು ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಮೃತಪಟ್ಟಾಗಿನಿಂದ ಅವರ ಬಗ್ಗೆ ಹಲವು ಸಂದೇಶಗಳು ಹರಿದಾಡುತ್ತಿವೆ. ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ದಿಲೀಪ್​ಕುಮಾರ್​ ಅವರು ವಕ್ಫ್​ ಬೋರ್ಡ್​ಗೆ 98 ಕೋಟಿ ಮೌಲ್ಯದ ತಮ್ಮ ಆಸ್ತಿಯನ್ನು ಬರೆದುಹೋಗಿದ್ದಾರೆ ಎಂದು ಹೇಳಿದ್ದಾರೆ. ಹಾಗೇ ಅದನ್ನು ಕೋಮು ಸೌಹರ್ದತೆ ಕೆಡಿಸುವಂತಹ ಧಾಟಿಯಲ್ಲಿ ಪೋಸ್ಟ್​ ಮಾಡಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಕರೊನಾ ಸೋಂಕಿತರು ಸಾಕುಪ್ರಾಣಿಗಳಿಂದಲೂ ದೂರವಿರಬೇಕು!; ಇನ್ನೇನು ಹೇಳುತ್ತೆ ಈ ಅಧ್ಯಯನ?

    ಜಾಗರಣ್ ಪತ್ರಿಕೆಯ ವಿಶ್ವಾಸ್​ ನ್ಯೂಸ್​ ವಿಭಾಗವು ಈ ವೈರಲ್ ಪೋಸ್ಟ್​ನ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸಿದ್ದು, ಅದು ಪೂರ್ಣ ರೀತಿಯಲ್ಲಿ ಸುಳ್ಳು ಎಂಬುದು ತಿಳಿದುಬಂದಿದೆ.

    ಈ ಬಗ್ಗೆ ದಿಲೀಪ್​ಕುಮಾರ್​ ಅವರ ವಕ್ತಾರರಾದ ಫೈಸಲ್​ ಫಾರುಖಿ ಅವರನ್ನು ವಿಚಾರಿಸಲಾಗಿ, ಇದು ಸುಳ್ಳು ಮಾಹಿತಿ ಎಂದು ತಿಳಿಸಿದ್ದಾರೆ. ಮಹಾರಾಷ್ಟ್ರ ವಕ್ಫ್​ ಬೋರ್ಡ್​ನ ಮುಖ್ಯಸ್ಥ ಅನೀಸ್​ ಶೇಖ್​ ಅವರನ್ನು ವಿಚಾರಿಸಲಾಗಿ, ದಿಲೀಪ್​ ಸಾಹೇಬ್​ ಯಾವುದೇ ಆಸ್ತಿಯನ್ನು ವಕ್ಫ್​ಗೆ ನೀಡಿಲ್ಲ ಎಂಬುದು ತಿಳಿದುಬಂದಿದೆ ಎಂದು ಜಾಗರಣ್ ವರದಿ ಮಾಡಿದೆ. (ಏಜೆನ್ಸೀಸ್)

    ಸಿನಿಮೀಯ ಶೈಲಿಯಲ್ಲಿ ವೃದ್ಧನ ಅಪಹರಣ! ಬೆದರಿಸಿ ಆಸ್ತಿಪತ್ರಕ್ಕೆ ಸಹಿ ಪಡೆದರು!

    ರಸ್ತೆಯಲ್ಲಿ ಉಗುಳಿ 33 ಲಕ್ಷ ರೂಪಾಯಿ ದಂಡ ಕಕ್ಕಿದ ಮುಂಬೈಕರರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts