More

    ನಾಳೆಯಿಂದ ಹುನ್ನೂರಲ್ಲಿ ಅಂಬಾಭವಾನಿ ಜಾತ್ರೆ

    ಜಮಖಂಡಿ: ತಾಲೂಕಿನ ಹುನ್ನೂರು ಗ್ರಾಮದ ಅಂಬಾಭವಾನಿ ದೇವಸ್ಥಾನದ ಜಾತ್ರಾ ಮಹೋತ್ಸವ ಏ. 7 ರಿಂದ 5 ದಿನ ಅದ್ದೂರಿಯಾಗಿ ನಡೆಯಲಿದೆ.
    ಪ್ರಸಕ್ತ ವರ್ಷ ಭವಾನಿ ಉತ್ಸವ ಮೂರ್ತಿಯ ಶೋಭಾಯಾತ್ರೆ ಹೊಸ ರಥದಲ್ಲಿ ನಡೆಯುತ್ತಿರುವುದು ಜಾತ್ರಾ ಮಹೋತ್ಸವಕ್ಕೆ ಮೆರುಗು ತುಂಬಲಿದೆ.


    ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ನಡೆಸಲು ಹುನ್ನೂರು ಅಂಬಾಭವಾನಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಸಕಲ ಸಿದ್ಧತೆ ಕೈಗೊಂಡಿದೆ.
    ಮೊದಲ ದಿನ ಏ.7 ರಂದು ಬೆಳಗ್ಗೆ 5 ಗಂಟೆಗೆ ದೇವಿಗೆ ಪಂಚಾಮೃತ ಅಭಿಷೇಕ, ನಂತರ ಹೋಮ, ನೂತನ ರಥಕ್ಕೆ ಕಲಶಾರೋಹಣ ಕಾರ್ಯಕ್ರಮ ನಡೆಯಲಿದೆ. ಮಧುರಖಂಡಿ-ಕಮರಿಮಠ-ನಂದೇಶ್ವರದ ದುಂಡೇಶ್ವರ ಸ್ವಾಮಿಗಳು, ಶಿವಪುತ್ರಯ್ಯ ಸಿದ್ದಗಿರಿಮಠ ಸ್ವಾಮಿಗಳು, ಈಶ್ವರಯ್ಯ ಕೊಣ್ಣೂರಮಠ ಶಾಸಿಗಳು ಭಾಗವಹಿಸುವರು.


    ಗ್ರಾಮದ ವೆಂಕಟೇಶ್ವರ ಕಾಲನಿಯಲ್ಲಿರುವ ನೂತನ ರಥವನ್ನು ಸುಮಂಗಲೆಯರ ಕುಂಭ ಮತ್ತು ಆರತಿ ಹಾಗೂ ವಿವಿಧ ವಾದ್ಯಗಳ ಮೇಳದೊಂದಿಗೆ ಅಂಬಾಭವಾನಿ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಗುವುದು. ಮಧ್ಯಾಹ್ನ 12.30 ಗಂಟೆಗೆ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಹಾಪ್ರಸಾದ, ರಾತ್ರಿ 10 ಗಂಟೆಗೆ ನವಲಗುಂದದ ‘ಅಜಾತ ಶ್ರೀ ನಾಗಲಿಂಗ ಲೀಲೆ’ ನಾಟಕ ಪ್ರದರ್ಶನ ನಡೆಯಲಿದೆ.


    ಏ.8 ರಂದು ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 11ಗಂಟೆಗೆ ದೇವಿ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವುದು, ನಂತರ ಮಹಾಪ್ರಸಾದ, ರಾತ್ರಿ 10 ಗಂಟೆಗೆ ‘ಹಳ್ಳಿಯಿಂದ ದಿಲ್ಲಿಯವರೆಗೆ’ ಬೈಲಾಟ ಪ್ರದರ್ಶನ ನಡೆಯಲಿದೆ.


    ಏ.9 ರಂದು ಬೆಳಗ್ಗೆ 5ಗಂಟೆಗೆ ದೇವಿಗೆ ಪಂಚಾಮೃತ, ನಂತರ ವಿಠ್ಠಲಚಾರ್ಯ ಉಮರ್ಜಿ ಅವರಿಂದ ರಥಾಂಗ ಹೋಮ ನಡೆಯಲಿದೆ. ಸಂಜೆ 5 ಗಂಟೆಗೆ ಊರಿನ ಗುರುಹಿರಿಯರ ನೇತೃತ್ವದಲ್ಲಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮ, ಬಳಿಕ 6.30 ಗಂಟೆಗೆ ಅಂಬಾಭವಾನಿ ರಥೋತ್ಸವ ನಡೆಯಲಿದೆ. ರಾತ್ರಿ 10 ಗಂಟೆಗೆ ಗಲಗಲಿ ಹಾಗೂ ಹುನ್ನೂರ ಗ್ರಾಮದ ಮೇಳದವರಿಂದ ಚೌಡಕಿ ಪದಗಳು ನಡೆಯಲಿವೆ. ಏ. 11ರಂದು ಸಂಜೆ 6.30 ಗಂಟೆಗೆ ಕಲಶಾರೋಹಣ ನಡೆಯಲಿದೆ ಎಂದು ಜಾತ್ರಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts