More

    ‘ಹೆಡ್-ಬುಷ್’ನಲ್ಲಿ ವೀರಗಾಸೆಗೆ ಅಪಮಾನ ಮಾಡಿಲ್ಲ ಎಂದ ಧನಂಜಯ್

    ಬೆಂಗಳೂರು: ‘ಹೆಡ್​-ಬುಷ್’​ ಚಿತ್ರದಲ್ಲಿ ವೀರಗಾಸೆ ನೃತ್ಯಕ್ಕೆ ಯಾವುದೇ ರೀತಿಯ ಅಪಮಾನ ಮಾಡಿಲ್ಲ ಎಂದು ಧನಂಜಯ್​ ಹೇಳಿದ್ದಾರೆ.

    ಇದನ್ನೂ ಓದಿ: ‘ಹೆಡ್ ಬುಷ್’ ವಿರುದ್ಧ ತಿಗಳ ಸಮುದಾಯದ ಬೇಸರ; ಇಂದು ವಾಣಿಜ್ಯ ಮಂಡಳಿಗೆ ದೂರು

    ಧನಂಜಯ್​ ಅಭಿನಯದ ‘ಹೆಡ್​ ಬುಷ್’​ ಚಿತ್ರವು ಕಳೆದ ವಾರವಷ್ಟೇ ಬಿಡುಗಡೆಯಾಗಿ ಎಲ್ಲೆಡೆಯಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಮಧ್ಯೆ, ಚಿತ್ರತಂಡದವರು ವೀರಗಾಸೆ ನೃತ್ಯಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಚಿತ್ರದಲ್ಲಿ ಕರಗ ನಡೆಯುವ ಸಂದರ್ಭದಲ್ಲಿ ಧನಂಜಯ್ ಮತ್ತು ಯೋಗಿ ನೃತ್ಯ ಮಾಡುತ್ತಿರುತ್ತಾರೆ ಈ ಸಂದರ್ಭದಲ್ಲಿ ಒಂದಿಷ್ಟು ರೌಡಿಗಳು ವೀರಗಾಸೆ ವೇಷ-ಭೂಷಣವನ್ನು ತೊಟ್ಟು ಬಂದು ಧನಂಜಯ ಮೇಲೆ ಅಟ್ಯಾಕ್ ಮಾಡುತ್ತಾರೆ. ಈ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಧನಂಜಯ್​ ವೀರಗಾಸೆಯವರಿಗೆ ಹೊಡೆಯುತ್ತಾರೆ. ಹೀಗೆ ಹೊಡೆಯುವ ಮೂಲಕ ಧನಂಜಯ್ ಅವರು ವೀರಗಾಸೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ.

    ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಧನಂಜಯ್​, ‘ಎಲ್ಲಾ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಜತೆಗೆ ಯಾವುದೇ ರೀತಿ ಅವಮಾನ ಮಾಡಿಲ್ಲ ಎಂದು ಹೇಳಿದ್ದಾರೆ. ನಾನು ಚಿಕ್ಕವನಿಂದಲೂ ವೀರಗಾಸೆ ಕಲೆಯನ್ನು ನೋಡುತ್ತಾ ಬಂದಿದ್ದೇನೆ. ಆ ಕಲೆಯ ಮೇಲೆ ನನಗೆ ಅಪಾರವಾದ ಗೌರವ, ಅಭಿಮಾನ ಮತ್ತು ಹೆಮ್ಮೆ ಇದೆ. ಕರಗದ ಸಂದರ್ಭದಲ್ಲಿ ಜಯರಾಜ್ ಮೇಲೆ ಅಟ್ಯಾಕ್ ಮಾಡಲಾಗುತ್ತದೆ. ಇಲ್ಲಿ ಜಯರಾಜ್​, ವೀರಗಾಸೆಯವರನ್ನು ಹೊಡೆಯುವುದಿಲ್ಲ. ಬದಲಿಗೆ ತಮ್ಮ ಮೇಲೆ ಅಟ್ಯಾಕ್ ಮಾಡಲು ಮಾಡಲು ಬಂದಿರುವ ರೌಡಿಗಳನ್ನು ಹೊಡೆಯುತ್ತಾನೆ’ ಎನ್ನುತ್ತಾರೆ.

    ಇದನ್ನೂ ಓದಿ: ಹೆಡ್ ಬುಷ್: ಜುಜುಬಿ ಕರಗ ಎಂಬ ಪದಬಳಕೆಗೆ ತಿಗಳ ಸಮುದಾಯದ ಆಕ್ರೋಶ

    ಫೈಟ್​ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಸಾಕಷ್ಟು ಚರ್ಚೆ ಮಾಡಿಯೇ ಮಾಡಲಾಗಿದೆ ಎಂದಿರುವ ಅವರು, ‘ಈ ಫೈಟ್ ದೃಶ್ಯವನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲಿ ನಿಜವಾದ ವೀರಗಾಸೆಯವರು ಹಿಂದೆ ನಿಂತಿರುತ್ತಾರೆ. ಅಟ್ಯಾಕ್ ಮಾಡಲು ಬಂದಿರುವುದು ಮಾತ್ರ ಫೈಟ್​ ಮಾಡುತ್ತಾರೆ. ಇಲ್ಲಿ ನಕಲಿ ವೀರಗಾಸೆಯವರ ಜತೆಗೆ ಫೈಟ್​ ಮಾಡುವ ಮೂಲಕ ಅಸಲಿ ವೀರಗಾಸೆಯವರಿಗೆ ಗೌರವ ನೀಡುತ್ತಾನೆ. ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿ ಚಿತ್ರೀಕರಣ ಮಾಡಿದ್ದೇವೆ. ನಮ್ಮ ನಾಡಿನ ಹೆಮ್ಮೆಯ ಕಲೆಗೆ ಚ್ಯುತಿ ತರುವ ಯಾವುದೇ ಉದ್ದೇಶವಿಲ್ಲ’ ಎಂದು ಧನಂಜಯ್​ ಹೇಳಿದ್ದಾರೆ.

    ಆ ವೀರಭದ್ರನೇ ತಕ್ಕ ಶಾಸ್ತಿ ಮಾಡುವಂತಾಗಲೀ … ಧನಂಜಯ್ ವಿರುದ್ಧ ನೆಟ್ಟಿಗರ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts