More

    ಬಪ್ಪನಾಡು ದೇವಿಗೆ 2 ಲಕ್ಷ ಚೆಂಡು ಮಲ್ಲಿಗೆ

    ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ರಥೋತ್ಸವ ಪೂರ್ವಭಾವಿಯಾಗಿ ನಡೆಯುವ ಶ್ರೀದೇವಿಯ ಶಯನೋತ್ಸವಕ್ಕೆ ಈ ಬಾರಿ 55 ಸಾವಿರಕ್ಕೂ ಅಧಿಕ ಅಟ್ಟೆ ಮಲ್ಲಿಗೆ ಸಮರ್ಪಣೆಯಾಗಿದೆ.

    ಶುಕ್ರವಾರ ಹಗಲು ರಥೋತ್ಸವ ನಡೆಯಿತು. ಸಾಯಂಕಾಲದಿಂದ ರಾತ್ರಿವರೆಗೆ ಶಯನೋತ್ಸವಕ್ಕಾಗಿ ದೇವಳದ ಪ್ರಾಂಗಣ ಹಾಗೂ ಹೊರ ಪ್ರಾಂಗಣದಲ್ಲಿ ಮಲ್ಲಿಗೆ ಸ್ವೀಕರಿಸಲಾಯಿತು. ಕಳೆದ ಬಾರಿ ಕೋವಿಡ್ ಕಾರಣದಿಂದ ಮಲ್ಲಿಗೆ ಸಮರ್ಪಿಸಲಾಗದವರು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸಮರ್ಪಿಸಿದರು. ಹೊರರಾಜ್ಯದ ಭಕ್ತರೂ ಸೇರಿದಂತೆ ಜಾತ್ರೆಗೆ ಸ್ವತಃ ಬರಲು ಸಾಧ್ಯವಾಗದಿದ್ದವರು ಸಂಬಂಧಿಕರು, ವ್ಯಾಪಾರಿಗಳ ಮೂಲಕ ಹೂವನ್ನು ಕ್ಷೇತ್ರಕ್ಕೆ ತಲುಪಿಸಿದರು.

    ಜಾತ್ರೆ ಮುನ್ನಾ ದಿನದಂದು ಬಲಿ ಉತ್ಸವ ಪೂಜೆ ಮುಗಿದ ಬಳಿಕ ದೇವಿಯ ಶಯನೋತ್ಸವ ಆಚರಿಸಲಾಗುತ್ತದೆ. ಭಕ್ತರು ಸಮರ್ಪಿಸಿದ ಎಲ್ಲ ಮಲ್ಲಿಗೆ ದಂಡೆಗಳನ್ನು ಕ್ಷೇತ್ರದ ಗರ್ಭಗುಡಿಯಲ್ಲಿರಿಸಿ ಬಳಿಕ ಕವಾಟ ಬಂಧನ ನಡೆಸಲಾಗುತ್ತದೆ. ಶನಿವಾರ ಮುಂಜಾನೆ ವಿಶೇಷ ಪ್ರಾರ್ಥನೆಯೊಂದಿಗೆ ಗಂಟೆ ಬಾರಿಸಿ ಬಾಗಿಲು ತೆರೆದು, ದೇವಿಗೆ ಪೂಜೆ ಪುನಸ್ಕಾರ ನಡೆಸಿ ಭಕ್ತರಿಗೆ ಪ್ರಸಾದ ರೂಪದಲ್ಲಿ ಮಲ್ಲಿಗೆ ನೀಡಲಾಗುತ್ತದೆ.

    ಶನಿವಾರ ರಾತ್ರಿ ಓಕುಳಿ ಬಲಿ, ಪೇಟೆ ಸವಾರಿ, ಸಸಿಹಿತ್ಲು ಭಗವತಿ ಪರಿವಾರ ಶಕ್ತಿಗಳ ಆಗಮನ, ಮಹಾರಥೋತ್ಸವ, ಸುಡುಮದ್ದು ಪ್ರದರ್ಶನ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts