More

    ಕೇಂದ್ರ ಸರ್ಕಾರ ಟೀಕಿಸುವ ಭರದಲ್ಲಿ ಪಾಕಿಸ್ತಾನವನ್ನು ಹಾಡಿ ಹೊಗಳಿದ ಕಾಂಗ್ರೆಸ್​ ಮುಖಂಡ!

    ಧಾರವಾಡ: ಮಹಾಮಾರಿ ಕರೊನಾ ನಿಯಂತ್ರಣ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್​ ಮುಖಂಡರೊಬ್ಬರು ಪಾಕಿಸ್ತಾನವನ್ನು ಹೊಗಳಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

    ಧಾರವಾಡದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲಕುಮಾರ್​ ಪಾಟೀಲ ನವಲಗುಂದದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ಪಾಕ್ ಪರ ಮಾತಗಳನ್ನಾಡಿದ್ದಾರೆ.

    ಇದನ್ನೂ ಓದಿ: ಹಬ್ಬಕ್ಕೆಂದು ಅಜ್ಜಿ ಊರಿಗೆ ಹೋದ ಯುವಕ ಮರಳಿದ್ದು ಶವವಾಗಿ: ತಡರಾತ್ರಿ ನಡೆಯಿತು ಭೀಕರ ಘಟನೆ

    ಕೇಂದ್ರ ಸರ್ಕಾರದ ಕೈಯಲ್ಲಿ ಏನು ಆಗಲಿಲ್ಲ. ಎಲ್ಲರೂ ಕಾರ್ಮಿಕರು ರಸ್ತೆಗೆ ಬಿದ್ದರು. ದಿನಾ ದುಡಿದು ತಿನ್ನುವವರು ಸಾವಿಗೀಡಾದರು. ಆದರೂ ಕರೊನಾ ಮಾತ್ರ ನಿಯಂತ್ರಣಕ್ಕೆ ಬಂದೇ ಇಲ್ಲ ಎಂದರು.

    ಉದಾಹರಣೆಗೆ ಪಾಕಿಸ್ತಾನ ತೆಗೆದುಕೊಳ್ಳಿ, ಪಾಕ್​, ಬಾಂಗ್ಲಾದೇಶ ಮತ್ತು ಭಾರತ ನಾವೆಲ್ಲರೂ ಒಂದೇ ಜೀನ್ಸ್ (ವಂಶವಾಹಿ)ನವರು. ನಾವೆಲ್ಲರೂ ಅಣ್ಣ-ತಮ್ಮಂದಿರು. ಅಲ್ಲಿಯವರು ಇಲ್ಲಿಗೆ ಬಂದ್ರೆ, ಅಲ್ಲಿಯವರು ಎಂದು ಗೊತ್ತಾಗುವುದಿಲ್ಲ. ಏಕೆಂದರೆ ನಾವೆಲ್ಲರು ಒಂದೆ. ವಾತಾವರಣ, ಉಷ್ಣಾಂಶ ಎಲ್ಲವೂ ಸಹ ಒಂದೇ ಆಗಿದೆ. ಆದರೆ, ಪಾಕಿಸ್ತಾನದಲ್ಲಿಂದು ದಿನಕ್ಕೆ 300 ರಿಂದ 400 ಕರೊನಾ ಪ್ರಕರಣಗಳು ಮಾತ್ರ ಬರುತ್ತಿದೆ. ಆದರೆ ನಮ್ಮಲ್ಲಿ ದಿನಕ್ಕೆ 70 ಸಾವಿರಕ್ಕೂ ಅಧಿಕ ಪ್ರಕರಣಗಳು ಬರುತ್ತಿವೆ ಎಂದು ಪಾಕಿಸ್ತಾನವನ್ನು ಹೊಗಳಿದರು.

    ಇದನ್ನೂ ಓದಿ: ಪ್ರತಿ ವರ್ಷ ತಪ್ಪದೇ ನಟ ವಿಷ್ಣುವರ್ಧನ್​ ಬರ್ತಡೇ ಆಚರಿಸುತ್ತಿದ್ದ ಅಭಿಮಾನಿ ನೇಣಿಗೆ ಶರಣು

    ಕರೊನಾ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದು ಹೀಗೆ ಮುಂದುವರಿಯಲಿದೆ. ಇವರಿಂದ ಏನು ಆಗಲ್ಲ ಎಂದು ಟೀಕಿಸುವ ಭರದಲ್ಲಿ ಕಾಂಗ್ರೆಸ್​ ನಾಯಕರು ಪಾಕ್​ ಪರ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ನವಲಗುಂದ ಪಟ್ಟಣದಲ್ಲಿ ನಡೆದ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಈ ಪ್ರಸಂಗ ಜರುಗಿದೆ. (ದಿಗ್ವಿಜಯ ನ್ಯೂಸ್​)

    ಇಂದು ವಿನಾಯಕ್ ಜೋಷಿ-ವರ್ಷಾ ಬೆಳವಾಡಿ ಮದುವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts