More

  ಆ ವೀರಭದ್ರನೇ ತಕ್ಕ ಶಾಸ್ತಿ ಮಾಡುವಂತಾಗಲೀ … ಧನಂಜಯ್ ವಿರುದ್ಧ ನೆಟ್ಟಿಗರ ಆಕ್ರೋಶ

  ಬೆಂಗಳೂರು: ಧನಂಜಯ್ ಅಭಿನಯದ ಹೆಡ್​ ಬುಷ್​ ಚಿತ್ರವು ಕಳೆದ ವಾರವಷ್ಟೇ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದೆ. ಈ ಮಧ್ಯೆ, ಚಿತ್ರದಲ್ಲಿನ ಒಂದು ಪ್ರಮುಖ ದೃಶ್ಯವು ವಿವಾದಕ್ಕೀಡಾಗಿದ್ದು, ಸಾಕಷ್ಟು ಚರ್ಚೆಯಾಗುತ್ತಿದೆ.

  ಇದನ್ನೂ ಓದಿ: ಸದ್ಯದಲ್ಲೇ 200 ಕೋಟಿ ರೂ. ಕ್ಲಬ್​ಗೆ ರಿಷಭ್​ ಶೆಟ್ಟಿ ‘ಕಾಂತಾರ’

  ಚಿತ್ರದಲ್ಲೊಂದು ಕರಗದ ದೃಶ್ಯವಿದೆ. ಈ ಸಂದರ್ಭದಲ್ಲಿ ಜಯರಾಜ್​ ಪಾತ್ರ ಮಾಡಿರುವ ಧನಂಜಯ್​ ಮೇಲೆ ವೀರಗಾಸೆ ನೃತ್ಯ ಮಾಡುವವರ ಗೆಟಪ್​ನಲ್ಲಿರುವ ರೌಡಿಗಳ ಗುಂಪೊಂದು ಅಟ್ಯಾಕ್ ಮಾಡುತ್ತದೆ. ಈ ದೃಶ್ಯವು ವಿವಾದಕ್ಕೆ ಕಾರಣವಾಗಿದೆ.

  ಸಾವಿರಾರು ವರ್ಷಗಳ ಇತಿಹಾಸವಿರುವ ಮತ್ತು ದೃವಿಕ ಕಲೆಯಾದ ವೀರಗಾಸೆಗೆ ಅವಮಾನ ಮಾಡಲಾಗಿದೆ, ರೌಡಿಗಳಿಗೆ ವೀರಗಾಸೆ ವೇಷಭೂಷಣಗಳನ್ನು ತೊಡಿಸಿ ಅವರಿಗೆ ಮನಬಂದಂತೆ ಥಳಿಸುವಂತೆ ತೋರಿಸಲಾಗಿದೆ, ಅವರಿಗೆ ಶೂಕಾಲಿನಲ್ಲಿ ಒದೆಯುವಂತ ದೃಶ್ಯಗಳನ್ನು ತೋರಿಸಿ ವೀರಭದ್ರನಿಗೆ ಅವಮಾನ ಮಾಡಲಾಗಿದೆ. ವೀರಗಾಸೆ ವೇಷ-ಭೂಷಣ ತೊಟ್ಟವರು ಸಹ ಶೂ ಧರಿಸಿ ಫೈಟ್​ ಮಾಡುವುದನ್ನು ತೋರಿಸಲಾಗಿದೆ. ವೀರಭದ್ರನ ಹಿನ್ನೆಲೆ ತಿಳಿಯದೆ ಇಂಥ ಕೆಲಸ ಮಾಡಲಾಗಿದ್ದು, ಸಂಸ್ಕೃತಿಯ ಅರಿವಿಲ್ಲದವರು ಇಂಥದ್ದೊಂದು ಅಪಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

  ಇದನ್ನೂ ಓದಿ: VIDEO: ಪುನೀತ್​ ರಾಜ್​ಕುಮಾರ್ ನೆನಪಿನಲ್ಲಿ ‘ಬೊಂಬೆ ಹೇಳುತೈತೆ’ ಹಾಡು ಹಾಡಿದ ಮಲಯಾಳಂ ನಟ ಜಯರಾಮ್…

  ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಕೆಲವರು ಬಹಿರಂಗವಾಗಿ ತಮ್ಮ ನೋವನ್ನು ತೋಡಿಕೊಂಡಿದ್ದು, ಸಾವಿರಾರು ವರ್ಷಗಳ ಇತಿಹಾಸವಿರುವ ವೀರಗಾಸೆ ಕಲೆಗೆ ಕಳಂಕ ತಂದ ಧನಂಜಯ್​ಗೆ  ವೀರಭದ್ರನೇ ತಕ್ಕ ಶಾಸ್ತಿ ಮಾಡುವಂತಾಗಲೀ ಎಂದು ತಮ್ಮ ಆಕ್ರೋಶವನ್ನು ಸೋಷಿಯಲ್​ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ.

  ನಾನು ಮತ್ತು ನನ್ನ ತಂದೆ ಶ್ರೀಮಂತರಲ್ಲ! ಜಾಹ್ನವಿ ಕಪೂರ್​ ಅಚ್ಚರಿಯ ಹೇಳಿಕೆ ಹಿಂದಿದೆ ಈ ಕಾರಣ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts