More

    ತಾಲ್ಲೂಕಿನಲ್ಲಿ ನಿಲ್ಲದ ಬೆಂಕಿ ಪ್ರಕರಣಗಳು / ಅರಣ್ಯ ಮತ್ತು ರೈತರ ತೋಟಗಳಿಗೆ ಬೆಂಕಿ

    ವಿಜಯಾವಣಿ ಸುದ್ದಿಜಾಲ ಕೋಲಾರ
    ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಾದ್ಯಂತ ನಿರಂತರವಾಗಿ ಅರಣ್ಯ ಪ್ರದೇಶ ಮತ್ತು ಖಾಸಗಿ ಜಮೀನುಗಳಲ್ಲಿ ಬೆಳೆದು ನಿಂತಿರುವ ನೀಲಗಿರಿ, ಮಾವು ಹಾಗೂ ಮುಂತಾದ ತೋಟಗಳಿಗೆ ಬೆಂಕಿ ಬಿದ್ದು, ಸಾವಿರಾರು ಹೆಕ್ಟೇರ್ ಪ್ರದೇಶವು ಬೆಂಕಿಗೆ ಆಹುತಿಯಾಗುತ್ತಿದೆ.

    ಆಕಸ್ಮಿಕವಾಗಿ ಬೀಳುವ ಬೆಂಕಿಯಿAದ ಲಕ್ಷಾಂತರ ರೂ.ಗಳು ರೈತರಿಗೆ ನಷ್ಟವಾಗುತ್ತಿದೆ. ಇದರ ಜೊತೆಗೆ ಅರಣ್ಯಕ್ಕೆ ಬೆಂಕಿ ಬೀಳುತ್ತಿರುವುದನ್ನು ಸರ್ಕಾರಕ್ಕೂ ಕೋಟ್ಯಾಂತರ ರೂ.ಗಳ ನಷ್ಟ ಉಂಟಾಗುತ್ತಿದೆ.

    ಸರ್ಕಾರ ಲಕ್ಷಾಂತರ ರೂ.ಗಳ ಅನುದಾನದಿಂದ ಅರಣ್ಯ ಪ್ರದೇಶಗಳಲ್ಲಿ ಗಿಡಮರಗಳನ್ನು ಬೆಳೆಸುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ಮಳೆ ಇಲ್ಲದೆ ಗಿಡಗಳ ಕೆಳಗೆ ಒಣಗಿದ ಎಲೆ, ಹುಲ್ಲು ಮತ್ತು ಗಿಡಗಂಟೆಗಳಿಗೆ ಬೆಂಕಿ ಬಿದ್ದು, ಅರಣ್ಯ ಪ್ರದೇಶಗಳಲ್ಲಿ ಇರುವ ನಾನಾ ರೀತಿಯ ಮರಗಳು ಬೆಂಕಿಗೆ ಆಹುತಿಯಾಗುತ್ತಿವೆ.

    ಇದರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂ.ಗಳ ನಷ್ಟ ಸಂಭವಿಸುತ್ತಿದೆ. ಶ್ರೀನಿವಾಸಪುರ ತಾಲ್ಲೂಕಿಗೆ ಮಾತ್ರ ಸೀಮಿತವಾಗುತ್ತಿಲ್ಲ. ಇಡೀ ಜಿಲ್ಲೆಯಾದ್ಯಂತ ಅಲ್ಲಲ್ಲಿ ಬೆಂಕಿ ಪ್ರಕರಣಗಳು ಕಾಣಿಸಿಕೊಂಡಿವೆ. ಮಾವಿನ ತೋಟಗಳಿಗೆ ಬೆಂಕಿ ಬೀಳುವುದರಿಂದ ಇನ್ನೇನು ಫಸಲು ಜೂನ್ ತಿಂಗಳಿನಲ್ಲಿ ಮಾರುಕಟ್ಟೆಗೆ ಪ್ರವೇಶ ಮಾಡುವ ಮಾವು ಬೆಂಕಿಗೆ ಆಹುತಿಯಾಗುತ್ತಿವೆ.

    ರೈತ ವಾರ್ಷಿಕ ಬೆಳೆಯಾದ ಮಾವನ್ನೇ ನಂಬಿದ್ದು, ಹವಾಮಾನ ವೈಫರೀತ್ಯಾ, ಕೀಟಬಾದೆಗಳಿಂದ ಮುಕ್ತಿಗೊಳ್ಳುವುದೇ ಕಷ್ಟ ಕೆಲಸವಾಗಿರುವಾಗ ಆಕಸ್ಮಿಕ ಬೆಂಕಿ ಬಿದ್ದು, ಇಡೀ ತೋಟವನ್ನು ಬೆಂಕಿ ಆಹುತಿ ಮಾಡಿಕೊಂಡು ವಾರ್ಷಿಕ ಬೆಳೆಗೆ ನಂಬಿ ಕುಳಿತಿರುವ ರೈತರ ಮೇಲೆ ಬಂಡೆ ಎಳೆದಂತೆ ಮಾಡುತ್ತಿದೆ.

    ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ಬೇಸಿಗೆ ಕಾಲದಲ್ಲಿ ಬೆಂಕಿ ಬೀಳುವುದರ ಬಗ್ಗೆ ರೈತರಲ್ಲಿ ಅರಿವು ಮೂಡಿವುದು ಮತ್ತು ಅರಣ್ಯ ಕಾವಲುಗಾರರನ್ನು ಹೆಚ್ಚಾಗಿ ನೇಮಿಸಿ ಬೆಂಕಿ ಬಿದ್ದ ತಕ್ಷಣ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿ ಬೆಂಕಿಯನ್ನು ನಂದಿಸುವ ಕೆಲಸ ಮಾಡಿದರೆ ಸ್ವಲ್ಪ ಮಟ್ಟಿಗೆ ತಡೆಯಬಹುದು ಎಂಬುದು ರೈತರ ಅಭಿಪ್ರಾಯವಾಗಿದೆ.

    ಶ್ರೀನಿವಾಸಪುರ ತಾಲ್ಲೂಕಿನಲ್ಲಿ ದಳಸನೂರು ಮತ್ತು ಪಾಳ್ಯ ಸಮೀಪದ ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದು, ಸುಮಾರು ೨೦ ಸಾವಿರ ಹೆಕ್ಟೇರ್‌ನಲ್ಲಿ ವಿವಿಧ ಜಾತಿಯ ೫ ಸಾವಿರಕ್ಕೂ ಹೆಚ್ಚು ಮರಗಳು ಸುಟ್ಟು ಕರಕಲಾಗಿವೆ.

    ಬಾಕ್ಸ್
    ಅರಣ್ಯ ಪ್ರದೇಶಗಳಿಗೆ ಬೆಂಕಿ ಬೀಳುವುದರಿಂದ ಅಕ್ಕ ಪಕ್ಕದಲ್ಲಿ ರೈತರ ಮಾವಿನ ತೋಟಗಳು ಇದ್ದು, ಈ ಬೆಂಕಿ ಮಾವಿನ ತೋಟಗಳಿಗೆ ಆವರಿಸಿಕೊಳ್ಳುತ್ತಿದೆ. ಗ್ರಾಮಗಳಿಂದ ಒಂದು ಎರಡು ಕಿಲೋಮೀಟರ್ ದೂರದಲ್ಲಿ ರೈತರ ಮಾವಿನ ತೋಟಗಳು ಇರುವುದರಿಂದ ತೋಟಕ್ಕೆ ಬೆಂಕಿ ಬಿದ್ದರೆ ರೈತರ ಗಮನಕ್ಕೆ ಬರುವ ಒಳಗಾಗಿ ತೋಟ ಸಂಪೂರ್ಣವಾಗಿ ಭಸ್ಮವಾಗಿರುತ್ತವೆ.

    ಚಿತ್ರ ೨೫ ಕೆ.ಎಲ್.ಆರ್. ೦೫ : ಪಾಳ್ಯ ಸಮೀಪದ ಅರಣ್ಯ ಪ್ರದೇಶಕ್ಕೆ ಹಾಡುಹಗಲೇ ಬೆಂಕಿ ಬಿದ್ದಿರುವುದು

    ತಾಲ್ಲೂಕಿನಲ್ಲಿ ನಿಲ್ಲದ ಬೆಂಕಿ ಪ್ರಕರಣಗಳು / ಅರಣ್ಯ ಮತ್ತು ರೈತರ ತೋಟಗಳಿಗೆ ಬೆಂಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts