More

    ಆಯುಷ್ಮಾನ್ ಸದ್ಬಳಕೆಗೆ ಡಿಎಚ್‌ಒ ಮನವಿ

    ಆಯುಷ್ಮಾನ್ ಸದ್ಬಳಕೆಗೆ ಡಿಎಚ್‌ಒ ಮನವಿ
    ಚಿತ್ರದುರ್ಗ: ಆಯುಷ್ಮಾನ್ ಭಾರತ್-ಪ್ರಧಾನಮಂತ್ರಿ ಜನಾರೋಗ್ಯ ಆರೋಗ್ಯ ಕರ್ನಾಟಕ ಯೋಜನೆ ಪ್ರಯೋಜನ ಪಡೆಯುವಂತೆ ಡಿಎಚ್‌ಒ ಆರ್.ರಂಗನಾಥ್ ನಾಗರಿಕರಲ್ಲಿ ಮನವಿ ಮಾಡಿದ್ದಾರೆ. ಆಯುಷ್ಮಾನ್ ಕಾರ್ಡ್‌ಗಳನ್ನು ಗ್ರಾಮ ಒನ್‌ನಿಂದ ರೇಷನ್‌ಕಾರ್ಡ್ ಲಿಂಕ್ ಆಗಿರುವ ಆಧಾರ್ ಕಾರ್ಡ್ ನೀಡಿ ಉಚಿತವಾಗಿ ಪಡೆಯಬಹುದು.

    ಆಯುಷ್ಮಾನ್ ಕಾರ್ಡ್ ಹೊಂದಿರುವ ಬಿಪಿಎಲ್ ಫಲಾನುಭವಿಗಳಿಗೆ ವರ್ಷಕ್ಕೆ 5 ಲಕ್ಷ ರೂ.ವರೆಗೂ ಎಪಿಎಲ್ ಫಲಾನುಭವಿಗಳಿಗೆ 1.50 ಲಕ್ಷ ರೂ.ವರೆಗೂ ಸಹ ಪಾವತಿ ಆಧಾರದಲ್ಲಿ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಸಂಸ್ಥೆಗೆ ಭರಿಸಲಿದೆ. ಈ ಕಾರ್ಡ್‌ನ ನೆರವಿನಿಂದ ದೇಶದಲ್ಲಿ ಎಲ್ಲೇ ಇದ್ದರೂ ಉಚಿತ ಚಿಕಿತ್ಸೆಗೆ ಪೋರ್ಟಬಿಲಿಟಿ ಸೌಲಭ್ಯವಿದೆ.
    ತುರ್ತು ಸಂದರ್ಭದಲ್ಲಿ 171 ಚಿಕಿತ್ಸಾ ವಿಧಾನಗಳಿಗೆ ರೋಗಿ ನೇರವಾಗಿ ಸರ್ಕಾರಿ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ರೆಫರಲ್ ಅವಶ್ಯಕತೆ ಇರುವುದಿಲ್ಲ. ಈ ಕಾರ್ಡ್‌ನ್ನು 14 ಸಂಖ್ಯೆಯ ಆಭಾ ಹೆಲ್ತ್ ಐಡಿಯೊಂದಿಗೆ ಸಂಯೋಜಿ ಸಲಾಗಿದೆ. ಕಾರ್ಡ್ ಇದ್ದರೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದಲ್ಲಿ ಮಾತ್ರ ರೆಫರಲ್ ಆಧಾರದ ಮೇಲೆ ನೋಂದಾಯಿತ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ಪಡೆಯಬಹುದು.

    ಜಿಲ್ಲೆಯಲ್ಲಿ 14,97,132 ಆಭಾ ಕಾರ್ಡ್ ಗುರಿ ಇದ್ದು,4,80,060 ಕಾರ್ಡ್ ಜನರೇಟ್ ಆಗಿದೆ. 10,17,072 ಆಭಾ ಕಾರ್ಡ್‌ಗಳನ್ನು ಮಾಡಿಸಲು ಸಾರ್ವಜನಿಕರು ಸಹಕರಿಸ ಬೇಕು. ಹೆಚ್ಚಿನ ಮಾಹಿತಿಗೆ 104 ಅಥವಾ 14555 ಕ್ಕೆ ಕರೆಮಾಡ ಬಹುದೆಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts