More

    ಏನಿದು ‘ಸೌಲ್​ ಆಫ್​ ದಿಯಾ’? ಇಲ್ಲಿದೆ ನೋಡಿ ಉತ್ತರ …

    ಬೆಂಗಳೂರು: ಈ ವರ್ಷದ ಬಹುಚರ್ಚಿತ ಸಿನಿಮಾಗಳಲ್ಲೊಂದು ‘ದಯಾ’. ಫೆಬ್ರವರಿಯಲ್ಲಿ ಬಿಡುಗಡೆಯಾದ ಈ ಚಿತ್ರ ದೊಡ್ಡ ಹಿಟ್​ ಆಗಬಹುದು ಎಂದು ಯಾರೆಂದರೆ ಯಾರೂ ನಿರೀಕ್ಷಿಸಿರಲಿಲ್ಲ. ಮೊದಲಿಗೆ, ಇದು ತಡವಾಗಿ ಬಿಡುಗಡೆಯಾದ ಚಿತ್ರ. ಎರಡನೆಯದಾಗಿ, ಹೊಸ ಮುಖಗಳೇ ಈ ಚಿತ್ರದಲ್ಲಿದ್ದರು. ಹಾಗಾಗಿ, ಚಿತ್ರದ ಬಗ್ಗೆ ಯಾರಿಗೂ ವಿಶೇಷವಾದ ನಿರೀಕ್ಷೆಗಳಿರಲಿಲ್ಲ. ಆದರೆ, ಎಲ್ಲರ ನಿರೀಕ್ಷೆಗಳನ್ನೂ ಮೀರಿ ಈ ಚಿತ್ರ ಜನಪ್ರಿಯವಾಗಯಿತು.

    ‘ದಿಯಾ’ ನೋಡಿದ ಬಹುತೇಕರು ಹೇಳಿದ್ದು ಒಂದೇ ಮಾತು. ಟ್ರಾಜಿಡಿ ಜಾಸ್ತಿ ಆಯ್ತು, ಕ್ಲೈಮ್ಯಾಕ್ಸ್ ಸ್ವಲ್ಪ ಹಗುರಬೇಕು ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿ ಬಂತು. ಇದನ್ನು ಗಂಭೀರವಾಗಿ ತೆಗೆದುಕೊಂಡ ಚಿತ್ರತಂಡ, ಇನ್ನೇನು ಸ್ವಲ್ಪ ಬದಲಾವಣೆ ಮಾಡಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್ ಬಂತು.

    ಇದನ್ನೂ ಓದಿ: ಪ್ರಭು ಜಾಗಕ್ಕೆ ವಸಿಷ್ಠ ಸಿಂಹ … ‘ಎವರು’ ಕನ್ನಡ ರೀಮೇಕ್‌ಗೆ ಚಾಲನೆ

    ಈಗ ಲಾಕ್‌ಡೌನ್ ಮುಗಿದು, ಇದೇ 23ಕ್ಕೆ ಚಿತ್ರ ಮರುಬಿಡುಗಡೆಯಾಗುತ್ತಿದೆ. ಈ ಬಾರಿಯಾದರೂ ಪ್ರೇಕ್ಷಕರಿಗೆ ಒಂದಿಷ್ಟು ಚೇಂಜ್ ಕೊಡುವ ಎಂದು ನಿರ್ಧರಿಸಿರುವ ಚಿತ್ರತಂಡ, ಕ್ಲೈಮ್ಯಾಕ್ಸ್ ಬದಲಾಯಿಸಿ, ಒಂದು ಹಾಡು ಸೇರಿಸಿ ಮರುಬಿಡುಗಡೆ ಮಾಡುತ್ತಿದೆ.

    ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ನಿರ್ದೇಶಕ ಅಶೋಕ್, ‘ಟ್ರಾಜಿಡಿ ಜಾಸ್ತಿ ಎಂಬ ಅಭಿಪ್ರಾಯ ವ್ಯಕ್ತವಾದ್ದರಿಂದ ಕ್ಲೈಮ್ಯಾಕ್ಸ್‌ನಲ್ಲೊಂದು ಟ್ವಿಸ್ಟ್ ಇಟ್ಟಿದ್ದೇವೆ. ಇನ್ನು, ಇದಕ್ಕೂ ಮುನ್ನ ‘ಸೌಲ್ ಆ್ ದಿಯಾ’ ಎಂಬ ಪ್ರಮೋಷನಲ್ ಹಾಡನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದೆವು. ಈ ಹಾಡನ್ನು ಚಿತ್ರದಲ್ಲಿ ಮೂರು ಕಡೆ ಬಿಟ್ ಆಗಿ ಸೇರಿಸಿದ್ದೇವೆ. ಈ ಹೊಸ ‘ದಿಯಾ’ಳನ್ನು, ಅಕ್ಟೋಬರ್ 23ರಿಂದ ನೋಡಬಹುದು’ ಎನ್ನುತ್ತಾರೆ ಅವರು.

    ಇದನ್ನೂ ಓದಿ: ‘ನಡು ರಸ್ತೆಯಲ್ಲಿ ಕಂಗನಾಳನ್ನು ಅತ್ಯಾಚಾರ ಮಾಡಬೇಕು’ ಎಂದ ವಕೀಲ; ಮುಂದೆ ನಡೆದಿದ್ದೇ ಬೇರೆ!!

    ‘ದಿಯಾ’ ಚಿತ್ರದ ರೀಮೇಕ್ ಹಕ್ಕುಗಳು ಬೇರೆ ಭಾಷೆಗಳಿಗೆ ಮಾರಾಟವಾಗಿದ್ದು, ಹಿಂದಿ ಅವತರಣಿಕೆಯನ್ನು ಅಶೋಕ್ ಅವರೇ ನಿರ್ದೇಶಿಸುವ ಸಾಧ್ಯತೆ ಇದೆಯಂತೆ. ಅದರ ಜತೆಗೆ ಅವರು ಇನ್ನೊಂದು ಕಥೆ ಬರೆಯುತ್ತಿದ್ದು, ಬಹುಶಃ ಮುಂದಿನ ವರ್ಷ ಅದು ಶುರುವಾಗುವ ಸಾಧ್ಯತೆ ಇದೆ ಎನ್ನುತ್ತಾರೆ.

    ‘ದಿಯಾ’ ಚಿತ್ರದಲ್ಲಿ ಖುಷಿ, ಪೃಥ್ವಿ ಅಂಬರ್​, ದೀಕ್ಷಿತ್​ ಶೆಟ್ಟಿ, ಪವಿತ್ರಾ ಲೋಕೇಶ್​ ಮುಂತಾದವರು ನಟಿಸಿದ್ದು, ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಈ ಚಿತ್ರವನ್ನು ನಿರ್ಮಿಸಿರುವವರು ಕೃಷ್ಣಚೈತನ್ಯ.

    ಒಬ್ಬ ನಾಯಕ; ಇಬ್ಬರು ನಾಯಕಿಯರು … ಇದೊಂದು ಸ್ನೇಹದ ಕಥೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts