More

    ಧರ್ಮಜಾಗೃತಿಗೆ ಶ್ರಮಿಸಿದ್ದ ಸೋಮಶೇಖರ ಶ್ರೀಗಳು

    ನರೇಗಲ್ಲ: ಅಬ್ಬಿಗೇರಿ ಹಿರೇಮಠದ ಲಿಂ. ಸೋಮಶೇಖರ ಸ್ವಾಮೀಜಿ ಅವರ ಅಗಲಿಕೆ ಬಹಳ ನೋವು ಉಂಟುಮಾಡಿದೆ. ಶ್ರೀಗಳು ಧರ್ಮಜಾಗೃತಿ, ಗುರು ಪರಂಪರೆ ಉಳಿಸಿ ಬೆಳೆಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಶ್ರೀಗಳ ಸ್ಥಾನಕ್ಕೆ ಸಿದ್ಧರಬೆಟ್ಟದ ವೀರಭದ್ರ ಸ್ವಾಮೀಜಿಗಳನ್ನು ನೇಮಿಸಲಾಗಿದೆ. ಅವರ ನೇತೃತ್ವದಲ್ಲಿ ಗ್ರಾಮಸ್ಥರು ಧರ್ಮಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

    ಸಮೀಪದ ಅಬ್ಬಿಗೇರಿ ಗ್ರಾಮದ ನರೇಗಲ್ಲ ರಸ್ತೆಯಲ್ಲಿರುವ ನೂತನ ಹಿರೇಮಠಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿ ಅವರು ಆಶೀರ್ವಚನ ನೀಡಿದರು.

    ಲಿಂ. ಸೋಮಶೇಖರ ಶಿವಾಚಾರ್ಯರು ರಂಭಾಪುರಿ ಪೀಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಪ್ರತಿ ವರ್ಷ ಪೀಠದಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಅಬ್ಬಿಗೇರಿಯಿಂದ ವಿಶೇಷ ಅನ್ನ ಪ್ರಸಾದವನ್ನು ತಯಾರಿಸಿಕೊಂಡು ಬರುತ್ತಿದ್ದರು. ಅಬ್ಬಿಗೇರಿಯನ್ನು ಕೇಂದ್ರವಾಗಿಸಿಕೊಂಡು ರಾಜ್ಯದ ಮೂಲೆ ಮೂಲೆಯಲ್ಲಿ ಭಕ್ತಗಣ ಹೊಂದುವ ಮೂಲಕ ಜನರಲ್ಲಿ ಧಾರ್ವಿುಕ ಜಾಗೃತಿಗಾಗಿ ಹಗಲಿರುಳು ಶ್ರಮಿಸುತ್ತಿದ್ದರು. ಅವರ ಅಗಲುವಿಕೆಯಿಂದ ಧಾರ್ವಿುಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಶ್ರೀಮಠದ ಭಕ್ತರು ಲಿಂ. ಸೋಮಶೇಖರ ಶಿವಾಚಾರ್ಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು, ಶ್ರೀಮಠವನ್ನು ಧಾರ್ವಿುಕ ಶಕ್ತಿ ಕೇಂದ್ರವನ್ನಾಗಿಸಲು ಶ್ರಮಿಸಬೇಕು. ಕರೊನಾ ಹಿನ್ನೆಲೆಯಲ್ಲಿ ಶ್ರೀಗಳ ಪುಣ್ಯಸ್ಮರಣೆಯನ್ನು ಸಂಕ್ಷಿಪ್ತವಾಗಿ ಮಾಡಲಾಗಿದ್ದು, ಮುಂಬರುವ ದಿನಗಳಲ್ಲಿ ಶ್ರೀಮಠದ ಎಲ್ಲ ಭಕ್ತರ ಸಮ್ಮುಖದಲ್ಲಿ ಪುಣ್ಯಸ್ಮರಣೆ ಮಾಡಲಾಗುವುದು ಎಂದರು.

    ಅಂದಪ್ಪ ವೀರಾಪೂರ, ಡಾ. ಆರ್.ಬಿ. ಬಸವರಡ್ಡೇರ, ಶಂಭುಶಾಸ್ತ್ರಿ ಮಾಳಶೆಟ್ಟಿ, ಶಿವಕುಮಾರ ಹಿರೇಮಠ, ಭರಮಪ್ಪ ಹನಮನಾಳ, ಬಸವರಾಜ ವೀರಾಪೂರ, ವೀರಪ್ಪ ಹರದಾರಿ, ಬಸವರಾಜ ಪಲ್ಲೇದ, ರವಿ ಯತ್ನಟ್ಟಿ, ಮುತ್ತಪ್ಪ ಕುಕನೂರ, ಮಂಜುನಾಥ ಹಿರೇಮಠ, ಪ್ರಭುಗೌಡ ಪಾಟೀಲ, ಮಲ್ಲಯ್ಯ ಹಿರೇಮಠ, ಗಂಗಯ್ಯ ಹಿರೇಮಠ, ಷಣ್ಮುಖಯ್ಯ ಹಿರೇಮಠ, ಮಂಜುನಾಥ ಹಲಕುರ್ಕಿ, ಮಂಜುನಾಥ ಮಾಳಶೆಟ್ಟಿ, ವೀರಪ್ಪ ಬಂಡಿಹಾಳ, ಕುಮಾರ ಭೀಮನಗೌಡ್ರ, ಕುಬೇರಪ್ಪ ಕಾಳಗಿ, ಮಲ್ಲಯ್ಯ ಮಠಪತಿ, ಶರಣಪ್ಪ ಗುಜಮಾಗಡಿ, ಮಹಾದೇವಪ್ಪ ಬಸವರಡ್ಡೇರ, ವೀರುಪಾಕ್ಷಗೌಡ ಪಾಟೀಲ, ರೇಣಪ್ಪ ಹಿರೂರ, ಮುತ್ತಪ್ಪ ಶಿವಶಿಪಂರ, ನಾಗಪ್ಪ ಬಂಡಿಹಾಳ, ಮುದಿಯಪ್ಪ ಬಂಡಿಹಾಳ, ಮಹೇಶ ಹೊಂಬಳಿ, ಅಶೋಕ ಜಕರಡ್ಡಿ, ಮಹೇಶ ಚವಡಿ, ಶಿದ್ದಪ್ಪ ಹನಮನಾಳ, ಪರಪ್ಪ ಹನಮನಾಳ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts