ಅಮೀರ್ ಕಳಿಸಿದ ಗೋಧಿ ಹಿಟ್ಟಿನ ಪ್ಯಾಕೆಟ್‌ನಲ್ಲಿ ಏನಿತ್ತು?

blank

ಲಾಕ್‌ಡೌನ್‌ನಿಂದ ತತ್ತರಿಸಿರುವ ಅನೇಕ ಜನರಿಗೆ ಬಾಲಿವುಡ್ ಸೆಲೆಬ್ರಿಟಿಗಳು ತಮ್ಮದೇ ರೀತಿಯಲ್ಲಿ ಸಹಾಯ ಮಾಡುತ್ತಲೇ ಬಂದಿದ್ದಾರೆ. ಅಮೀರ್ ಖಾನ್ ಸಹ ಸದ್ದಿಲ್ಲದೆ ಒಂದಿಷ್ಟು ದೇಣಿಗೆ ನೀಡುವುದರ ಜತೆಗೆ, ತೆರೆಮರೆಯಲ್ಲಿ ಅಗತ್ಯವಿರುವವರಿಗೆ ಸಹಾಯ ಮಾಡುತ್ತಿದ್ದಾರೆ.ಈ ಮಧ್ಯೆ, ಅವರು ಅಗತ್ಯವಿರುವವರಿಗೆ ಹಣ ಹಂಚಿದ್ದಾರೆ ಎಂಬ ಸುದ್ದಿಯೊಂದು ಕೇಳಿ ಬಂದಿರುವುದಷ್ಟೇ ಅಲ್ಲ, ಸಖತ್ ವೈರಲ್ ಕೂಡಾ ಆಗಿದೆ.

blank

ಏಪ್ರಿಲ್ 23ರಂದು ದೆಹಲಿಯಲ್ಲಿ ಅಗತ್ಯವಿರುವವರಿಗೆ ಅನುಕೂಲವಾಗಲಿ ಎಂದು ಅಮೀರ್ ಖಾನ್ ಒಂದು ಟ್ರಕ್ ಗೋಧಿ ಹಿಟ್ಟು ಕಳಿಸಿದ್ದಾರೆ. ಒಂದು ಕೆಜಿಯ ಈ ಪ್ಯಾಕೆಟ್‌ಗಳನ್ನು ಅಲ್ಲಲ್ಲಿ ಹಂಚಲಾಗಿದೆ. ಕೆಲವರು, ಒಂದು ಕೇಜಿ ಇಟ್ಟುಕೊಂಡು ಏನು ಮಾಡುವುದು ಎಂದು ತಾತ್ಸಾರ ಮಾಡಿ ವಾಪಸ್ಸು ಕಳಿಸಿದ್ದಾರೆ. ಇನ್ನೂ ಕೆಲವರು ಪಾಲಿಗೆ ಬಂದಿದ್ದು ಪಂಚಾಮೃತ ಎಂದು ತೆಗೆದುಕೊಂಡು ಹೋಗಿದ್ದಾರೆ. ಮನೆಗೆ ತೆಗೆದುಕೊಂಡು ಹೋಗಿ ಆ ಪ್ಯಾಕೆಟ್ ಬಿಚ್ಚಿದರೆ, ಅದರಲ್ಲ 15 ಸಾವಿರ ನಗದಿತ್ತಂತೆ.

ದುಡ್ಡು ಹಂಚುವುದಕ್ಕೆ ಹೋದರೆ, ಆಗ ಅದು ಯಾರ‌್ಯಾರದೋ ಪಾಲಾಗಬಹುದು ಎಂಬ ಭಯದಿಂದ ಅಮೀತ್ ಈ ರೀತಿಯ ಐಡಿಯಾ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗೆ ಒಂದು ಕೆಜಿಯ ಪ್ಯಾಕೆಟ್‌ನಲ್ಲಿಟ್ಟು ಹಂಚಿದರೆ, ತೀರಾ ಅಗತ್ಯವಿರುವವರಿಗೆ ತಲುಪಿಸುವುದಕ್ಕೆ ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ, ಅವರು ಈ ರೀತಿ ಮಾಡಿದ್ದಾರಂತೆ. ಈ ಘಟನೆಯ ಕುರಿತು ಒಂದು ವೀಡಿಯೋ ವೈರಲ್ ಆಗಿದ್ದು, ಅದು ನಿಜವೋ, ಸುಳ್ಳೋ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಆದರೆ, ಇಂಡೋನೇಷ್ಯಾದ ಅಮೀರ್ ಅಭಿಮಾನಿಗಳು ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಗೋಧಿ ಹಿಟ್ಟಿನ ಪ್ಯಾಕೆಟ್‌ಗಳ ಫೋಟೋ ಹಾಕಿ, ಅಮೀರ್ ಉದಾರತೆಯ ಬಗ್ಗೆ ಹಾಡಿ ಹೊಗಳುತ್ತಿದ್ದಾರೆ.

ಇಷ್ಟಕ್ಕೂ ಅಮೀರ್​, ಹೀಗೆ ಗೋಧಿ ಹಿಟ್ಟಿನ ಪ್ಯಾಕೆಟ್​ಗಳಲ್ಲಿ ದುಡ್ಡಿಟ್ಟು ಹಂಚಿದ್ದಾರಾ? ಈ ಘಟನೆಯ ಸತ್ಯಾಸತ್ಯತೆಯ ಕುರಿತು ಹಲವು ಗೊಂದಲಗಳಿದ್ದು, ಅವೆಲ್ಲಾ ಇನ್ನಷ್ಟೇ ಬಗೆಹರಿಯಬೇಕಿದೆ.

ರಿಷಿ ಕಪೂರ್ ದೇಹ; ಕರಣ್ ಜೋಹಾರ್ ಮುಖ … ಇದು ಹೇಗೆ ಸಾಧ್ಯ ಆಯ್ತು ಗೊತ್ತಾ?

https://www.instagram.com/p/B_c8CSfBtdb/?utm_source=ig_embed

Share This Article
blank

ತೂಕ ಇಳಿಸಿಕೊಳ್ಳಬೇಕೆಂದರೆ ಸಂಜೆ 7 ಗಂಟೆಯ ಮೊದಲು ಮಾತ್ರ ಊಟ ಮಾಡಿ! dinner

dinner :  ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರು ವ್ಯಾಯಾಮ…

ಹೊಳೆಯುವ ಚರ್ಮಕ್ಕಾಗಿ ಬಾಳೆಹಣ್ಣಿನ ಸಿಪ್ಪೆ! banana peel ಬಳಸುವ ಸರಳ ಮಾರ್ಗಗಳು ಇಲ್ಲಿವೆ…

 banana peel : ಬಾಳೆಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಅನೇಕ ಜನರು ಬಾಳೆಹಣ್ಣಿನಿಂದ ವಿವಿಧ ರುಚಿಕರವಾದ ಸಿಹಿತಿಂಡಿಗಳನ್ನು ಸಹ…

blank