More

    ಅಭಿವೃದ್ಧಿ ಮಾಡಿದರೂ ಜನತೆ ಮನ್ನಣೆ ನೀಡಲಿಲ್ಲ

    ಮಾನ್ವಿ: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಗಮನ ಹರಿಸಿದರೂ ಜನರು ಚುನಾವಣೆಯಲ್ಲಿ ಬೆಂಬಲಿಸಲಿಲ್ಲ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಬೇಸರ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಮೋದಿಯಿಂದ ದೇಶಕ್ಕೆ ಜಾಗತಿಕ ಮನ್ನಣೆ

    ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚುನಾವಣೆಯಲ್ಲಿ ನನಗೆ 25,990 ಮತಗಳು ಬಂದಿದ್ದು, ಜೆಡಿಎಸ್ ಮುಖಂಡರ, ಕಾರ್ಯಕತರ ಶ್ರಮವನ್ನು ಮರೆಯುವುದಿಲ್ಲ.

    ಆಡಳಿತ ಭವನ ಕಟ್ಟಡ ನಿರ್ಮಾಣ

    5 ವರ್ಷ ಕ್ಷೇತ್ರದಲ್ಲಿ ಎಲ್ಲ ಸಮುದಾಯದವರನ್ನು ಸಹೋದರಂತೆ ಕಂಡಿದ್ದೇನೆ. ಕ್ಷೇತ್ರದಲ್ಲಿ ಯಾವುದೇ ಗಲಾಟೆಗೆ ಆಸ್ಪದ ನೀಡಿಲ್ಲ. 20 ವರ್ಷದಲ್ಲಿ ಆಗದಿದ್ದ ತಾಲೂಕು ಆಡಳಿತ ಭವನ ಕಟ್ಟಡ ನಿರ್ಮಾಣಕ್ಕೆ ಸ್ಥಳ ಮಂಜೂರು ಮಾಡಿಸಿದ್ದೇನೆ.

    ಸಿರವಾರ ಬಸ್ ನಿಲ್ದಾಣ ನಿರ್ಮಾಣ ಸೇರಿ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೂ ಜನರು ಗೆಲ್ಲಿಸಲಿಲ್ಲ ಎಂದು ಹೇಳಿದರು.

    ಕ್ಷೇತ್ರದ ಜನರಿಗೆ ನ್ಯಾಯ ಒದಗಿಸಲು ಶ್ರಮಿಸುವೆ

    ಶಾಸಕನಾದ ಮೇಲೆ ಕ್ಷೇತ್ರದ ರೈತರಿಗೆ ಎರಡು ಬೆಳೆಗಳಿಗೆ ನೀರು ತಲುಪಿಸುವಲ್ಲಿ ಶ್ರಮಿಸಿದ್ದು, ಮುಂದಿನ ದಿನಗಳಲ್ಲಿ ಕೂಡ ಕ್ಷೇತ್ರದ ಜನರಿಗೆ ನ್ಯಾಯ ಒದಗಿಸಲು ಶ್ರಮಿಸುತ್ತೇನೆ. ನನಗೆ ಇನ್ನೂ ವಯಸ್ಸಾಗಿಲ್ಲ.

    ಕ್ಷೇತ್ರದಲ್ಲಿ ಜೆಡಿಎಸ್ ತಳ ಮಟ್ಟದಿಂದ ಸಂಘಟಿಸುವೆ. ಶಾಸಕನಿಲ್ಲದಿದ್ದರು ವಿರೋಧ ಪಕ್ಷದಲ್ಲಿದ್ದು ಜನರ ಸೇವೆ ಮಾಡುವುದರೊಂದಿಗೆ ರೈತರ ಹಿತ ಕಾಪಾಡುತ್ತೇನೆ ಎಂದು ತಿಳಿಸಿದರು.

    ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಗೌಡ ಬಲ್ಲಟಗಿ, ಯುವ ಘಟಕದ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರನಾಯಕ, ಮುಖಂಡರಾದ ಜಂಬುನಾಥ ಯಾದವ, ಖಲೀಲ್ ಖುರೇಷಿ, ಇಸ್ಮಾಯಿಲ್ ಸಾಬ್, ಶ್ರೀಧರ ಸ್ವಾಮಿ, ಪುರಸಭೆ ಸದಸ್ಯ ಶರಣಪ್ಪ ಮೇದಾ, ಹುಸೇನ್ ಬಾಷಾ, ಈರಣ್ಣ ಮರ್ಲಟ್ಟಿ, ಶಕೀಲ್ ಬೇಗ್, ರವಿಕುಮಾರ, ಹನುಮಂತ ಭೋವಿ, ಮಲ್ಲಪ್ಪ ಹೂಗಾರ, ಶೌಕತ್‌ಅಲಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts