More

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟ ಪದಾಧಿಕಾರಿಗಳ ಕಾರ್ಯಾಗಾರ.

    ಕೂಡ್ಲಿಗಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೂಡ್ಲಿಗಿ ಘಟಕದಿಂದ ಗುಡೇಕೋಟೆ ಹಾಗೂ ಚಂದ್ರಶೇಖರಪುರ ವಲಯದ 16 ಒಕ್ಕೂಟದ ಪದಾಧಿಕಾರಿಗಳಿಗೆ ನಡೆದ ಮಾಹಿತಿ ಕಾರ್ಯಗಾರವನ್ನು ಶನಿವಾರ ತಾಲೂಕು ಯೋಜನಾಧಿಕಾರಿ ಸಂತೋಷ್ ಕುಮಾರ್ ಉದ್ಘಾಟಿಸಿದರು.

    ಇದನ್ನೂ ಓದಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜನರಿಗೆ ಸೌಲಭ್ಯ

    ನಂತರ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಹಲವಾರು ಅಭಿವೃದ್ಧಿ ಕಾರ್ಯಗಳಾಗುತ್ತಿದ್ದು, ಇದರಿಂದ ಗ್ರಾಮೀಣ ಭಾಗದ ಮಹಿಳೆಯರು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಸಬಲರಾಗುತ್ತಿರುವುದು ಶ್ಲಾಘನಿಯ ಎಂದರು.

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಯಕನಹಳ್ಳಿ ವಲಯ ಮೇಲ್ವಿಚಾರಕ ಪ್ರಕಾಶ್ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪರಿಕಲ್ಪನೆ, ಸಂಸ್ಥೆ ನಡೆದು ಬಂದ ಹಾದಿ, ಒಕ್ಕೂಟದ ಪದಾಧಿಕಾರಿಗಳಿಗೆ ಇರಬೇಕಾದ ನಾಯಕತ್ವದ ಗುಣ ಲಕ್ಷಣಗಳು ಮುಂತಾದ ಜವಾಬ್ದಾರಿಯ ಕುರಿತು ತರಬೇತಿ ನೀಡಿದರು.

    ಒಕ್ಕೂಟದ ಸಭೆ ಮಾಡುವ ವಿಧಾನ ಹಾಗೂ ಸಂಪೂರ್ಣ ಸದುಪಯೋಗ ಪಡೆಯುವ ಕುರಿತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಆಂತರಿಕ ಲೆಕ್ಕಪರಿಶೋಧಕಿ ಅಶ್ವೀನಿಕುಮಾರಿ ಒಕ್ಕೂಟದ ಉಪ ಸಮಿತಿಗಳ ಸಭೆಯಲ್ಲಿ ಪದಾಧಿಕಾರಿಗಳ ಜವಾಬ್ದಾರಿ ಮತ್ತು ವಿಧಾನಗಳ ಕುರಿತು ಮಾಹಿತಿ ನೀಡಿದರು.

    ಗುಡೇಕೋಟೆ ಹಾಗೂ ಚಂದ್ರಶೇಖರಪುರ ವಲಯ ಮೇಲ್ವಿಚಾರಕ ಜ್ಯೋತಿಗುಡಿ, ಮತ್ತು ಉಮೇಶ್ ಯೋಜನೆಯ ಮಹತ್ವ, ಹಾಗೂ ಆರ್ಥಿಕ ಚಟುವಟಿಕೆಗಳು ಮತ್ತು ಸ್ವಾವಲಂಬನೆ ಬಗ್ಗೆ ತರಬೇತಿ ನೀಡಿದರು.

    ಗುಡೇಕೋಟೆ ಮತ್ತು ಚಂದ್ರಶೇಖರಪುರ ವಲಯ ಮೇಲ್ವಿಚಾರಕ ಜ್ಯೋತಿಗುಡಿ, ಉಮೇಶ್, ವಿವಿಧ ವ್ಯಾಪ್ತಿಯ ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts