More

    ಧ್ರುವ ತಮ್ಮ ಕೂದಲನ್ನು ಏನು ಮಾಡಿದರು ಗೊತ್ತಾ?

    ಬೆಂಗಳೂರು: ಎರಡು ವರ್ಷಗಳ ನಂತರ ಧ್ರುವ ಸರ್ಜಾ ಕೊನೆಗೂ ತಮ್ಮ ಕೂದಲಿಗೆ ಕತ್ತರಿ ಹಾಕಿಸಿದ್ದಾರೆ. ‘ಪೊಗರು’ ಚಿತ್ರಕ್ಕಾಗಿ ಅವರು ಇಷ್ಟುದ್ಧ ಕೂದಲು ಬಿಟ್ಟಿದ್ದರು. ಅದೇ ಹೇರ್​ಸ್ಟೈಲ್​ನಲ್ಲಿ ಅವರು ಮದುವೆಯಾಗಿದ್ದರು. ಇದೀಗ ‘ಪೊಗರು’ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿಸಿರುವ ಅವರು, ತಮ್ಮ ಕೂದಲಿಗೆ ಶುಕ್ರವಾರ ಕತ್ತರಿ ಹಾಕಿಸಿದ್ದಾರೆ.

    ಇದನ್ನೂ ಓದಿ: ಆತ್ಮಚರಿತ್ರೆ ಬರೆಯದಿರಲು ಸೈಫ್​ ಅಲಿ ಖಾನ್​ ನಿರ್ಧಾರ

    ಧ್ರುವ ತಮ್ಮ ಕೂದಲನ್ನು ಏನು ಮಾಡಿದ್ದಾರೆ ಗೊತ್ತಾ? ಕ್ಯಾನ್ಸರ್​ ಪೇಶಂಟ್​ಗಳಿಗಾಗಿ ವಿಗ್​ ಮಾಡುವುದಕ್ಕೆ ತಮ್ಮ ಕೂದಲನ್ನು ಕೊಟ್ಟಿದ್ದಾರೆ. ಈ ಕುರಿತು ಒಂದು ವಿಡಿಯೋ ಮಾಡಿರುವ ಅವರು, ಅದರಲ್ಲಿ ತಮ್ಮ ಕೂದಲನ್ನು ಏತಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ವಿವರಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ”ಪೊಗರು’ ಚಿತ್ರೀಕರಣ ಮುಗಿದಿದೆ. ಹೇರ್​ಕಟ್​ ಮಾಡಿಸಬೇಕು ಎಂದು ಹೊರಟಾಗ ಸ್ನೇಹಿತರು ತಿಳಿಹೇಳಿದರು. 10 ಇಂಚಿಗಿಂಥ ಉದ್ಧವಿರುವ ಕೂದಲನ್ನು ಕತ್ತರಿಸಿ ಬಿಸಾಕುವ ಬದಲು, ಕ್ಯಾನ್ಸರ್​ ಪೇಶಂಟ್​ಗಳಿಗೆ ದಾನ ಮಾಡು ಎಂದರು. ಈಗಾಗಲೇ ಸಾಕಷ್ಟು ತಮ್ಮ ಕೂದಲನ್ನು ಹೀಗೆ ದಾನ ಮಾಡಿದ್ದಾರೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕ್ಯಾನ್ಸರ್​ ಪೇಶಂಟ್​ಗಳಿಗೆ ವಿಗ್​ ಮಾಡಿಸುವ ಸಲುವಾಗಿ ನಾನು ನನ್ನ ಕೂದಲನ್ನು ದಾನ ಮಾಡುತ್ತಿದ್ದೇನೆ’ ಎಂದು ಅವರು ಹೇಳಿಕೊಂಡಿದ್ದಾರೆ.

    ತಾವು ದಾನ ಮಾಡಿದ್ದಷ್ಟೇ ಅಲ್ಲ, ಇತರರಿಗೂ ದಾನ ಮಾಡುವುದಕ್ಕೆ ಹೇಳಿರುವ ಧ್ರುವ, ಇದರಿಂದ ಸಾಕಷ್ಟು ಜನರಿಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಕರಣ್​ ಜೋಹರ್​ ವಿರುದ್ಧ ದೂರು ಕೊಟ್ಟ ಮಧುರ್​ ಭಂಡಾರ್ಕರ್​

    ಅಂದಹಾಗೆ, ‘ದುಬಾರಿ’ ಚಿತ್ರದ ಮುಹೂರ್ತ ಈಗಾಗಲೇ ಮುಗಿದಿದ್ದು, ಡಿಸೆಂಬರ್​ನಿಂದ ಚಿತ್ರೀಕರಣ ಶುರುವಾಗಲಿದೆ. ಈ ಚಿತ್ರವನ್ನು ನಂದಕಿಶೋರ್​ ನಿರ್ದೇಶನ ಮಾಡುತ್ತಿದ್ದು, ಉದಯ್​ ಮೆಹ್ತಾ ನಿರ್ಮಾ ಮಾಡುತ್ತಿದ್ದಾರೆ. ಚಂದನ್​ ಶೆಟ್ಟಿ, ಈ ಚಿತ್ರದ ಸಂಗೀತ ನಿರ್ದೇಶಕರು.

    ಬಿಕಿನಿಯಲ್ಲಿ ಮಗಳು, ಫೋಟೋ ಕ್ಲಿಕ್ಕಿಸಿದ ಅಪ್ಪ; ವಿಟಮಿನ್-ಡಿಗಾಗಿ ಮೈಯೊಡ್ಡಿದ ನಟಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts