More

    ಫಕೀರೇಶ್ವರ ಜಾತ್ರೆಯಲ್ಲಿ ಬೆಲ್ಲ ಸವಿದ ಭಕ್ತರು

    ಶಿರಹಟ್ಟಿ: ಫಕೀರೇಶ್ವರ ಮಠದ ಜಾತ್ರೋತ್ಸವ ಪ್ರಯುಕ್ತ ಶನಿವಾರ ಅಪಾರ ಭಕ್ತರ ಜಯಘೋಷಗಳ ಮಧ್ಯೆ ಕಡುಬಿನ ಕಾಳಗ ಸಂಭ್ರಮದಿಂದ ನೆರವೇರಿತು.

    ಮಠದ ಕತೃ ಗದ್ದುಗೆ ಎದುರಿಗೆ ನಿರ್ಮಿಸಿದ ಮಂಟಪಕ್ಕೆ ಆಗಮಿಸಿದ ಪೀಠಾಧಿಪತಿ ಶ್ರೀ ಫಕೀರಸಿದ್ಧರಾಮ ಸ್ವಾಮೀಜಿ ಆಶ್ವಾರೂಢರಾಗಿ ಕಡುಬಿನ ಕಾಳಗಕ್ಕೆ ಅಣಿಯಾಗುವ ಮೂಲಕ ಬೆಲ್ಲ ಎಸೆಯಲು ಆರಂಭಿಸಿದಂತೆ ಭಕ್ತರೆಲ್ಲ ‘ಫಕೀರೇಶ್ವರ ಮಹಾರಾಜ ಕೀ ಜೈ’ ಎಂದು ಘೋಷಣೆ ಮೊಳಗಿಸಿದರು. ಸಂಪ್ರದಾಯದಂತೆ ಶ್ರೀಗಳು ಮಠದ ಆವರಣದಲ್ಲಿರುವ ಲಿಂಗೈಕ್ಯೆ ಶ್ರೀಗಳ 12 ಗದ್ದುಗೆ ಸುತ್ತ ಪ್ರದಕ್ಷಿಣೆ ಹಾಕುತ್ತ ಬೆಲ್ಲದ ಚೂರುಗಳನ್ನು ಎಸೆಯುತ್ತಿದ್ದಂತೆ ಭಕ್ತರು ಹರಸಾಹಸಪಟ್ಟು ಅವುಗಳನ್ನು ಹಿಡಿದು ‘ತಮಗೆ ಅಜ್ಜನ ಬೆಲ್ಲ ಸಿಕ್ಕಿತು’ ಎಂದು ಖುಷಿ ಪಟ್ಟರು. ಬೆಲ್ಲವನ್ನು ತಾವು ಸವಿದು ಬೆಲ್ಲ ಸಿಗದೆ ಹತಾಶರಾದ ಅಕ್ಕಪಕ್ಕದ ಜನರಿಗೂ ನೀಡಿದರು.

    ಕಡುಬಿನ ಕಾಳಗ ಉತ್ಸವದ ಮುಂದೆ ಅಲಂಕೃತ ಆನೆ ಹೆಜ್ಜೆ ಹಾಕುತ್ತ ಸಾಗಿದರೆ ಹಿಂದೆ ಕುದುರೆ, ಒಂಟೆ, ಬಂಡಿಯಲ್ಲಿ ನಗಾರಿ, ಜಾಂಝ್, ಡೊಳ್ಳು ಕುಣಿತ ಉತ್ಸವಕ್ಕೆ ಮೆರುಗು ನೀಡಿದವು. ನಾಲ್ಕು ಸುತ್ತು ಪ್ರದಕ್ಷಿಣೆ ಮುಗಿಯುತ್ತಿದ್ದಂತೆ ಕೊನೆಯ ಸುತ್ತಿನಲ್ಲಿ ಶ್ರೀಗಳು ಪೂರ್ವದ್ವಾರದಿಂದ ಕುದುರೆ ಮೇಲೆ ರಭಸವಾಗಿ ಬರುತ್ತಿದ್ದಂತೆ ಸಂಪ್ರದಾಯದಂತೆ ಮಠದ ಭಕ್ತರಾದ ಅತ್ತಾರ ಕುಟುಂಬಸ್ಥರು ಸಿದ್ಧಪಡಿಸಿದ ಗುಲಾಲು ಎರಚುತ್ತಿದ್ದಂತೆ ಶ್ರೀಗಳು ಮಠಕ್ಕೆ ಹೋಗುವ ಮೂಲಕ ಕಡುಬಿನ ಕಾಳಗ ಉತ್ಸವ ಸಂಪನ್ನಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts