More

    ಧರ್ಮಸ್ಥಳ ಸಂಘದ ಸೇವೆ ಸಾರ್ಥಕ

    ಚನ್ನಮ್ಮನ ಕಿತ್ತೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಆಯೋಜಿಸಿವ ವ್ಯಸನಮುಕ್ತ ಶಿಬಿರಗಳಿಂದ ಹಲವಾರು ಕುಟುಂಬಗಳು ನೆಮ್ಮದಿ ಕಂಡಿವೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

    ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಜಿಲ್ಲಾ ಜನಜಾಗೃತಿ ವೇದಿಕೆಗಳ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ವ್ಯಸನಮುಕ್ತ ಶಿಬಿರ, ಜನಜಾಗೃತಿ ಜಾಥಾ ಮತ್ತು ಸಮಾವೇಶದಲ್ಲಿ ಮಾತನಾಡಿದರು. ಧರ್ಮಸ್ಥಳ ಸಂಘ ಕೇವಲ ಸಾಲ ಕೊಡುವುದಷ್ಟೇ ಅಲ್ಲದೆ ನೂರಾರು ಜನೋಪಯೋಗಿ ಯೋಜನೆ ಕೈಗೆತ್ತಿಕೊಂಡಿದೆ. ದುಶ್ಚಟಮುಕ್ತ ಸಮಾಜ ನಿರ್ಮಿಸಲು ಜನಜಾಗೃತಿ ವೇದಿಕೆಯ ನಿರ್ಣಯಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

    ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ರಾಜಣ್ಣ ಕೊರವಿ ಮಾತನಾಡಿ, ಧರ್ಮಸ್ಥಳ ಸಂಘ ಜನಜಾಗೃತಿ ಪ್ರೇರಣೆಯಿಂದ ರಾಜ್ಯದಲ್ಲಿ ಸುಮಾರು 2 ಲಕ್ಷ ಜನರು ಕುಡಿಯುವುದನ್ನು ಬಿಟ್ಟಿದ್ದಾರೆ. ರಾಜ್ಯ ಸರ್ಕಾರ ಗ್ರಾಪಂಗೊಂದು ಮದ್ಯದಂಗಡಿ ತೆರೆಯಲು ಅನುಪತಿ ನೀಡಬಾರದು ಎಂದು ಆಗ್ರಹಿಸಿದರು. ಚನ್ನಮ್ಮಾಜಿಯ ವರ್ತುಲದಿಂದ ಮದ್ಯ ಸೇವನೆಯಿಂದಾಗುವ ಹಾನಿಗಳ ಕುರಿತು ನಾಮಲಕ ಹಿಡಿದು ಜಾಗೃತಿ ಮೂಡಿಸಲಾಯಿತು. ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಉದ್ಘಾಟಿಸಿದರು. ಮದ್ಯ ಸೇವನೆ ಬಿಟ್ಟವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

    ಕಲ್ಮಠದ ಮಡಿವಾಳರಾಜಯೋಗಿಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ, ಡಾ. ಜಗದೀಶ ಹಾರೂಗೊಪ್ಪ, ಸಂಜಯ ಸಿದ್ದನ್ನವರ, ಬಸವರಾಜ ಸೊಪ್ಪಿಮಠ, ವಿಠ್ಠಲ ಪಿಶೆ, ಸತೀಶ ನಾಯ್ಕ, ಸಂದೀಪ ನಾಯ್ಕ, ರಾಧಾ ಕಾದ್ರೋಳ್ಳಿ, ಕೃಷ್ಣಾಜಿ ಕುಲಕರ್ಣಿ, ರಾಜು ಮಿರ್ಜನ್ನವರ, ಉಮಾದೇವಿ ಬಿಕ್ಕಣ್ಣವರ, ಲಕ್ಷ್ಮಣ ಕುಂದಗೋಳ, ಸತೀಶ ಬಾಸ್ಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts