More

    ರಾಮನ ಪಟ್ಟಾಭಿಷೇಕಕ್ಕೆ ಭಕ್ತರ ಸಂಭ್ರಮ

    ಹೊಳೆಹೊನ್ನೂರು: ಅಯೋಧ್ಯೆ ಬಾಲರಾಮ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಗ್ರಾಮಾಂತರ ಹಳ್ಳಿಗಳ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಪ್ರಮುಖ ದೇವಸ್ಥಾನಗಳಲ್ಲಿ ಗ್ರಾಮ ಸಮಿತಿಗಳೇ ಮುಂದೆ ನಿಂತು ಪೂಜಾ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಸಿಕೊಟ್ಟರು.
    ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಮ ತಾರಕ ಅಷ್ಟೋತ್ತರ ಪಠಭದೊಂದಿಗೆ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಕ್ತರಿಗೆ ಪಾನಕ, ಕೋಸಂಬರಿ ವಿತರಿಸಲಾಯಿತು. ಹೊಳೆಹೊನ್ನೂರಿನ ನೃಪತುಂಗ ವೃತ್ತದಲ್ಲಿ ಶ್ರೀರಾಮ ಫೋಟೊಗೆ ಪುಷ್ಪಾರ್ಚನೆ ಸಲ್ಲಿಸಿದರೆ, ಯಡೇಹಳ್ಳಿಯಲ್ಲಿ ಚಂಡೆ ಮೇಳದೊಂದಿಗೆ ಮಹಿಳೆಯರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಂಬ ಮೇಳದ ಮೆರವಣಿಗೆ ನಡೆಸಿ ನಂದಿ ಬಸವೇಶ್ವರ ಹಾಗೂ ಕರಿಬಸವೇಶ್ವರ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಹೊಳಿಗೆ ಊಟ ಸವಿದರು.
    ಮೈದೊಳಲಿನಲ್ಲಿ ಆಂಜನೇಯ ಸ್ವಾಮಿಗೆ ಬೆಳ್ಳಿ ಅಲಂಕಾರ ನೆರವೇರಿಸಿ ಗ್ರಾಮಸ್ಥರಿಗೆ ಲಾಡು, ಪಾಯಸದ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಮಲ್ಲಾಪುರದ ಗುಡ್ಡದ ಮಲ್ಲೇಶ್ವರ ಸ್ವಾಮಿ ದೇವಾಸ್ಥಾನದಲ್ಲಿ ದೊಡ್ಡ ಪರದೆ ಅಳವಡಿಸಿ ಅಯೋಧ್ಯೆ ಬಾಲರಾಮ ಪ್ರತಿಷ್ಠಾಪನೆಯ ನೇರ ಪ್ರಸಾರ ವೀಕ್ಷಿಸಿಲು ಅನುವು ಮಾಡಿಕೊಡಲಾಗಿತ್ತು. ಆನವೇರಿಯ ಆಂಜನೇಯ ಸ್ವಾಮಿ ಹಾಗೂ ಹಿರಿ ಮಾವುರದಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು. ಸೈದರಕಲ್ಲಹಳ್ಳಿಯ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಗೆ ಫಲ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.
    ಹೊಳಲೂರಿನ ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ಹೊಸಕೊಪ್ಪದ ಪಿಳ್ಳಮ್ಮ ದೇವಾಸ್ಥಾನದ ಆವರಣದಲ್ಲಿ ಪಾನಕ ಕೋಸಂಬರಿ ವಿತರಣೆ, ಆಲದಹಳ್ಳಿ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು. ಅರಹತೊಳಲು ಕೈಮರ ವೃತ್ತದಲ್ಲಿ ಯುವಕರು ಪಾನಕ, ಕೋಸಂಬರಿ ಹಂಚಿ ರಾಮೋತ್ಸವ ಆಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts