More

    ಕೋವಿಡ್ ನಿರ್ಮೂಲನೆಗೆ ಕುಕ್ಕೆ ದೇವಳದಲ್ಲಿ ಧನ್ವಂತರಿ ಹೋಮ, ಕ್ರಿಮಿಹರ ಸೂಕ್ತ ಜಪ

    ಸುಬ್ರಹ್ಮಣ್ಯ: ಕೋವಿಡ್ 19ರ ನಿರ್ಮೂಲನೆ ಹಾಗೂ ಲೋಕ ಕಲ್ಯಾಣಾರ್ಥವಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಧನ್ವಂತರಿ ಹೋಮ, ನಿರಂತರ ಧನ್ವಂತರಿ ಜಪ, ಕ್ರಿಮಿಹರ ಸೂಕ್ತ ಜಪ ಆರಂಭಗೊಂಡಿದೆ.

    ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರ ನೇತೃತ್ವದಲ್ಲಿ ಸರ್ಕಾರದ ಕೋವಿಡ್-19 ಮಾರ್ಗಸೂಚಿ ಪ್ರಕಾರ ಮೇ 14ರವರೆಗೆ ನಿರಂತರ ಕಾರ್ಯಕ್ರಮಗಳು ನಡೆಯಲಿವೆ. ಸಾರ್ವಜನಿಕರಿಗೆ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಇಲ್ಲದೇ ಇರುವುದರಿಂದ ಭಕ್ತರು ಮನೆಯಿಂದಲೇ ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ಮೇ 11ರ ತನಕ ತುಪ್ಪ ಜಪದೊಂದಿಗೆ 1 ಲಕ್ಷ ಧನ್ವಂತರಿ ಜಪ ನಡೆಯಲಿದೆ. ಈ ಅವಧಿಯಲ್ಲಿ 10 ಸಾವಿರ ಕ್ರಿಮಿಹರ ಸೂಕ್ತ ಜಪ ನೆರವೇರಲಿದೆ. ಮೇ 12ರಂದು ಧನ್ವಂತರಿಹೋಮ, 13ರಂದು ಕ್ರಿಮಿಹರ ಸೂಕ್ತ ಜಪ ಸಹಿತ ಹೋಮ ನಡೆಯಲಿದೆ. 14ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕ ಮತ್ತು ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಮತ್ತು ನೈವೇದ್ಯ ನೆರವೇರಲಿದೆ.

    ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ವನಜಾ ವಿ.ಭಟ್, ಪಿ.ಜಿ.ಎಸ್.ಎನ್.ಪ್ರಸಾದ್, ಮನೋಹರ ರೈ, ಲೋಕೇಶ್ ಮುಂಡೋಕಜೆ, ಶೋಭಾ ಗಿರಿಧರ್, ಶ್ರೀವತ್ಸ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts